ಶಿವ - ರಾಮನ ಬಗ್ಗೆ ಬಡವ - ಶ್ರೀಮಂತ ದೇವರು: ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಮುಸ್ಲಿಂ ಹೇಳಿಕೆ ನೆನಪಿಸಿ ಬಿಜೆಪಿ ತಿರುಗೇಟು!

Revanth Reddy: ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ದೇವರುಗಳ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಶಿವ ಮತ್ತು ರಾಮ ದೇವರಿಗೆ ಸಂಬಂಧಿಸಿದಂತೆ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ನೀಡಿರುವ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. ರೇವಂತ್ ರೆಡ್ಡಿ ಹೇಳಿದ್ದೇನು ಹಿಂದೂಗಳು ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಯಾಕೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ "ಶಿವ ಬಡವರ ದೇವರು, ರಾಮ ಶ್ರೀಮಂತರ ದೇವರು' ಎಂದು ಬಿಜೆಪಿಯನ್ನು ಟೀಕೆ ಮಾಡುವಾಗ ಹೇಳಿದ್ದಾರೆ. ಅಲ್ಲದೆ ಉತ್ತರ ಭಾರತದಾದ್ಯಂತ ನಡೆದ ಚುನಾವಣೆಯಲ್ಲಿ ಕೇಸರಿ ಪಕ್ಷವು ತನ್ನ ಯಶಸ್ಸಿಗಾಗಿ "ಭಗವಾನ್ ರಾಮನನ್ನು ಕದ್ದಿದೆ' ಎಂದೂ ರೇವಂತ್ ರೆಡ್ಡಿ ಅವರು ಹೇಳಿದ್ದಾರೆ.

Revanth Reddy Telangana CM Says Shiva Is God of Poor Ram of Rich BJP Hits Back Recalls His Muslim Remark

ನಾವು ದ್ರಾವಿಡರು. ಇಲ್ಲಿನ (ಉತ್ತರ) ಜನರು ಆರ್ಯರು. ನಾವು ಶಿವನ ಭಕ್ತರು. ಇವರು ಭಗವಾನ್ ರಾಮನ ಭಕ್ತರು. ಬಿಜೆಪಿ ರಾಮನನ್ನು ಕದ್ದಿದೆ. ಅದು ಒಂದು ಭಾವನೆ, ಮೋದಿ ಜಿ ಹರ್ ಹರ್ ಮಹಾದೇವ್ ಎಂದು ಯಾಕೆ ಹೇಳುವುದಿಲ್ಲ. ಬಿಜೆಪಿ ಜನರು ಎಂದಾದರೂ ವೇದಿಕೆಯಲ್ಲಿ ಹರ್ ಹರ್ ಮಹಾದೇವ್ ಎಂದು ಹೇಳಿದ್ದಾರೆಯೇ, ಅವರು ಜೈ ಶ್ರೀ ರಾಮ್ ಎಂದು ಮಾತ್ರ ಹೇಳುತ್ತಾರೆ. ನಾವು ಹರ್ ಹರ್ ಮಹಾದೇವ್ ಎಂದು ಹೇಳಿದಾಗ, ಅವರಿಗೆ ಅದು ಇಷ್ಟವಾಗುವುದಿಲ್ಲ" ಎಂದೂ ತೆಲಂಗಾಣ ಮುಖ್ಯಮಂತ್ರಿ ಹೇಳಿದ್ದಾರೆ. ಈ ವಿಷಯವು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಶಿವ ಬಡವರ ದೇವರು, ರಾಮ ಶ್ರೀಮಂತರ ದೇವರು ಮತ್ತು ಬಿಜೆಪಿ ಶ್ರೀಮಂತರ ಪಕ್ಷ ಎಂದು ರೇವಂತ್ ರೆಡ್ಡಿ ಅವರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಹೇಳಿಕೆಗೆ ಕೇಂದ್ರ ಸಚಿವ ಸಂಜಯ್ ಕುಮಾರ್ ಬಂಡಿ ಅವರು ತೀಕ್ಷ್ಣ ಪ್ರತಿಕ್ರಿ ನೀಡಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಭಗವಾನ್ ರಾಮ ಮತ್ತು ಭಗವಾನ್ ಶಿವನ ನಡುವೆ ರಾಜಕೀಯ ವಿಭಜನೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಸ್ಲಿಂ ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ಮುಸ್ಲಿಂ ಎಂದು ಈ ಹಿಂದೆ ಹೇಳಿಕೆ ನೀಡಿದ್ದ ರೇವಂತ್ ರೆಡ್ಡಿ, ಈಗ ಭಗವಾನ್ ರಾಮ ಮತ್ತು ಶಿವನ ನಡುವೆ ರಾಜಕೀಯ ಗಡಿಗಳನ್ನು ಎಳೆಯುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ವೇಮುಲವಾಡದಲ್ಲಿ ದಕ್ಷಿಣ ಕಾಶಿ ಹಾಗೂ ಭದ್ರಾಚಲಂನಲ್ಲಿ ದಕ್ಷಿಣ ಅಯೋಧ್ಯೆಯನ್ನು ಹೊಂದಿರುವ ತೆಲಂಗಾಣದ ಮುಖ್ಯಮಂತ್ರಿಯಾಗಿರುವ ರೇವಂತ್ ರೆಡ್ಡಿ, ರಾಮ ಮತ್ತು ಶಿವನನ್ನು ಉತ್ತರ ಮತ್ತು ದಕ್ಷಿಣ ಎಂದು ವಿಭಜಿಸುವುದಕ್ಕಿಂತ ಚೆನ್ನಾಗಿ ತಿಳಿದುಕೊಳ್ಳಬೇಕು ಎಂದು ತಿರುಗೇಟು ಕೊಟ್ಟಿದ್ದಾರೆ.

ಕಾಶಿ ವಿಶ್ವನಾಥ ಇರುವ ವಾರಣಾಸಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಸಂಬಂಧವನ್ನು ಸಂಜಯ್ ಕುಮಾರ್ ಸಹ ಸೂಚಿಸಿದರು ಮತ್ತು ಸ್ವಾತಂತ್ರ್ಯದ ನಂತರ ವೇಮುಲವಾಡ ಶ್ರೀ ರಾಜರಾಜೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ಮೋದಿ ಎಂದು ಗಮನಿಸಿದರು.

Revanth Reddy: ಎಸ್‌ಐಆರ್ ವಿರೋಧಕ್ಕೆ ಒತ್ತಾಯ

ಇನ್ನು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ವಿರೋಧ ಪಕ್ಷಗಳು ಒಗ್ಗೂಡಬೇಕೆಂದು ತೆಲಂಗಾಣದ ಮುಖ್ಯಮಂತ್ರಿ ರೇವಂರ್ ರೆಡ್ಡಿ ಅವರು ಕರೆ ನೀಡಿದ್ದಾರೆ. ಪ್ರಸ್ತಾವಿತ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಆಂದೋಲನವನ್ನು "ಸೈಮನ್, ಗೋ ಬ್ಯಾಕ್' ಚಳುವಳಿಗೆ ಹೋಲಿಸಿದ್ದಾರೆ. SIR ಮತಗಳನ್ನು ಅಳಿಸಿಹಾಕುವ ಮತ್ತು ಬಿಜೆಪಿಗೆ ಲಾಭ ಮಾಡುವ ಗುರಿಯನ್ನು ಹೊಂದಿದೆ ಎಂದು ಅವರು ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+