• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚತ್ತೀಸ್‌ಘಡ ಚುನಾವಣೆಯಲ್ಲಿ ಎಷ್ಟೊಂದು ನಿಜ ಜೀವನದ ಹೀರೋಗಳು!

|

ರಾಯಪುರ, ನವೆಂಬರ್ 12: ನ್ಯೂಟನ್‌ ಎಂಬ ಹಿಂದಿ ಸಿನಿಮಾವೊಂದು ಬಂದಿತ್ತು. ಚಿತ್ರದ ನಾಯಕ ಚುನಾವಣೆ ಅಧಿಕಾರಿಯಾಗಿ ನಕ್ಸಲ್‌ ಪೀಡಿತ ಪ್ರದೇಶಕ್ಕೆ ಹೋಗಬೇಕಾಗುತ್ತದೆ. ನಕ್ಸಲ್‌ ಪೀಡಿತ ಪ್ರದೇಶದಲ್ಲಿ ಆತ ಅನುಭವಿಸುವ ಸಂಕಷ್ಟಗಳೇ ಚಿತ್ರದ ಕತೆ. ನಾಯಕನ ಹೆಸರು ನ್ಯೂಟನ್‌.

ಛತ್ತೀಸ್‌ಘಡ ಚುನಾವಣೆ: ನಕ್ಸಲರ ಬೆದರಿಕೆ ಮಧ್ಯೆಯೂ ಭರ್ಜರಿ ಮತದಾನ

ಇಂದು ಚತ್ತೀಸ್‌ಘಡ ವಿಧಾನಸಭೆ ಚುನಾವಣೆ, ಇಲ್ಲಿ ಸಹ ಹಲವು ಜನ ನ್ಯೂಟನ್‌ಗಳು ಇಂದು ನೊಡಲು ಸಿಕ್ಕರು. ಕೆಲ ದಿನಗಳ ಮುಂದಷ್ಟೆ ಭಾರಿ ಬಾಂಬ್‌ಗಳನ್ನು ಸ್ಪೋಟಿಸಿ ಎಚ್ಚರಿಕೆ ನೀಡಿರುವ ನಕ್ಸಲರು ಇರುವ ಜಾಗಗಳಿಗೆ ಹೋಗಿ ಮತದಾನ ಪ್ರಕ್ರಿಯೆ ಮಾಡಿದರು ಈ ನಿಜ ನೀಜವನದ ನಾಯಕರು.

'ಮತಹಾಕಿದರೆ ಬೆರಳು ಕತ್ತಿರಿಸುತ್ತೇವೆ' ಎಂದಿದ್ದರೂ ಮತ ಹಾಕಿದ ಧರ್ಯವಂತ ಗ್ರಾಮಸ್ಥರು

ಬೆಟ್ಟ ಗುಡ್ಡಗಳನ್ನು ಹತ್ತಿ, ನದಿ-ತೊರೆಗಳನ್ನು ದಾಟಿ, ದಟ್ಟ ಅಡವಿಯ ನಡುವೆ ಬ್ಯಾಲೆಟ್‌ ಮಷೀನ್‌ಗಳನ್ನು ಎತ್ತಿಕೊಂಡು ಹಳ್ಳಿಗಳಿಗೆ ಹೋಗಿ ಚುನಾವಣಾ ಕಾರ್ಯ ಮಾಡಿಸಿದ್ದಾರೆ. ಅಕ್ಷರಶಃ ಸಾವಿನ ನೆರಳಿನಲ್ಲೇ ಚುನಾವಣೆ ನಡೆಸಿದ್ದಾರೆ ಈ ಸರ್ಕಾರಿ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿ.

ಸುಕ್ಮಾ, ಬಿಜಾಪುರ ಜಿಲ್ಲೆಯ ಎಲ್ಲಾ 437 ಮತಕೇಂದ್ರಗಳನ್ನೂ ಸೂಕ್ಷ್ಮ ಮತಕೇಂದ್ರಗಳು ಎಂದು ಘೋಷಿಸಲಾಗಿತ್ತು. ಜೊತೆಗೆ ಭಾರಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಇಲ್ಲಿನ ಬಹುತೇಕ ಮತಕೇಂದ್ರಗಳಲ್ಲಿ ಕಳೆದ 20 ವರ್ಷಗಳಿಂದ ಮತಚಲಾವಣೆಯೇ ಆಗಿರಲಿಲ್ಲ. ಅಂತಹಾ ಕಡೆಗಳೆಲ್ಲಾ ಈ ಬಾರಿ ಮತಚಲಾವಣೆ ಆಗಿದೆ.

ಛತ್ತೀಸ್ ಗಢದಲ್ಲಿ ಜನತಾ ಕಾಂಗ್ರೆಸ್- ಬಿಎಸ್ ಪಿ ದೋಸ್ತಿ: ಮಾಯಾವತಿ

ಬೂತ್ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕ ಸಿಬ್ಬಂದಿ, ಕಿಲೋಮೀಟರ್ ಗಟ್ಟಲೆ ಭಾರ ಹೊತ್ತು ನಡೆದು, ನಕ್ಸಲ್ ಪ್ರಭಾವಿ ಪ್ರದೇಶಗಳಲ್ಲಿ ರಾತ್ರಿ ತಂಗಿದ್ದು, ಜನರಿಗೆ ಹಕ್ಕು ಚಲಾವಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ನ್ಯೂಟನ್ ಚಿತ್ರದಲ್ಲಿ ನಾಯಕ ನಟನಂತಹಾ ನಿಜ ಜೀವನದ ನೂರಾರು ನಾಯಕರು ಇಂದು ಚತ್ತೀಸ್‌ಘಡ ವಿಧಾನಸಭೆ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

English summary
There were hundred of real life Newton's worked as election officers in Chattisgarh assembly elections today. In Hindi Newton movie hero worked as election officer in Naxal remote area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X