ಜ.1ರಿಂದ ಎಟಿಎಂನಲ್ಲಿ ದಿನಕ್ಕೆ 4,500 ರು. ಸಿಗುತ್ತೆ!

Written By: Ramesh
Subscribe to Oneindia Kannada

ನವದೆಹಲಿ, ಡಿಸೆಂಬರ್. 31: ನೋಟ್ ಬ್ಯಾನ್ ನಿಂದಾಗಿ ಹಣ ತೆಗೆಯಲು ಪರದಾಡುತ್ತಿದ್ದ ಜನರಿಗೆ ಆರ್ ಬಿಐ ಹೊಸ ವರ್ಷಾಚರಣೆಯ ಗಿಫ್ಟ್ ನೀಡಿದೆ.

ಜನವರಿ 1 ರಿಂದ ಎಟಿಎಂಗಳಲ್ಲಿ ಹಣ ವಿಥ್ ಡ್ರಾ 2500 ರು ಇದ್ದ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) 4500 ರೂಪಾಯಿಗೆ ಏರಿಸಿದೆ. ಆದರೆ, ವಾರದ ಹಣ ವಿಥ್ ಡ್ರಾ ಮಿತಿಯಲ್ಲಿ ಯಾವುದೇ ಬದಲಾವಣೆಯಿಲ್ಲ.

ಹೀಗಾಗಿ ಓರ್ವ ವ್ಯಕ್ತಿ ವಾರದಲ್ಲಿ ಒಟ್ಟಾರೆ 24 ಸಾವಿರ ರು. ಮಾತ್ರ ತೆಗೆಯಬಹುದು. ಸದ್ಯ ಇರುವ ಪರಿಸ್ಥಿತಿಯನ್ನು ಅವಲೋಕಿಸಿ 2017ರ ಜನವರಿ 1ರಿಂದ ಎಟಿಎಂ ವಿಥ್ ಡ್ರಾ ಮಿತಿಯನ್ನು 2500 ರೂಪಾಯಿಯಿಂದ 4500 ರೂಪಾಯಿಗೆ ಪ್ರತಿ ಕಾರ್ಡ್ ಗೆ ಏರಿಕೆ ಮಾಡಲಾಗಿದೆ.

RBI increases cash withdrawal limit from ATMs to Rs 4,500 from Jan 1

ಆದರೆ, ವಾರದ ವಿಥ್ ಡ್ರಾ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಅಲ್ಲದೆ ಎಟಿಎಂಗಳಲ್ಲಿ 500 ರೂ.ಗಳ ನೋಟು ಹೆಚ್ಚು ಸಿಗುವಂತೆ ವ್ಯವಸ್ಥೆ ಮಾಡಿ ಎಂದು ಆರ್ ಬಿಐ ತನ್ನ ಅಧೀನದಲ್ಲಿರುವ ಎಲ್ಲಾ ಬ್ಯಾಂಕ್ ಗಳಿಗೆ ಸೂಚಿಸಿದೆ.

ನೋಟ್ ಬ್ಯಾನ್ ನಿಂದಾಗಿ 50 ದಿನಗಳ ಕಾಲ ನೀವು ಸಮಸ್ಯೆ ಎದುರಿಸಬೇಕಾಗಬಹುದು ಎಂದು ಪ್ರಧಾನಿ ಮೋದಿ ಹೇಳಿದ್ದರು. ಮೋದಿ ಹೇಳಿದ 50 ದಿನದ ಅವಧಿ ನಿನ್ನೆಗೆ ಮುಕ್ತಾಯವಾಗಿತ್ತು.

ಈ ಹಿನ್ನೆಲೆಯಲ್ಲಿ ಸ್ವಲ್ಪ ರಿಲೀಫ್ ಸಿಗಬಹುದು ಎಂದು ಜನರು ಕಾತರದಿಂದ ಕಾಯುತ್ತಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
RBI issued a statement on Friday citing that from January 1 2017, the daily withdrawal limit of ATMs would be increased from the current Rs 2, 500 rupees to Rs 4, 500. The bank also said that there would be no change in weekly withdrawal limits.
Please Wait while comments are loading...