ಮತ್ತೆ ಮುಂದುವರಿಯುತ್ತೆ ರಿಲಾಯನ್ಸ್ ಜಿಯೋ ಉಚಿತ ಕೊಡುಗೆ!

By: ವಿಕಾಸ್ ನಂಜಪ್ಪ
Subscribe to Oneindia Kannada

ರಿಲಾಯನ್ಸ್ ಜಿಯೋ ಬಳಕೆದಾರರಿಗೆ ಇಲ್ಲೊಂದು ಸಿಹಿಸುದ್ದಿಯಿದೆ. ರಿಲಯನ್ಸ್ ಜಿಯೋ, ದೂರಸಂಪರ್ಕ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿದೆ, ಆದ್ದರಿಂದ ರಿಲಯನ್ಸ್ ಜಿಯೋ ಉಚಿತ ಕೊಡುಗೆಗೆ ತಡೆಯಾಜ್ಞೆ ನೀಡಬೇಕೆಂದು ಭಾರ್ತಿ ಏರ್ ಟೆಲ್ ಮತ್ತು ಐಡಿಯಾ ಸೆಲ್ಯಲರ್ ಹೂಡಿದ್ದ ಮೇಲ್ಮನವಿ ಅರ್ಜಿಯನ್ನು ದೂರಸಂಪರ್ಕ ವಿವಾದ ಇತ್ಯರ್ಥ ಮತ್ತು ಮೇಲ್ಮನವಿ ನ್ಯಾಯಮಂಡಳಿ (TDSAT) ತಿರಸ್ಕರಿಸಿದೆ. ಇದರಿಂದಾಗಿ ರಿಲಾಯನ್ಸ್ ಜಿಯೋ ಉಚಿತ ಕೊಡುಗೆ ನಿರಾತಂಕವಾಗಿ ಮುಂದುವರಿಯಲಿದೆ.

Relience jio wins the battle again

ರಿಲಯನ್ಸ್ ಜಿಯೋ ಫ್ರೀ ವಾಯ್ಸ್ ಕಾಲ್ ಮತ್ತು ಡಾಟಾ ಪ್ಲಾನ್ ಯಾವುದೇ ರೀತಿಯ ದೂರಸಂಪರ್ಕ ನಿಯಮಾವಳಿಗಳನ್ನು ಉಲ್ಲಂಘಿಸಿಲ್ಲ ಎಂದು ಜನವರಿ 31 ರಂದೇ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಹೇಳಿತ್ತಲ್ಲದೆ, ಜಿಯೋ ಉಚಿತ ಕೊಡುಗೆಯನ್ನು ಮುಂದುವರಿಸಲು ಅನುಮತಿ ನೀಡಿತ್ತು. ಡಿಸೆಂಬರ್ 4, 2016 ರ ಹ್ಯಾಪಿ ನ್ಯೂ ಆಫರ್ ಮತ್ತು ಅದಕ್ಕೂ ಮೊದಲಿನ ವೆಲಕಂ ಆಫರ್ ಗಳೆರಡೂ ಬೇರೆ ಬೇರೆಯಾಗಿದ್ದು ಅವು ಯಾವುದೇ ರೀತಿಯಲ್ಲೂ ದೂರಸಂಪರ್ಕ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿಲ್ಲ ಎಂದು TDSAT ಸ್ಪಷ್ಟಪಡಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Telecom Disputes Settlement and Appellate Tribunal has refused to stay Reliance Jio's free offer. TDSAT has asked the TRAI to re-examine the January 31 letter that allowed Jio to continue with its free promotional offer.
Please Wait while comments are loading...