Get Updates
Get notified of breaking news, exclusive insights, and must-see stories!

Ratan Tata passed away: "ರತನ್‌ ಟಾಟಾ" ದೂರದೃಷ್ಟಿಯ ನಾಯಕ, ಮಾನವತಾವಾದಿ ಎಂದ ಮೋದಿ

ಭಾರತದ ಕೋಟ್ಯಾಂತರ ಜನ ಅಭಿಮಾನಿಗಳ ರತನ್‌ ಟಾಟಾ ಇನ್ನಿಲ್ಲ. ರತನ್‌ ಟಾಟಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ರತನ್ ಟಾಟಾ ಅವರು ದೂರದೃಷ್ಟಿಯ ನಾಯಕರಾಗಿದ್ದರು ಹಾಗೂ ಸಹಾನುಭೂತಿ ಸ್ವಭಾವದವರು ಎಂದು ಮೋದಿ ಹೇಳಿದ್ದಾರೆ.

ರತನ್‌ ಟಾಟಾ ಅವರು, ವ್ಯಾಪಾರಕ್ಕೆ ಮಾತ್ರ ಸೀಮಿತರಾಗಿರಲಿಲ್ಲ. ಅವರ ಸಾಮಾಜಿಕ ಬದ್ಧತೆ ಹಾಗೂ ನಮತ್ರೆ ಎಲ್ಲರಿಗೂ ಮಾದರಿಯಾಗಿದೆ. ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ಅವರು, ರತನ್‌ಟಾಟಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಭಾರತದ ಅತ್ಯಂತ ಹಳೆಯ ಹಾಗೂ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಟಾಟಾ ಸಮೂಹವನ್ನು ಅವರು ಮುನ್ನಡೆಸಿದ್ದರು. ಟಾಟಾ ಜಿ ಅವರು ದೂರದೃಷ್ಟಿಯ ವ್ಯಾಪಾರ, ನಾಯಕತ್ವವನ್ನು ಹೊಂದಿದ್ದರು. ಅಸಾಧಾರಣ ವ್ಯಕ್ತಿಯಾಗಿದ್ದರು ಎಂದು ಶ್ಲಾಘಿಸಿದ್ದಾರೆ. ಟಾಟಾ ಅವರ ಪ್ರಭಾವವು ಕಾರ್ಪೊರೇಟ್ ಕ್ಷೇತ್ರವನ್ನು ಮೀರಿ ವಿಸ್ತರಿಸಿದೆ. ವ್ಯಾಪಾರ ಕ್ಷೇತ್ರಕ್ಕೆ ಮಾತ್ರ ಅವರು ಸೀಮಿತವಾಗಿರಲಿಲ್ಲ ಎಂದಿದ್ದಾರೆ.

ಟಾಟಾ ಅವರು ತಮ್ಮ ವಿನಮ್ರತೆ ಹಾಗೂ ಕರುಣಾಮಯಿಯ ಸ್ವಭಾವದಿಂದ ಲಕ್ಷಾಂತರ ಜನರ ಪ್ರೀತಿಗೆ ಪಾತ್ರರಾಗಿದ್ದರು. ಸಮಾಜದ ಸುಧಾರಣೆಗೆ ಬದ್ಧತೆಯನ್ನು ಹೊಂದಿದ್ದರು. ಈ ಕಾರಣಗಳಿಂದ ಅವರು ಲಕ್ಷಾಂತರ ಜನರ ಮೆಚ್ಚುಗೆ ಹಾಗೂ ಪ್ರೀತಿಗೆ ಕಾರಣರಾಗಿದ್ದರು. ಇನ್ನು ರತನ್‌ ಟಾಟಾ ಅವರು ಕೇವಲ ವ್ಯಾಪಾರ ಕ್ಷೇತ್ರಕ್ಕೆ ಮಾತ್ರ ಸೀಮಿತರಾಗಿರಲಿಲ್ಲ. ವ್ಯಾಪಾರ ಹೊರತಾಗಿಯೂ ಹಲವು ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ವ್ಯಾಪಾರ ಕ್ಷೇತ್ರ ಹಾಗೂ ದೇಶದ ಜನ ರತನ್‌ ಟಾಟಾ ಅವರಿಂದ ಪ್ರಭಾವಿತರಾಗಿದ್ದಾರೆ. ಅವರ ಮೇಲೆ ಅಪಾರ ಗೌರವ ಹಾಗೂ ಅವರ ಕಾರ್ಯಗಳಿಗೆ ಮೆಚ್ಚುಗೆ ಇದೆ ಎಂದು ಹೇಳಿದ್ದಾರೆ.

Ratan Naval Tata

ರತನ್‌ ಟಾಟಾ ಇನ್ನಿಲ್ಲ

ಭಾರತದ ಹೆಮ್ಮೆಯ ಹಾಗೂ ಮಧ್ಯಮ ವರ್ಗದ ಪ್ರೀತಿಯ ರತನ್‌ ಟಾಟಾ ಅವರು ಇನ್ನಿಲ್ಲ. ರತನ್‌ಟಾಟಾ ಅವರು ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ. ಅವರ ಆರೋಗ್ಯ ಗಂಭೀರವಾಗಿದೆ ಎಂದು ಬುಧವಾರ ಸಂಜೆಯಷ್ಟೇ ಸುದ್ದಿಯಾಗಿತ್ತು. ರಾತ್ರಿ ವೇಳೆಗೆ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ರತನ್‌ಟಾಟಾ ಅವರನ್ನು ಸೋಮವಾರ ಮಹಾರಾಷ್ಟ್ರದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾರಂಭದಲ್ಲಿ ಅವರು ಸಾಮಾನ್ಯ ಆರೋಗ್ಯ ಪರೀಕ್ಷೆ ಒಳಪಟ್ಟಿದ್ದಾರೆ ಎಂದೇ ಹೇಳಲಾಗಿತ್ತು. ಅಲ್ಲದೇ ಅವರು ಸಹ ನಾನು ಆರೋಗ್ಯವಾಗಿಯೇ ಇದ್ದೇನೆ. ಚಿಂತಿಸಬೇಡಿ ಎಂದೇ ಹೇಳಿದ್ದರು. ಆದರೆ, ಬುಧವಾರ ಸಂಜೆಯ ವೇಳೆಗೆ ಅವರ ಆರೋಗ್ಯ ಕ್ಷೀಣಿಸುತ್ತಿದೆ ಎನ್ನುವ ವರದಿಗಳು ಬರಲು ಪ್ರಾರಂಭಿಸಿತ್ತು. ಬುಧವಾರ ತಡರಾತ್ರಿ ಅವರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ. ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಅವರಿಗೆ 86 ವರ್ಷವಾಗಿತ್ತು. ಅವರು ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+