ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Rishabh Pant : ಡಿವೈಡರ್‌ಗೆ ಕಾರು ಡಿಕ್ಕಿ: ಕ್ರಿಕೆಟಿಗ ರಿಷಬ್ ಪಂತ್‌ಗೆ ಗಂಭೀರ ಗಾಯ, ಸುಟ್ಟು ಕರಕಲಾದ ಕಾರು

|
Google Oneindia Kannada News

ನವದೆಹಲಿ, ಡಿ. 30: ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ ಅವರ ಕಾರು ಅಪಘಾತಕ್ಕೆ ಈಡಾಗಿದ್ದು, ಅವರಿಗೆ ಸುಟ್ಟ ಗಾಯಗಳಾಗಿವೆ. ರಿಷಬ್ ಪಂತ್ ಉತ್ತರಾಖಂಡದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಅವಘಡ ಸಂಭವಿಸಿದೆ.

ಉತ್ತರಾಖಂಡದ ರೂರ್ಕಿ ಬಳಿ ಅಪಘಾತಕ್ಕೀಡಾದ ತನ್ನ ಮರ್ಸಿಡಿಸ್ ಕಾರನ್ನು ರಿಷಬ್ ಪಂತ್ ಓಡಿಸುತ್ತಿದ್ದರು ಎಂದು ಆರಂಭಿಕ ವರದಿಗಳು ಸೂಚಿಸುತ್ತವೆ. ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Rishabh Pant Car Accident : Indian Cricketer injured after his car collides with divider

25 ವರ್ಷ ವಯಸ್ಸಿನ ಕ್ರಿಕೆಟಿಗ ರಿಷಬ್ ಪಂತ್ ಅವರಿಗೆ ಸುಟ್ಟ ಗಾಯಗಳಾಗಿದ್ದು, ಅವರ ಸ್ಥಿತಿ ಗಂಭೀರವಾಗಿಲ್ಲ ಎಂದು ಸದ್ಯಕ್ಕೆ ಪೊಲೀಸರು ತಿಳಿಸಿದ್ದಾರೆ. ಕಾರು ಚಾಲನೆ ಮಾಡುವಾಗ ಕಾರಿನ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ ಎಂದು ಉತ್ತರಾಖಂಡ್ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಹೇಳಿದ್ದಾರೆ.

ಅಪಘಾತದ ವೇಳೆ ರಿಷಬ್ ಪಂತ್ ಕಾರಿನಲ್ಲಿ ಒಬ್ಬರೇ ಇದ್ದು, ಬೆಂಕಿಯಿಂದ ಪಾರಾಗಲು ಕಿಟಕಿ ಒಡೆದಿದ್ದಾರೆ ಎಂದು ವರದಿಯಾಗಿದೆ. ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹತ್ತಿಕೊಂಡಿದ್ದು, ಕಾರು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.

Rishabh Pant Car Accident : Indian Cricketer injured after his car collides with divider

ರಿಷಬ್ ಪಂತ್ ಅವರನ್ನು ಸದ್ಯ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಿಷಬ್ ಪಂತ್ ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿದ್ದ ಭಾರತ ತಂಡದ ಭಾಗವಾಗಿದ್ದರು. ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧದ ಸರಣಿಗೆ ಪ್ರಕಟಿಸಲಾಗಿದ್ದ ಟಿ20ಐ ತಂಡದಿಂದ ಅವರನ್ನು ಕೈಬಿಡಲಾಗಿತ್ತು.

ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಅವರ ಕುಟುಂಬದೊಂದಿಗೆ ದುಬೈನಲ್ಲಿ ರಿಷಬ್ ಪಂತ್ ಈ ಬಾರಿ ಕ್ರಿಸ್‌ಮಸ್ ಆಚರಿಸಿದ್ದಾರೆ. ಈ ಚಿತ್ರಗಳನ್ನು ಧೋನಿ ಪತ್ನಿ ಸಾಕ್ಷಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಎಂಎಸ್ ಧೋನಿ ನಿವೃತ್ತಿಯ ನಂತರ ರಿಷಬ್ ಪಂತ್ ಅವರು ಎಲ್ಲಾ ಸ್ವರೂಪಗಳಲ್ಲಿ ಭಾರತದ ಸಾಮಾನ್ಯ ವಿಕೆಟ್ ಕೀಪರ್ ಆಗಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಬೆಸ್ಟ್ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

2020/21 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಸತತ ಎರಡನೇ ಟೆಸ್ಟ್ ಸರಣಿ ಗೆಲುವಿನಲ್ಲಿ ರಿಷಬ್ ಪಂತ್ ಅವರು ದೊಡ್ಡ ಪಾತ್ರ ವಹಿಸಿದ್ದರು.

English summary
Rishabh Pant Car Accident : Indian Cricketer injured after his car collides with divider and caught fire while he was travelling from Uttarakhand to Delhi. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X