Get Updates
Get notified of breaking news, exclusive insights, and must-see stories!

Ratan Tata: ʼನನ್ನ ಬಗ್ಗೆ ಯೋಚಿಸಿದ್ದಕ್ಕಾಗಿ ಧನ್ಯವಾದಗಳುʼ ರತನ್‌ ಟಾಟಾ ಕೊನೆಯ ಪೋಸ್ಟ್‌

ಹಿರಿಯ ಉದ್ಯಮಿ ರತನ್ ಟಾಟಾ ಇಹಲೋಕ ತ್ಯಜಿಸಿದ್ದಾರೆ. ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದ ರತನ್ ಟಾಟಾ ಅವರು ದಕ್ಷಿಣ ಮುಂಬೈನ ಬೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ತಡ ರಾತ್ರಿ 11.30ಕ್ಕೆ ಕೊನೆಯುಸಿರೆಳೆದರು.

ಕೇವಲ ಎರಡು ದಿನಗಳ ಹಿಂದೆ ಸೋಮವಾರ, ಕೈಗಾರಿಕೋದ್ಯಮಿ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ತನ್ನ ಆರೋಗ್ಯದ ಬಗ್ಗೆ ಹರಡುತ್ತಿರುವ ವದಂತಿಗಳನ್ನು ತಳ್ಳಿಹಾಕಿದರು. "ನನ್ನ ಬಗ್ಗೆ ಯೋಚಿಸಿದ್ದಕ್ಕಾಗಿ ಧನ್ಯವಾದಗಳು" ಎಂದು ತಿಳಿಸಿದ್ದರು.

Ratan Tata s Last Social Media Post Thank You For Thinking Of Me

"ನನ್ನ ಆರೋಗ್ಯದ ಬಗ್ಗೆ ಹರಡುತ್ತಿರುವ ಇತ್ತೀಚಿನ ವದಂತಿಗಳ ಬಗ್ಗೆ ನನಗೆ ತಿಳಿದಿದೆ ಮತ್ತು ಈ ಹಕ್ಕುಗಳು ಆಧಾರರಹಿತವಾಗಿವೆ ಎಂದು ಎಲ್ಲರಿಗೂ ಭರವಸೆ ನೀಡಲು ನಾನು ಬಯಸುತ್ತೇನೆ. ನನ್ನ ವಯಸ್ಸು ಮತ್ತು ಸಂಬಂಧಿತ ವೈದ್ಯಕೀಯ ಪರಿಸ್ಥಿತಿಗಳಿಂದಾಗಿ ನಾನು ಪ್ರಸ್ತುತ ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಿದ್ದೇನೆ. ನಾನು ಉತ್ತಮ ಉತ್ಸಾಹದಲ್ಲಿ ಇರುತ್ತೇನೆ " ಎಂದು ಟಾಟಾ ಎಂದು ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಇದೇ ಅವರ ಕೊನೆಯ ಪೋಸ್ಟ್ ಆಗಿದ್ದು, ಈ ಫೋಸ್ಟ್‌ ವೈರಲ್ ಆಗಿದೆ.

ನಾವು ಅವರ ಸಹೋದರರು, ಸಹೋದರಿಯರು ಮತ್ತು ಕುಟುಂಬ ಅವರನ್ನು ಮೆಚ್ಚಿದ ಎಲ್ಲರಿಂದ ಪ್ರೀತಿ ಮತ್ತು ಗೌರವದ ಸಾಂತ್ಮನ ಪಡೆಯುತ್ತೇವೆ. ಅವರು ಇನ್ನು ಮುಂದೆ ವೈಯಕ್ತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಪರಂಪರೆ, ಉದ್ದೇಶ, ಮಾರ್ದಶ್ರನ ಭವಿಷ್ಯದ ಪೀಳಿಗೆಯನ್ನು ಪ್ರೇರೇಪಿಸುತ್ತದೆ ಎಂದು ಟಾಟಾ ಕುಟುಂಬ ತಿಳಿಸಿದೆ.

ರಾಜಕೀಯ ಗಣ್ಯರಿಂದ ಸಂತಾಪ

ಶ್ರೇಷ್ಠ ಉದ್ಯಮಿ ರತನ್ ಟಾಟಾ ಅವರ ನಿಧನದಿಂದ ದೇಶಕ್ಕೆ ಅಪಾರ ನಷ್ಟವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ರಾಷ್ಟ್ರ ನಿರ್ಮಾಣದಲ್ಲಿ ಮಹಾನ್ ಹೆಜ್ಜೆಗುರುತುಗಳನ್ನು ಉಳಿಸಿದ ರತನ್ ಟಾಟಾ ಅವರು ದೂರದೃಷ್ಟಿಯ ಉದ್ಯಮಿ. ಅವರಿಗೆ ಅನೇಕ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ನೀಡಲಾಗಿತ್ತು. ಸೇವಾ ಕ್ಷೇತ್ರದಲ್ಲೂ ಅವರ ಹೆಸರು ಚಿರಸ್ಥಾಯಿ. ಉದ್ಯಮ, ಪರೋಪಕಾರ ಮತ್ತು ನಮ್ರತೆಯಲ್ಲಿ ಅವರ ಪರಂಪರೆ ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತಲೇ ಇರುತ್ತದೆ ಎಂದು ತಿಳಿಸಿದ್ದಾರೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಹೃದಯದಾಳದ ಸಂತಾಪಗಳು ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಖ್ಯಾತ ಉದ್ಯಮಿ ರತನ್ ಟಾಟಾ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ತಮ್ಮ ದೂರದೃಷ್ಟಿಯ ಮೂಲಕ ಉದ್ಯಮ ಜಗತ್ತನ್ನು ಆಳಿದ ರತನ್ ಟಾಟಾ, ಇಡೀ ದೇಶಕ್ಕೆ ಸ್ಫೂರ್ತಿಯಾಗಿದ್ದರು. ದೇಶದ ಇತಿಹಾಸದಲ್ಲಿ ಶಾಶ್ವತವಾಗಿ ತಮ್ಮ ಹೆಸರು ಉಳಿಯುವಂತೆ ಮಾಡಿದ್ದಾರೆ ಎಂದು ಹೆಬ್ಬಾಳಕರ್ ಸ್ಮರಿಸಿದ್ದಾರೆ.

ಭಾರತದ ಅಸ್ಮಿತೆ ಬೆಳೆಸಲು ಟಾಟಾ ಅವರ ಪಾತ್ರ ಅತ್ಯಂತ ದೊಡ್ಡದು. ಯುವ ಉದ್ಯಮಿಗಳಿಗೆ ಅವರು ದೊಡ್ಡ ಆದರ್ಶ. ಅವರ ನಿಧನದಿಂದ ದೇಶಕ್ಕೆ ಅಪಾರ ನಷ್ಟವಾಗಿದೆ. ಕೇವಲ ಉದ್ಯಮಿಯಾಗಿ ಮಾತ್ರವಲ್ಲ, ಅವರ ಟ್ರಸ್ಟ್ ಗಳ ಮೂಲಕ ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿದ್ದಾರೆ. ಅವರು ತಮ್ಮ ಸರಳತೆ ಹಾಗೂ ಪರೋಪಕಾರಕ್ಕಾಗಿ ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ಅವರ ಕುಟುಂಬಕ್ಕೆ ಮತ್ತು ಟಾಟಾ ಸಮೂಹಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಪ್ರಾರ್ಥಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+