ಅಂಗಡಿಯಲ್ಲಿರಲಿಲ್ಲ ಚೀಸ್ ಮೊಮೊ: ಆನ್‌ಲೈನಲ್ಲಿ ಬಂದ ಆರ್ಡರ್ ಈ ರೀತಿ ವಿತರಿಸಿದ ಮಾಲೀಕ; ಗ್ರಾಹಕ ಅಚ್ಚರಿ!
ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಆಹಾರವನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುತ್ತಾರೆ. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಅಲ್ಲ ಏನೋ ತಿನ್ನಬೇಕು ಅನ್ನಿಸಿದಾಗಲೆಲ್ಲಾ ಆರ್ಡರ್ ಮಾಡುವ ಅಭ್ಯಾಸ ದಿನೇ ದಿನೇ ಬೆಳೆಯುತ್ತಿದೆ. ಏನೋ ರುಚಿಕರ ತಿನಿಸು ತಿನ್ನಬೇಕು ಅನ್ನಿಸಿದಾಗಲೆಲ್ಲಾ ಅದನ್ನು ಮಾಡುವಷ್ಟು ಸಮಯ, ತಾಳ್ಮೆ ಈಗಿನ ಪರಿಸ್ಥಿತಿಯಲ್ಲಿ ಹೆಚ್ಚಿನವರಿಗೆ ಇರುವುದಿಲ್ಲ. ಹಾಗಾಗಿ ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವುದು ಎಲ್ಲರ ಮೊದಲ ಆಯ್ಕೆಯಾಗಿರುತ್ತದೆ.
ಕೆಲವೊಮ್ಮೆ, ನಾವು ಯಾವ ತಿಂಡಿಗಾಗಿ ಅಥವಾ ಫುಡ್‌ಗಾಗಿ ಆರ್ಡರ್ ಮಾಡಿರುತ್ತೇವೆಯೋ ಅದು ಆ ಅಂಗಡಿಯಲ್ಲಿ ಇಲ್ಲದೇ ಹೋಗಬಹುದು. ಹೀಗಾದಾಗ ಒಂದಾ ನಾವು ಮಾಡಿದ ಆರ್ಡರ್ ರದ್ದಾಗುತ್ತದೆ. ಇಲ್ಲಾ ಬೇರೆ ಆಹಾರವನ್ನು ಗ್ರಾಹಕರಿಗೆ ತಿಳಿಸದೆಯೇ ಕಳುಹಿಸಿ ಕೊಡಲಾಗುತ್ತದೆ. ಆದರೆ ಇಲ್ಲೊಂದು ರೆಸ್ಟೋರೆಂಟ್ ಗ್ರಾಹಕರ ಆರ್ಡರ್‌ಗೆ ರಿಯಾಕ್ಟ್ ಮಾಡಿದ ರೀತಿಗೆ ಎಲ್ಲರೂ ಆಶ್ಚರ್ಯಪಡುವಂತಾಗಿದೆ.

ರೆಸ್ಟೋರೆಂಟ್‌ನಿಂದ ಅಪರೂಪದ ಹೆಜ್ಜೆ
ಮಹಿಳೆಯೊಬ್ಬಳು ಆನ್‌ಲೈನ್‌ನಲ್ಲಿ ಚೀಸ್ ಮೊಮೊ ಆರ್ಡರ್ ಮಾಡಿದ್ದಳು. ಆದರೆ ಆರ್ಡರ್ ಬಂದಾಗ ಪ್ಯಾಕೇಟ್ ನೋಡಿದ ಮಹಿಳೆಗೆ ಆಶ್ಚರ್ಯ ಕಾದಿತ್ತು. ಆಕೆ ಆರ್ಡರ್ ಮಾಡಿದ್ದ ಗೆ ಚೀಸ್ ಮೊಮೋ ಅಲ್ಲಿರಲಿಲ್ಲ. ಅದರ ಬದಲಿಗೆ ಇನ್ಯಾವುದೋ ಆಹಾರವನ್ನು ಪ್ಯಾಕ್ ಮಾಡಿ ಕಳುಹಿಸಲಾಗಿತ್ತು. ಇಲ್ಲಿ ಗ್ರಾಹಕರಿಗೆ ಇಷ್ಟವಾದಂತಹ ವಿಷಯ ಅಂದರೆ ರೆಸ್ಟೋರೆಂಟ್‌ನವರು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ.
ಪಾರ್ಸೆಲ್ ಜೊತೆಗೆ ಒಂದು ನೋಟ್
ಮಹಿಳೆಯ ಆರ್ಡರ್ ಬಂದಾಗ ರೆಸ್ಟೋರೆಂಟ್‌ನಲ್ಲಿ ಚೀಸ್ ಮೊಮೊ ಖಾಲಿಯಾಗಿತ್ತು. ಈಗ ರೆಸ್ಟೋರೆಂಟ್‌ನವರ ಮುಂದೆ ಎರಡು ಆಯ್ಕೆಗಳಿದ್ದವು. ಮೊಲನೆಯದ್ದು ಆರ್ಡರ್ ರದ್ದುಗೊಳಿಸುವುದು ಅಥವಾ ಗ್ರಾಹಕರಿಗೆ ತಿಳಿಸದೆ ಬೇರೆ ಆಹಾರವನ್ನು ಕಳುಹಿಸುವುದು. ಇಲ್ಲಿ ರೆಸ್ಟೋರೆಂಟ್‌ನವರು ಬೇರೆಯೇ ಮಾರ್ಗ ಹಿಡಿದಿದ್ದಾರೆ. ಅವರು ಗ್ರಾಹಕರಿಗೆ ನಾರ್ಮಲ್ ಕ್ರಂಚಿ ಮೊಮೊ ಕಳುಹಿಸಿದ್ದಾರೆ. ಜೊತೆಗೆ ಪಾರ್ಸೆಲ್ ಒಳಗೆ 20 ರೂಪಾಯಿಗಳನ್ನು ಇಟ್ಟು ಇಟ್ಟಿದ್ದಾರೆ. ಯಾಕೆಂದರೆ ಚೀಸ್ ಮತ್ತು ಸಾಮಾನ್ಯ ಮೊಮೊಗಳ ನಡುವಿನ ದರದಲ್ಲಿ 20 ರೂ ವ್ಯತ್ಯಾಸವಿದೆ. ಅಲ್ಲದೆ ಗ್ರಾಹಕರಿಗೆ ತಮ್ಮ ಪರಿಸ್ಥಿತಿಯನ್ನು ವಿವರಿಸುವ ಮತ್ತು ಕ್ಷಮೆಯಾಚಿಸುವ ಒಂದು ನೋಟ್ ಕೂಡಾ ಇಟ್ಟಿದ್ದಾರೆ.
ಹೃದಯ ಗೆದ್ದ ಚೀಟಿ
"ಚೀಸ್ ಮೊಮೊಗಳು ಖಾಲಿಯಾಘಿತ್ತು. ಹಾಗಾಗಿ ನಾವು ಚೀಸ್ ಮೊಮೊ ಬಲಿಗೆ ನಾರ್ಮಲ್ ಕ್ರಂಚಿ ಮೊಮೊಗಳನ್ನು ಕಳುಹಿಸಿದ್ದೇವೆ. ಕ್ರಂಚಿ ಮೊಮೊಗೆ ಚೀಸ್ ಮೊಮೊಗಿಂತ 20 ರೂ, ಕಡಿಮೆ. ಹಾಗಾಗಿ ಆ 20 ರೂ.ಯನ್ನು ಕೂಡಾ ಈ ಪಾರ್ಸೆಲ್‌ನಲ್ಲಿ ಕಳುಹಿಸುತ್ತಿದ್ಧೇವೆ ಎಂದು ಬರೆಯಲಾಗಿತ್ತು. ಈ ಸಣ್ಣ ಚೀಟಿ ಆ ಗ್ರಾಹಕರಿಗೆ ನಿಜಕ್ಕೂ ವಿಶೇಷವಾಗಿತ್ತು. ಇನ್‌ಸ್ಟಾಗ್ರಾಮ್ ಬಳಕೆದಾರ ಶ್ರೇಯಾ ಎನ್ನುವವರು ತಮಗಾದ ಅನುಭವದ ಕುರಿತ ವೀಡಿಯೊ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹೆಚ್ಚಿನವರು ರೆಸ್ಟೋರೆಂಟ್‌ನ ಪ್ರಾಮಾಣಿಕತೆ ಮೆಚ್ಚಿದ್ದಾರೆ. ವ್ಯವಹಾರದಲ್ಲಿ, ಹಣ ಸಂಪಾದಿಸುವುದೇ ಮುಖ್ಯವಲ್ಲ, ಗ್ರಾಹಕರ ವಿಶ್ವಾಸ ಗಳಿಸುವುದು, ಉಳಿಸುವುದು ಕೂಡಾ ಅಷ್ಟೇ ಮುಖ್ಯ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇದನ್ನು ಅದ್ಭುತ ಮಾರ್ಕೆಟಿಂಗ್ ತಂತ್ರ ಎಂದೂ ಕರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಂಪನಿಗಳು ಆಫರ್, ಡಿಸೌಂಟ್ ಮೂಲಕ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದರ ಮಧ್ಯೆ, ಇಂತಹ ಪ್ರಾಮಾಣಿಕತೆ ಎಲ್ಲರೂ ನೆನಪಿಸಿಕೊಳ್ಳುತ್ತಾರೆ ಎಂದು ಕೆಲವರು ಹೇಳಿದ್ದಾರೆ.
ವಿರೋಧ ಮಾಡಿದವರೂ ಇದ್ದಾರೆ
ಹಾಗಂತ ಎಲ್ಲರೂ ಆ ಹೊಟೇಲ್‌ನವರ ಕೆಲಸವನ್ನು ಒಪ್ಪಲಿಲ್ಲ. ಕೇಳಿದ ಫುಡ್ ಇಲ್ಲ ಎಂದಾದ ಮೇಲೆ ಬದಲಿಸುವ ಮೊದಲು ಗ್ರಾಹಕರನ್ನು ಕೇಳುವುದೇ ಸೂಕ್ತ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ. ಮರುಪಾವತಿ ಮಾಡಿರುವುದು ಒಳ್ಳೆಯದೇ ಆದರೆ ಗ್ರಾಹಕರನ್ನು ಕೇಳಿ ನಿರ್ಧಾರ ತೆಗೆದುಕೊಂಡಿದ್ದರೆ ಇನ್ನೂ ಒಳ್ಳೆಯದಿತ್ತು ಎಂದಿದ್ದಾರೆ.
ಈ ಇಡೀ ಘಟನೆಯಲ್ಲಿ ಎದ್ದು ಕಾಣುವ ವಿಚಾರ ಎಂದರೆ ತಮ್ಮ ತಪ್ಪನ್ನು ಮುಚ್ಚಿ ಹಾಕುವ ಬದಲು, ರೆಸ್ಟೋರೆಂಟ್ ಪ್ರಾಮಾಣಿಕವಾಗಿ ಅದನ್ನು ಒಪ್ಪಿಕೊಂಡಿದೆ. ಆರ್ಡರ್ ಅನ್ನು ಯಾಕೆ ಬದಲಾಯಿಸಲಾಗಿದೆ ಎಂಬುದನ್ನು ಗ್ರಾಹಕರಿಗೆ ವಿವರಿಸಿ ಹೇಳಿದ್ದಾರೆ. ಉಳಿದ ಹಣವನ್ನು ವಾಪಸ್ ಮಾಡಿದ್ದಾರೆ. ಚೀಸ್ ಮೊಮೊಗಳ ಬದಲಿಗೆ ನಾರ್ಮಲ್ ಮೊಮೊಗಳನ್ನು ಕಳುಹಿಸುವುದು ದೊಡ್ಡ ವಿಷಯವಲ್ಲದೇ ಇರಬಹುದು ನಿಜ. ಆದರೆ 20 ರೂಪಾಯಿ ಮತ್ತು ಅದರೊಂದಿಗೆ ಕಳುಹಿಸಲಾದ ಆ ಒಂದು ಚೀಟಿ ಇಲ್ಲಿ ಇಡೀ ಘಟನೆಯನ್ನು ವಿಶೇಷವನ್ನಾಗಿಸಿದೆ. ಇದೇ ಕಾರಣಕ್ಕೆ ರೆಸ್ಟೋರೆಂಟ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹೊಗಳಿಕೆ ಕೇಳುತ್ತಿದೆ.


Click it and Unblock the Notifications
