Get Updates
Get notified of breaking news, exclusive insights, and must-see stories!

IAS: ಆರ್‌ಬಿಐ ಮಾಜಿ ಗವರ್ನರ್‌ ಶಕ್ತಿಕಾಂತ ದಾಸ್‌ಗೆ ಮಹತ್ವದ ಹುದ್ದೆ

ನವದೆಹಲಿ, ಫೆಬ್ರವರಿ 23: ತಮಿಳುನಾಡು ಕೇಡರ್‌ನ ಐಎಎಸ್ ಅಧಿಕಾರಿ, ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮಾಜಿ ಗವರ್ನರ್‌ ಆಗಿದ್ದ ಶಕ್ತಿಕಾಂತ ದಾಸ್ ಅವರಿಗೆ ಮಹತ್ವದ ಹುದ್ದೆಯನ್ನು ನೇಮಕ ಮಾಡಲಾಗಿದೆ. 2024ರ ಡಿಸೆಂಬರ್ 10ರಂದು ಶಕ್ತಿಕಾಂತ ದಾಸ್ ನಿವೃತ್ತರಾದರು ಮತ್ತು ಅವರ ಸ್ಥಾನಕ್ಕೆ ಸಂಜಯ್ ಮಲ್ಹೋತ್ರಾರನ್ನು ಕೇಂದ್ರ ಸರ್ಕಾರ ನೇಮಕ ಮಾಡಿತ್ತು.

ಆರ್‌ಬಿಐನ 25ನೇ ಗವರ್ನರ್‌ ಆಗಿದ್ದ ಶಕ್ತಿಕಾಂತ ದಾಸ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 2ನೇ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿ ಸರ್ಕಾರ ಆದೇಶವನ್ನು ಹೊರಡಿಸಿದೆ. ಗುಜರಾತ್ ಕೇಡರ್‌ನ ಐಎಎಸ್ ಅಧಿಕಾರಿ ಪ್ರಮೋದ್ ಕುಮಾರ್ ಮಿಶ್ರಾ ನರೇಂದ್ರ ಮೋದಿ ಅವರ ಮೊದಲ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

RBI Former Governor Shaktikanta Das Appointed As Principal Secretary To PM Modi

ಶಕ್ತಿಕಾಂತ ದಾಸ್ ನೇಮಕಾತಿ: ಶಕ್ತಿಕಾಂತ ದಾಸ್ ನೇಮಕದ ಬಳಿಕ ಇದೇ ಮೊದಲ ಬಾರಿಗೆ ಇಬ್ಬರು ಐಎಎಸ್ ಅಧಿಕಾರಿಗಳು ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಶಕ್ತಿಕಾಂತ ದಾಸ್ ಮತ್ತು ಪ್ರಮೋದ್ ಕುಮಾರ್ ಮಿಶ್ರಾ ಇಬ್ಬರೂ ಸಹ ಒಡಿಶಾ ರಾಜ್ಯದವರು.

ಕೃಷಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರಮೋದ್ ಕುಮಾರ್ ಮಿಶ್ರಾ ಇ 2019ರ ಸೆಪ್ಟೆಂಬರ್‌ನಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಈಗ ಶಕ್ತಿಕಾಂತ ದಾಸ್ ಸಹ ಅವರ ಜೊತೆಗೆ ಕಾರ್ಯ ನಿರ್ವಹಿಸಲಿದ್ದಾರೆ.

1980ನೇ ಬ್ಯಾಚ್‌ನ ತಮಿಳುನಾಡು ಕೇಡರ್‌ನ ಐಎಎಸ್ ಅಧಿಕಾರಿ ಶಕ್ತಿಕಾಂತ ದಾಸ್. ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಇತಿಹಾಸದಲ್ಲಿ ಎಂಎ ಪದವಿ ಪಡೆದಿದ್ದಾರೆ. ಬರ್ಮಿಗ್ ಹ್ಯಾಮ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

2018ರಲ್ಲಿ ಉರ್ಜಿತ್ ಪಟೇಲ್ ನಿವೃತ್ತಿಯ ಬಳಿಕ ಶಕ್ತಿಕಾಂತ ದಾಸ್ ಅವರನ್ನು ಆರ್‌ಬಿಐನ 25ನೇ ಗವರ್ನರ್‌ ಆಗಿ ನೇಮಕ ಮಾಡಲಾಯಿತು. 2021ರಲ್ಲಿ ಅವರ ಅಧಿಕಾರಾವಧಿಯನ್ನು ಮೂರು ವರ್ಷಗಳ ಕಾಲ ವಿಸ್ತರಣೆ ಮಾಡಲಾಗಿತ್ತು.

ಆರ್‌ಬಿಐನ ಇತಿಹಾಸದಲ್ಲಿಯೇ ಅತಿ ಹೆಚ್ಚು ದೀರ್ಘಾವಧಿ ಗವರ್ನರ್ ಆಗಿದ್ದ 2ನೇ ಅಧಿಕಾರಿ ಶಕ್ತಿಕಾಂತ ದಾಸ್. ಹಣದುಬ್ಬರವನ್ನು ನಿಯಂತ್ರಣ ಮಾಡಿ ಶಕ್ತಿಕಾಂತ ದಾಸ್ ದೇಶದ ಆರ್ಥಿಕ ಪ್ರಗತಿಯನ್ನು ಉತ್ತೇಜಿಸಿದ್ದರು. ಕೋವಿಡ್ ಸಮಯದಲ್ಲಿ ದೇಶದ ಆರ್ಥಿಕತೆ ಮೇಲೆ ಉಂಟಾದ ಪರಿಣಾಮವನ್ನು ಸರಿದೂಗಿಸಲು ಶಕ್ತಿಕಾಂತ ದಾಸ್ ಹಲವು ಕ್ರಮಗಳನ್ನು ಕೈಗೊಂಡಿದ್ದರು.

ಕೇಂದ್ರ ಸರ್ಕಾರ ಶಕ್ತಿಕಾಂತ ದಾಸ್ ಗವರ್ನರ್ ಆಗಿದ್ದ ಅವಧಿಯಲ್ಲಿ ಆರ್‌ಬಿಐಗೆ ದಾಖಲೆಯ 2.11 ಲಕ್ಷ ಕೋಟಿ ರೂ. ಡಿವಿಡೆಂಡ್ ನೀಡಿತ್ತು. ಈಗ ಶಕ್ತಿಕಾಂತ ದಾಸ್ ಪ್ರಧಾನಿ ನರೇಂದ್ರ ಮೋದಿ ಅವರು 2ನೇ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ಶಕ್ತಿಕಾಂತ ದಾಸ್ ಗವರ್ನರ್ ಆಗಿದ್ದಾಗ ಹಲವಾರು ನೀತಿಗಳ ಮೂಲಕ ದೇಶದ ಹಣಕಾಸು ಸ್ಥಿತಿಯನ್ನು ಉತ್ತಮಪಡಿಸಲು ಕ್ರಮಗಳನ್ನು ಕೈಗೊಂಡರು. ಹಲವಾರು ಸಾಂಪ್ರದಾಯಿಕ, ಅಸಾಂಪ್ರದಾಯಿಕ ಮತ್ತು ಹೊಸ ನೀತಿಗಳ ಮೂಲಕ ಆರ್‌ಬಿಐ ಮುನ್ನಡೆಸಿದರು. ಇದರಿಂದ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಂಡು, ಕೋವಿಡ್ ಮಹಾಮಾರಿಯ ಪರಿಣಾಮಗಳನ್ನು ಆರ್ಥಿಕ ಕ್ಷೇತ್ರದಲ್ಲಿ ಎದುರಿಸಲು ಸಹಕಾರಿಯಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+