ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಎರಡನೇ ಅಲೆ ಭೀತಿ ನಡುವೆ ಒಂದೇ ದಿನ 40 ಸಾವಿರ ಪ್ರಕರಣ ದಾಖಲು

|
Google Oneindia Kannada News

ನವದೆಹಲಿ, ಮಾರ್ಚ್ 20: ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಆರಂಭವಾಗುವ ಭೀತಿ ನಡುವೆಯೇ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 40,953 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.

ಶನಿವಾರ ಕೇಂದ್ರ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ಭಾರತದಲ್ಲಿ ಇದುವರೆಗೂ ಒಟ್ಟಾರೆ 1,15,55,284 ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿರುವುದಾಗಿ ತಿಳಿಸಿದೆ.

ಕರ್ನಾಟಕದಲ್ಲಿ ಮಿತಿಮೀರಿದ ಕೊರೊನಾ: ಬೆಂಗಳೂರಲ್ಲಿ 1037 ಪ್ರಕರಣ ದಾಖಲು ಕರ್ನಾಟಕದಲ್ಲಿ ಮಿತಿಮೀರಿದ ಕೊರೊನಾ: ಬೆಂಗಳೂರಲ್ಲಿ 1037 ಪ್ರಕರಣ ದಾಖಲು

ಪ್ರಸ್ತುತ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 288,394 ಇದ್ದು, ಕಳೆದ 24 ಗಂಟೆಗಳಲ್ಲಿ 188 ಮಂದಿ ಕೊರೊನಾದಿಂದ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಒಟ್ಟಾರೆ ಇದುವರೆಗೂ ಕೊರೊನಾದಿಂದ 159,558 ಮಂದಿ ಸಾವನ್ನಪ್ಪಿದ್ದಾರೆ.

India Reports 40 Thousand New Covid 19 Cases On March 20

ಗುಣಮುಖರಾದವರ ಸಂಖ್ಯೆಯಲ್ಲೂ ಏರಿಕೆ ಕಂಡಿದ್ದು, ಒಂದೇ ದಿನದಲ್ಲಿ 20,654 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಗುಣಮುಖರಾದವರ ಒಟ್ಟಾರೆ ಸಂಖ್ಯೆಯು 11,107,332ಗೆ ತಲುಪಿದೆ.

English summary
India added 40,953 new coronavirus casestaking the nationwide Covid-19 tally of cases to 1,15,55,284, according to Union Health Ministry data updated on Saturday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X