Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್‌ ನ್ಯೂಸ್‌

Ration Card: ಪಡಿತರ ಚೀಟಿದಾರರಿಗೆ ಗುಡ್‌ ನ್ಯೂಸ್‌ವೊಂದು ಸಿಕ್ಕಿದೆ. ಬೇರೆ ಯಾವ ರಾಜ್ಯಗಳಿಗೆ ಹೋದರೂ ಅಲ್ಲಿಯೇ ರೇಷನ್ ಪಡೆಯಬಹುದು. ಹಾಗಾದ್ರೆ ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಬಹುತೇಕ ಮಂದಿಯ ತಲೆಯಲ್ಲಿ ಕಾಡುತ್ತಿದೆ. ಇಲ್ಲಿದೆ ನೋಡಿ ಉತ್ತರ.

ಉದ್ಯೋಗ, ಶಿಕ್ಷಣ ಹಾಗೂ ಉತ್ತಮ ಜೀವನೋಪಾಯಕ್ಕಾಗಿ ತಮ್ಮ ಸ್ವಗ್ರಾಮಗಳನ್ನು ತೊರೆದು ಬೇರೆ ನಗರ ಅಥವಾ ಹೊರರಾಜ್ಯಗಳಿಗೆ ವಲಸೆ ಹೋಗುವ ನಾಗರಿಕರಿಗೆ ಕೇಂದ್ರ ಸರ್ಕಾರವು ಪಡಿತರ ವಿತರಣೆ ವಿಚಾರದಲ್ಲಿ ನೆಮ್ಮದಿಯ ಸುದ್ದಿ ನೀಡಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಡಿಯಲ್ಲಿ ಜಾರಿಗೆ ತರಲಾಗಿರುವ 'ಒಂದು ದೇಶ, ಒಂದು ಪಡಿತರ ಚೀಟಿ' (One Nation One Ration Card - ONORC) ಯೋಜನೆಯ ಮೂಲಕ ವಲಸಿಗರು ದೇಶದ ಯಾವುದೇ ಮೂಲೆಯಲ್ಲಿದ್ದರೂ ತಮ್ಮ ಪಡಿತರವನ್ನು ಸುಲಭವಾಗಿ ಪಡೆಯಬಹುದಾಗಿದೆ.

Ration One Nation One Ration Card Get Free Ration in Any State Without Applying for a New Card

ಏನಿದು 'ಒಂದು ದೇಶ, ಒಂದು ಪಡಿತರ ಚೀಟಿ' ಯೋಜನೆ?

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ದೇಶದ ಯಾವುದೇ ಭಾಗದಲ್ಲಿದ್ದರೂ ಆಹಾರ ಧಾನ್ಯಗಳನ್ನು ತಲುಪಿಸುವ ಉದ್ದೇಶದಿಂದ ಈ ಸೌಲಭ್ಯವನ್ನು ಜಾರಿಗೆ ತರಲಾಗಿದೆ. ಹಿಂದೆ ಕಾರ್ಡ್‌ದಾರರು ತಮ್ಮ ಗ್ರಾಮ ಅಥವಾ ಬಡಾವಣೆಯ ನಿರ್ದಿಷ್ಟ ನ್ಯಾಯಬೆಲೆ ಅಂಗಡಿಗಳ ಮೇಲಷ್ಟೇ ಅವಲಂಬಿತರಾಗಬೇಕಿತ್ತು. ಆದರೆ ಈ ಸಂಯೋಜಿತ ಡಿಜಿಟಲ್ ವ್ಯವಸ್ಥೆಯ ಮೂಲಕ, ಅರ್ಹ ಕಾರ್ಡ್‌ದಾರರು ಯಾವುದೇ ರಾಜ್ಯಕ್ಕೆ ವಲಸೆ ಹೋದರೂ ಅಲ್ಲಿನ ಅಧಿಕೃತ ನ್ಯಾಯಬೆಲೆ ಅಂಗಡಿಯಲ್ಲಿ ತಮ್ಮ ಪಾಲಿನ ಧಾನ್ಯಗಳನ್ನು ಉಚಿತವಾಗಿ ಅಥವಾ ನಿಗದಿತ ದರದಲ್ಲಿ ಪಡೆಯಬಹುದು.

ಪಡಿತರ ಚೀಟಿದಾರರು ಗಮನಿಸಲೇಬೇಕಾದ ಮಹತ್ವದ ಮಾಹಿತಿ

ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಹೋದ ತಕ್ಷಣ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ಅಥವಾ ಹಳೆಯ ಕಾರ್ಡ್ ರದ್ದುಪಡಿಸುವ ಯಾವುದೇ ಅನಿವಾರ್ಯತೆ ಇರುವುದಿಲ್ಲ. ಉದಾಹರಣೆಗೆ ಬಿಹಾರದ ಪಡಿತರ ಚೀಟಿ ಹೊಂದಿರುವ ಕಾರ್ಮಿಕರು ಕರ್ನಾಟಕ ಅಥವಾ ರಾಜಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರೆ, ಅವರು ತಮ್ಮ ಹಳೆಯ ಕಾರ್ಡ್ ಬಳಸಿಯೇ ಪ್ರಸ್ತುತ ವಾಸವಿರುವ ಜಾಗದಲ್ಲೇ ಪಡಿತರ ಪಡೆಯಬಹುದು.

ಈ ಯೋಜನೆಯಿಂದ ಏನೆಲ್ಲಾ ಪ್ರಯೋಜನಗಳಿವೆ?

ಈ ಯೋಜನೆಯ ಪ್ರಮುಖ ವಿಶೇಷತೆ ಅಂದ್ರೆ ಒಂದೇ ಕುಟುಂಬದ ಸದಸ್ಯರು ಬೇರೆ ಬೇರೆ ಸ್ಥಳಗಳಲ್ಲಿದ್ದರೂ ತಮ್ಮ ಹಂಚಿಕೆಯ ಆಧಾರದ ಮೇಲೆ ಭಾಗಶಃ ಧಾನ್ಯ ಪಡೆಯಬಹುದು. ಅಂದರೆ ಮನೆಯ ಒಬ್ಬ ವ್ಯಕ್ತಿ ಉದ್ಯೋಗಕ್ಕಾಗಿ ಮಹಾರಾಷ್ಟ್ರದಲ್ಲಿದ್ದು, ಉಳಿದ ಕುಟುಂಬದವರು ತವರು ರಾಜ್ಯದಲ್ಲಿದ್ದರೆ, ಇಬ್ಬರೂ ಆಯಾ ಪ್ರದೇಶದ ನ್ಯಾಯಬೆಲೆ ಅಂಗಡಿಗಳಲ್ಲೇ ತಮ್ಮ ಪಾಲಿನ ಧಾನ್ಯಗಳನ್ನು ಸಂಗ್ರಹಿಸಬಹುದು.

ಬೇರೆ ರಾಜ್ಯದಲ್ಲಿ ರೇಷನ್ ಪಡೆಯುವ ಸರಳ ವಿಧಾನಗಳು

* ನಿಮ್ಮ ಹತ್ತಿರದ ಅಧಿಕೃತ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಒಎನ್‌ಒಆರ್‌ಸಿ ಸೌಲಭ್ಯದಡಿ ಧಾನ್ಯ ಪಡೆಯುವುದಾಗಿ ತಿಳಿಸಿ.

* ಅಂಗಡಿಯಲ್ಲಿರುವ ಇ-ಪಿಒಎಸ್‌ನಲ್ಲಿ ಪಡಿತರ ಚೀಟಿ ಅಥವಾ ಆಧಾರ್ ಸಂಖ್ಯೆಯನ್ನು ನಮೂದಿಸಿ.

* ಆಧಾರ್ ಆಧಾರಿತ ಬಯೋಮೆಟ್ರಿಕ್ ಬೆರಳಚ್ಚು ನೀಡಿ ಗುರುತಿನ ಪರಿಶೀಲನೆ ಪೂರ್ಣಗೊಳಿಸಿ.

* ಪರಿಶೀಲನೆ ಯಶಸ್ವಿಯಾದ ನಂತರ ನಿಗದಿತ ಧಾನ್ಯವನ್ನು ಪಡೆದು, ವಿತರಣೆಯ ಅಧಿಕೃತ ರಶೀದಿಯನ್ನು ಪಡೆದುಕೊಳ್ಳಿ.

ಪರಿಹಾರ ಕಂಡುಕೊಳ್ಳುವುದು ಹೇಗೆ?

ಇ-ಪಿಒಎಸ್ ಯಂತ್ರದ ತಾಂತ್ರಿಕ ತೊಂದರೆ ಅಥವಾ ದಾಖಲೆಗಳ ಹೊಂದಾಣಿಕೆಯಾಗದಿದ್ದರೆ, ಕಾರ್ಡ್‌ದಾರರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಚಿತ ಸಹಾಯವಾಣಿ, ಕೇಂದ್ರ ಆಹಾರ ಇಲಾಖೆಯ ವೆಬ್‌ಸೈಟ್ ಅಥವಾ 'ಮೇರಾ ರೇಷನ್' ಮೊಬೈಲ್ ಅಪ್ಲಿಕೇಶನ್ ಮೂಲಕ ದೂರು ದಾಖಲಿಸಿ ಪರಿಹಾರ ಕಂಡುಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+