Republic Day Parade Live: ದೆಹಲಿಯ ರಾಜ್‌ಪಥ್‌ನಲ್ಲಿ ಪಥಸಂಚಲನ ಅಂತ್ಯ
ನವದೆಹಲಿ, ಜನವರಿ 26: ಭಾರತವು 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವುದರ ನಡುವೆ 73ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿದೆ. ರಾಷ್ಟ್ರ ರಾಜಧಾನಿ ಸೇರಿದಂತೆ ಜನವರಿ, 26ರಂದು ದೇಶಾದ್ಯಂತ ಗಣರಾಜ್ಯೋತ್ಸವವನ್ನು ಹಬ್ಬದ ರೀತಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 1950ರ ಜನವರಿ 26ರಂದು ಭಾರತವು ಸಂವಿಧಾನವನ್ನು ಅಂಗೀಕರಿಸಿದ ದಿನವಾಗಿದ್ದು, ಅಂದು ದೇಶ ನಿಜವಾಗಿಯೂ ಪ್ರಜಾಸತ್ತಾತ್ಮಕ ಗಣರಾಜ್ಯವಾಯಿತು.
ದೇಶದ 73ನೇ ಗಣರಾಜ್ಯೋತ್ಸವದ ಸಂಭ್ರಮದ ಹಿನ್ನೆಲೆ ಮಂಗಳವಾರ ರಾತ್ರಿ 7 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡಲಿದ್ದಾರೆ. ಗಣರಾಜ್ಯೋತ್ಸವ ದಿನವು ಬ್ರಿಟಿಷ್ ಆಡಳಿತದ ವಿರುದ್ಧದ ಮೊದಲ ಕ್ರಾಂತಿಯ ಸೂಚಕವಾಗಿದೆ.
ಈ ವರ್ಷ ಆಚರಿಸುತ್ತಿರುವ 73ನೇ ಗಣರಾಜ್ಯೋತ್ಸವವನ್ನು ಎಂದಿಗಿಂತ ವಿಭಿನ್ನ ಮತ್ತು ವಿಶೇಷವಾಗಿ ಪ್ರಸಾರ ಮಾಡುವುದಕ್ಕೆ ದೂರದರ್ಶನದ ಸಿದ್ಧತೆ ನಡೆಸಿದೆ. ನವದೆಹಲಿಯಲ್ಲಿ ಈ ವರ್ಷ ಗಣರಾಜ್ಯೋತ್ಸವದ ಕವರೇಜ್‌ಗಾಗಿ ರಾಷ್ಟ್ರಪತಿ ಭವನದಿಂದ ರಾಜ್‌ಪಥ್ ಮೂಲಕ ಇಂಡಿಯಾ ಗೇಟ್‌ನಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದವರೆಗೆ ಸಂಪೂರ್ಣ ವಿಸ್ತಾರವಾಗಿ ವ್ಯವಸ್ಥೆ ಮಾಡಲಾಗಿದೆ. ಒಟ್ಟು 59 ಕ್ಯಾಮೆರಾಗಳು ಮತ್ತು 160ಕ್ಕೂ ಹೆಚ್ಚು ಸಿಬ್ಬಂದಿಯು ಗಣರಾಜ್ಯೋತ್ಸವದ ಸಂಭ್ರಮವನ್ನು ಸೆರೆ ಹಿಡಿಯುವುದಕ್ಕೆ ನಿಯೋಜಿಸಲಾಗಿದೆ.

ದೂರದರ್ಶನ ಅವರು ರಾಷ್ಟ್ರಪತಿ ಭವನದ ಗುಮ್ಮಟದಿಂದ ರಾಷ್ಟ್ರೀಯ ಕ್ರೀಡಾಂಗಣದ ಗುಮ್ಮಟದವರೆಗೆ ರಾಜಪಥದ ಉದ್ದಕ್ಕೂ 59 ಕ್ಯಾಮೆರಾಗಳನ್ನು ನಿಯೋಜಿಸಿದ್ದಾರೆ. ರಾಜಪಥದಲ್ಲಿ 33 ಕ್ಯಾಮೆರಾಗಳು, ನ್ಯಾಷನಲ್ ವಾರ್ ಮೆಮೋರಿಯಲ್, ಇಂಡಿಯಾ ಗೇಟ್, ನ್ಯಾಷನಲ್ ಸ್ಟೇಡಿಯಂನಲ್ಲಿ 16 ಕ್ಯಾಮೆರಾಗಳು ಮತ್ತು ರಾಷ್ಟ್ರಪತಿ ಭವನದಲ್ಲಿ 10 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ದೇಶದಾದ್ಯಂತ ದೂರದರ್ಶನದ ಎಲ್ಲಾ ಚಾನೆಲ್‌ಗಳಲ್ಲಿ ಜನವರಿ 26 ರಂದು ಬೆಳಿಗ್ಗೆ 9:15 ರಿಂದ ರಾಜ್‌ಪಥ್‌ನಲ್ಲಿನ ಕಾರ್ಯಕ್ರಮಗಳ ಅಂತ್ಯದವರೆಗೆ ಗಣರಾಜ್ಯೋತ್ಸವದ ನೇರ ಪ್ರಸಾರವನ್ನು ಮಾಡಲಾಗುತ್ತದೆ. ಲೈವ್ ಕವರೇಜ್ ಡಿಡಿ ನ್ಯಾಷನಲ್, ಡಿಡಿ ನ್ಯೂಸ್ ಯೂಟ್ಯೂಬ್ ಚಾನೆಲ್‌ಗಳು ಮತ್ತು ನ್ಯೂಸ್ಆನ್ ಏರ್ ಆಪ್ ಮತ್ತು ವೆಬ್‌ಸೈಟ್‌ನಲ್ಲಿಯೂ ಲಭ್ಯವಿರುತ್ತದೆ. ದೇಶದ 73ನೇ ಗಣರಾಜ್ಯೋತ್ಸವ ಮತ್ತು ರಾಮನಾಥ್ ಕೋವಿಂದ್ ಅವರ ಭಾಷಣದ ಕುರಿತು ಕ್ಷಣ ಕ್ಷಣದ ಮಾಹಿತಿಯನ್ನು ಮುಂದೆ ಓದಿ.
ರಾಜ್‌ಪಥ್‌ನಲ್ಲಿ ಪಥಸಂಚಲನ ಅಂತ್ಯ:
The tableaux of Arunachal Pradesh, Karnataka and Jammu & Kashmir at Rajpath during #RepublicDayParade pic.twitter.com/lwL7McGPT4
— ANI (@ANI) January 26, 2022
#RepublicDayParade | Depicting 'Punjab's contribution in freedom struggle', the tableau of the state depicts Bhagat Singh, Rajguru & Sukhdev. It also depicts protest against the Simon Commission led by Lala Lajpat Rai and Udham Singh shooting Michael O'Dwyer.#RepublicDayIndia pic.twitter.com/xNy8Xs9J3B
— ANI (@ANI) January 26, 2022
ಚಿತ್ರಗಳು: ಕರ್ನಾಟಕದಲ್ಲಿ ಸಂಭ್ರಮದ ಗಣರಾಜ್ಯೋತ್ಸವ ದಿನಾಚರಣೆ
ರಾಜಪಥದಲ್ಲಿ ರಾಷ್ಟ್ರಪತಿಯಿಂದ ಧ್ವಜಾರೋಹಣ
#WATCH | Delhi: Prime Minister Narendra Modi lays wreath at the National War Memorial on 73rd #RepublicDay pic.twitter.com/ZhYNBCmozh
— ANI (@ANI) January 26, 2022
ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪ್ರಧಾನಿ:

ಕರ್ನಾಟಕ ರಾಜ್ಯಪಾಲ ಗೆಹ್ಲೋಟ್ ಭಾಷಣ:













Click it and Unblock the Notifications