ಗುಜರಾತ್ ಅಸೆಂಬ್ಲಿ ಚುನಾವಣೆ ಸಮೀಕ್ಷೆ: ಬಿಜೆಪಿಗೆ ಬಹುಮತ

Posted By:
Subscribe to Oneindia Kannada

ನವದೆಹಲಿ, ಸೆ 20: ಭಾರತೀಯ ಜನತಾ ಪಕ್ಷಕ್ಕೆ 2017ರಲ್ಲಿ ನಡೆಯಲಿರುವ ಏಳು ರಾಜ್ಯಗಳ ಅಸೆಂಬ್ಲಿ ಚುನಾವಣೆಯ ಫಲಿತಾಂಶ ಅತ್ಯಂತ ನಿರ್ಣಾಯಕ.

ಅಧಿಕಾರದಲ್ಲಿರುವ ಮೂರು ರಾಜ್ಯಗಳನ್ನು ಉಳಿಸಿಕೊಳ್ಳುವುದು ಒಂದೆಡೆಯಾದರೆ, ಕಾಂಗ್ರೆಸ್ ಮುಕ್ತ್ ಭಾರತ್ ಎನ್ನುವ ತನ್ನ ಘೋಷವಾಕ್ಯಕ್ಕೆ ಬದ್ದವಾಗಿರಲು ಇನ್ನುಳಿದ ನಾಲ್ಕು ರಾಜ್ಯಗಳಲ್ಲಿ ಯಾವ ರೀತಿಯಲ್ಲಿ ಪ್ರಭಾವಿಯಾಗಿ ಕೆಲಸ ಮಾಡುಬೇಕಾಗಬಹುದು ಎನ್ನುವುದು ಇನ್ನೊಂದು.

ಗೋವಾ, ಮಣಿಪುರ, ಪಂಜಾಬ್, ಉತ್ತಾರಾಖಂಡ, ಉತ್ತರಪ್ರದೇಶ, ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬರುವ ವರ್ಷ ಚುನಾವಣೆ ನಡೆಯಲಿದೆ. ಇದರಲ್ಲಿ ಗೋವಾ, ಪಂಜಾಬ್ ಮತ್ತು ಗುಜರಾತ್ ನಲ್ಲಿ ಬಿಜೆಪಿ/ಮೈತ್ರಿಕೂಟ ಅಧಿಕಾರದಲ್ಲಿದೆ. (ಮೋದಿ 56 ಇಂಚು ಎದೆ ಪ್ರದರ್ಶನ ಯಾವಾಗ)

2017ರ ವರ್ಷಾಂತ್ಯದಲ್ಲಿ ಗುಜರಾತ್ ಅಸೆಂಬ್ಲಿ ಚುನಾವಣೆ ನಡೆಯಲಿದೆ. ಮುಖ್ಯಮಂತ್ರಿಯಾಗಿ ಸತತವಾಗಿ ಮೂರು ಬಾರಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಗುಜರಾತ್ ನಲ್ಲಿ ಪಕ್ಷದ ವರ್ಚಸ್ಸು ಹಿಂದಿನಂತಿಲ್ಲ.

182ಸದಸ್ಯರನ್ನು ಹೊಂದಿರುವ ಗುಜರಾತ್ ಅಸೆಂಬ್ಲಿಯಲ್ಲಿ ಬಿಜೆಪಿ 123, ಕಾಂಗ್ರೆಸ್ 56 ಮತ್ತು ಇತರರು 3ಸ್ಥಾನವನ್ನು ಹೊಂದಿದ್ದಾರೆ. ತಾಜಾ ಸಮೀಕ್ಷೆಯ ಪ್ರಕಾರ ಗುಜರಾತ್ ನಲ್ಲಿ ಸದ್ಯ ಮತದಾರರ ಒಲವು ಬಿಜೆಪಿಯ ಮೇಲೆಯೇ ಮುಂದುವರಿದಿದೆ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಸಮೀಕ್ಷೆ ನಡೆಸಿದ್ದು ಕಾಂಗ್ರೆಸ್

ಸಮೀಕ್ಷೆ ನಡೆಸಿದ್ದು ಕಾಂಗ್ರೆಸ್

ಗುಜರಾತ್ ನಲ್ಲಿ ಸದ್ಯ ಮತದಾರರ ಮೂಡ್ ಯಾವ ಪಕ್ಷದ ಪರವಾಗಿದೆ ಎನ್ನುವ ಸಮೀಕ್ಷೆಯನ್ನು ಗುಜರಾತ್ ನಲ್ಲಿನ ವಿರೋಧ ಪಕ್ಷವಾದ ಕಾಂಗ್ರೆಸ್ ನಡೆಸಿದ್ದು ಎನ್ನುವುದು ವಿಶೇಷ. ಸಮೀಕ್ಷೆಯ ಫಲಿತಾಂಶವನ್ನು ಗುಜರಾತ್ ಕಾಂಗ್ರೆಸ್ ಘಟಕ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರವಾನಿಸಿದೆ.

ವೃತ್ತಿಪರ ಏಜೆನ್ಸಿ

ವೃತ್ತಿಪರ ಏಜೆನ್ಸಿ

ಕಾಂಗ್ರೆಸ್ ವೃತ್ತಿಪರ ಏಜೆನ್ಸಿ ಸಹಾಯದೊಂದಿಗೆ ಈ ಸಮೀಕ್ಷೆ ಸಿದ್ದಪಡಿಸಿದೆ. ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲುವ ಸ್ಥಾನ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಲಿದೆ.

ಬಿಜೆಪಿಗೆ ಬಹುಮತ

ಬಿಜೆಪಿಗೆ ಬಹುಮತ

ಕಾಂಗ್ರೆಸ್ ನಡೆಸಿದ ಸಮೀಕ್ಷೆಯ ಪ್ರಕಾರ ಬಿಜೆಪಿ 97ಸ್ಥಾನ ಗೆಲ್ಲುವ ಸಾಧ್ಯತೆಯಿದೆ. ಅಂದರೆ ಕಳೆದ ಅಸೆಂಬ್ಲಿ ಚುನಾವಣೆಗೆ ಹೋಲಿಸಿದ್ದಲ್ಲಿ 26 ಸೀಟನ್ನು ಬಿಜೆಪಿ ಕಳೆದುಕೊಳ್ಳಲಿದೆ.

ಕಾಂಗ್ರೆಸ್

ಕಾಂಗ್ರೆಸ್

ತನ್ನ ಆಂತರಿಕ ಸಮೀಕ್ಷೆಯನ್ವಯ ಕಾಂಗ್ರೆಸ್ 85 ಸ್ಥಾನದಲ್ಲಿ ಗೆಲ್ಲಲಿದೆ, 2012ರ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್ 29 ಸ್ಥಾನ ಅಧಿಕವಾಗಿ ಪಡೆಯಲಿದೆ. ಒಟ್ಟಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತುರುಸಿನ ಸ್ಪರ್ಧೆ ಏರ್ಪಡಲಿದೆ.

ಒಟ್ಟಾರೆ ಸಮೀಕ್ಷೆಯ ಪ್ರಕಾರ

ಒಟ್ಟಾರೆ ಸಮೀಕ್ಷೆಯ ಪ್ರಕಾರ

ಸಮೀಕ್ಷೆಯನ್ವಯ 97 ಸ್ಥಾನಗಳಲ್ಲಿ ಬಿಜೆಪಿ ಖಚಿತವಾಗಿ ಗೆಲ್ಲುವ ಸಾಧ್ಯತೆ ಇರುವ ಅಸೆಂಬ್ಲಿ ಕ್ಷೇತ್ರಗಳು 52. ಇನ್ನುಳಿದ 45ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಶೇ. 85.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A confidential report prepared by the Gujarat Congress says the ruling BJP may win 97 out of the 182 seats in the 2017 assembly elections. The same report says the Congress will win a maximum of 85 seats if it is lucky.
Please Wait while comments are loading...