ಬ್ಯಾಂಕಿಂಗ್ ವ್ಯವಸ್ಥೆ ಸರಿಪಡಿಸಲು 'ನೀಲಕಂಠ'ನಾಗಲೂ ಸಿದ್ಧ: ಊರ್ಜಿತ್

ನವದೆಹಲಿ, ಮಾರ್ಚ್ 15: ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇತ್ತೀಚೆಗೆ ಪದೇ ಪದೇ ಕೇಳಿಬರುತ್ತಿರುವ ವಂಚನೆ ಪ್ರಕರಣಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್ ಊರ್ಜಿತ್ ಪಟೇಲ್, 'ಬ್ಯಾಂಕಿಂಗ್ ವ್ಯವಸ್ಥೆಯನ್ನು ಸರಿಪಡಿಸಲು ನೀಲಕಂಠನಾಗಲೂ ಸಿದ್ಧ' ಎಂದಿದ್ದಾರೆ!

ದುಷ್ಟಶಕ್ತಿಗಳ ಸಂಹಾರಕ್ಕಾಗಿ ಭಗವಂತ ಶಿವ ವಿಷ ಕುಡಿದು ನೀಲಕಂಠನಾದಂತೆ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಹುಳುಕನ್ನು ಸರಿಪಡಿಸಲು ನಾವು ಎಂಥ ಸವಾಲುಗಳನ್ನೂ ಎದುರಿಸಲು ಸಿದ್ಧ ಎಂದು ಅವರು ಹೇಳಿದ್ದಾರೆ.

RBI Governor Urijit Patel shows displeasure about Banking frauds in India

"ಬ್ಯಾಂಕುಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳು ದೇಶದ ಭವಿಷ್ಯಕ್ಕೆ ಮಾರಕವಾಗಿದೆ. ಬ್ಯಾಂಕರ್ ಮತ್ತು ಉದ್ಯಮಿಗಳ ನಡುವಿನ ಸಂಬಂಧ ಮಿತಿಯನ್ನು ದಾಟದಂತೆ ನೋಡಿಕೊಳ್ಳಬೇಕಿದೆ" ಎಂದು ಅವರು ಹೇಳಿದರು. ಇತ್ತೀಚೆಗೆ ಪಂಜಾಬ್ ನ್ಯಾಶನಲ್ ಬ್ಯಾಂಕ್ ನಲ್ಲಿ ನೀರವ್ ಮೋದಿ ನಡೆಸಿದ ಸುಮಾರು 11,000 ಕೋಟಿ ರೂ. ಅವ್ಯವಹಾರ ಮತ್ತು ಇದಕ್ಕೂ ಮುನ್ನ ಮದ್ಯ ದೊರೆ ವಿಜಯ ಮಲ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಡೆಸಿದ್ದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+