500, 1000 ರೂಪಾಯಿ ಹಳೇ ನೋಟು ಇನ್ನೂ ಹೊಂದಿದ್ದವರಿಗೆ ಸಿಹಿಸುದ್ದಿ?

Written By:
Subscribe to Oneindia Kannada

ನವದೆಹಲಿ, ಜ 25: ಹಳೆಯ ಐನೂರು ಮತ್ತು ಸಾವಿರ ರೂಪಾಯಿ ನೋಟನ್ನು ಇನ್ನೂ ಮನೆಯಲ್ಲಿ ಇಟ್ಟುಕೊಂಡು, ಅತ್ತ ಬ್ಯಾಂಕಿಗೂ ಕಟ್ಟಲಾಗದೇ, ಇತ್ತ ಬಿಸಾಕಲೂ ಆಗದವರಿಗೆ ಸಿಹಿಸುದ್ದಿಯೊಂದು ಹೊರಬೀಳುವ ಸಾಧ್ಯತೆಯಿದೆ.

ಹಳೆಯ ಈ ಎರಡು ಮುಖಬೆಲೆಯ ನೋಟನ್ನು ಮತ್ತೆ ಬ್ಯಾಂಕುಗಳಲ್ಲಿ ಜಮಾ ಮಾಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅವಕಾಶ ನೀಡುವ ಸಾಧ್ಯತೆಯಿದೆ ಎಂದು ಬ್ಯಾಂಕ್ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಆದರೆ, ಠೇವಣಿಯಿಡಲು ಅಥವಾ ಹಳೇ ನೋಟನ್ನು ವಿನಿಮಯ ಮಾಡಿಕೊಳ್ಳಲು ಆರ್ಬಿಐ ನಿರ್ಬಂಧ ಹೇರುವ ಸಾಧ್ಯತೆಯಿದೆ. ಸಾರ್ವಜನಿಕರಿಂದ ಬಹಳಷ್ಟು ವಿಚಾರಣೆ ಬರುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರಕಾರ, ಮತ್ತೊಂದು ಚಾನ್ಸ್ ನೀಡುವ ಸಾಧ್ಯತೆಯಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ಠೇವಣಿ ಅಥವಾ ವಿನಿಮಯ ವ್ಯವಹಾರ ಸೀಮಿತ ಮೊತ್ತದದ್ದಾಗಲಿದ್ದು, ಕಾರಣಾಂತರದಿಂದ ಹಳೇ ಕರೆನ್ಸಿಯನ್ನು ಇನ್ನೂ ಇಟ್ಟುಕೊಂಡಿದ್ದವರಿಗೆ ಇದರಿಂದ ಉಪಯೋಗವಾಗಲಿದೆ.

Relief from demonetisation: People may get another chance to deposit old notes in banks

ಉಳ್ಳವರು ಈ ಅವಕಾಶವನ್ನು ದುರ್ಬಳಕೆ ಮಾಡದೇ ಇರಲು, ಹೊಸ ನೋಟಿಫಿಕೇಶನ್ ನೊಂದಿಗೆ ರಿಸರ್ವ್ ಬ್ಯಾಂಕ್ ತನ್ನ ನಿರ್ಧಾರವನ್ನು ಸದ್ಯದಲ್ಲೇ ಪ್ರಕಟಿಸಲಿದೆ ಎಂದು ಪತ್ರಿಕೆ ವರದಿ ಮಾಡಿದೆ.

ನವೆಂಬರ್ ಎಂಟರಂದು ಪ್ರಧಾನಿ ಮೋದಿ ನೋಟು ನಿಷೇಧದ ಪ್ರಕಟಣೆ ಘೋಷಿಸಿದ ನಂತರ, ಡಿ 30ರವರೆಗೆ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇಡಲು ರಿಸರ್ವ್ ಬ್ಯಾಂಕ್ ಕಾಲಾವಕಾಶ ನೀಡಿತ್ತು.

ಈ ಅವಧಿಯ ನಂತರ ಸೂಕ್ತ ದಾಖಲೆ ಮತ್ತು ಮಾಹಿತಿ ನೀಡಿ ಹಳೇ ನೋಟನ್ನು ಮಾರ್ಚ್ 30ರೊಳಗೆ ರಿಸರ್ವ್ ಬ್ಯಾಂಕ್ ನಲ್ಲಿ ಜಮಾ ಮಾಡಬಹುದೆಂದು ಕೇಂದ್ರ ಸರಕಾರ ಪ್ರಕಟಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Relief from demonetisation: People may get another chance to deposit old notes in banks, Hindustan Times report.
Please Wait while comments are loading...