Get Updates
Get notified of breaking news, exclusive insights, and must-see stories!

Ratan Tata Death: ಈ ಕಾರಣಕ್ಕೆ ಮುಚ್ಚಿಟ್ಟಿದ್ರಾ ರತನ್ ಟಾಟಾ ಆರೋಗ್ಯ ಸಮಸ್ಯೆ

ದೇಶದ ಹೆಮ್ಮೆಯ ಹಾಗೂ ಮಧ್ಯವರ್ಗದ ಅಚ್ಚುಮೆಚ್ಚಿನ ರತನ್‌ಟಾಟಾ ಅವರು ಬುಧವಾರ ಮೃತಪಟ್ಟಿದ್ದಾರೆ. ಆದರೆ, ಅವರ ಆರೋಗ್ಯ ಸಮಸ್ಯೆಯನ್ನು ಮುಚ್ಚಿಡಲಾಗಿದೆಯೇ ಎನ್ನುವ ಅನುಮಾನ ಎದುರಾಗಿದೆ. ಸೋಮವಾರವಷ್ಟೇ ಅವರನ್ನು ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಬುಧವಾರ ಸಂಜೆ ಅವರ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ವರದಿಯಾಗಿತ್ತು. ಬುಧವಾರ ತಡರಾತ್ರಿ ಅವರು ಸಾವನ್ನಪ್ಪಿರುವುದು ವರದಿಯಾಗಿದೆ. ಈ ನಡುವೆ ಅವರ ಆರೋಗ್ಯ ಸಮಸ್ಯೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದುರಾಗಿವೆ.

ರತನ್‌ಟಾಟಾ ಅವರಿಗೆ ಭಾರತದಲ್ಲಿ ಕೋಟ್ಯಾಂತರ ಜನ ಅಭಿಮಾನಿಗಳು ಇದ್ದಾರೆ. ಸೋಮವಾರ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆಗಲೇ ಹಲವು ಅನುಮಾನಗಳು ಮೂಡಿದ್ದವು. ಆದರೆ, ಅವರು ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗಿತ್ತು. ಈ ನಡುವೆ ರತನ್‌ ಟಾಟಾ ಅವರೇ ಟ್ವೀಟ್‌ ಮಾಡಿ ಸಂದೇಶ ಹಂಚಿಕೊಂಡಿದ್ದರು. ಆದರೆ, ಈ ನಡುವೆ ನಡೆದ ಬೆಳವಣಿಗೆಗಳು ಅವರು ಅನಾರೋಗ್ಯ ಅಥವಾ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಎನ್ನುವ ಅನುಮಾನವನ್ನು ಮೂಡಿಸಿದೆ. ಇದಕ್ಕೆ ಕಾರಣವೂ ಇದೆ. ರತನ್‌ ಟಾಟಾ ಅವರು ಸೋಮವಾರ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಸಂಜೆಯಿಂದಲೇ ಅವರ ಆರೋಗ್ಯ ಗಂಭೀರವಾಗಿದೆ ಎಂದು ಹೇಳಲಾಗಿತ್ತು. ಆದರೆ, ಕೆಲವೇ ಗಂಟೆಗಳಲ್ಲಿ ಅವರು ಮೃತಪಟ್ಟಿದ್ದಾರೆ ಎನ್ನುವ ವರದಿ ಪ್ರಕಟವಾಗಲು ಪ್ರಾರಂಭವಾಯಿತು. ಇದು ಅನುಮಾನಕ್ಕೆ ಕಾರಣವಾಗಿದೆ.

Ratan Tata Death Ratan Tata s health problem was covered up for this reason

ಆರೋಗ್ಯವಾಗಿ ಇದ್ದೇನೆ ಎಂದಿದ್ದರು: ರತನ್‌ಟಾಟಾ ಅವರ ಆರೋಗ್ಯ ಇತ್ತೀಚಿನ ದಿನಗಳಲ್ಲಿ ಕ್ಷೀಣಿಸಿತ್ತು. ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಸೋಮವಾರ ಅವರ ಆರೋಗ್ಯ ಕ್ಷೀಣಿಸಿದೆ. ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗಿತ್ತು. ಸೋಮವಾರವೇ ಅವರ ಆರೋಗ್ಯ ಪರಿಸ್ಥಿತಿ ಸರಿಇಲ್ಲ ಎನ್ನಲಾಗಿತ್ತು. ಆದರೆ, ರತನ್‌ ಟಾಟಾ ಅವರೇ ಸೋಷಿಯಲ್‌ ಮೀಡಿಯಾದಲ್ಲಿ ನಾನು ಆರೋಗ್ಯವಾಗಿ ಇದ್ದೇನೆ. ಭಯ ಬೇಡ ಎಂದು ಪೋಸ್ಟ್‌ ಮಾಡಿದ್ದರು. ಈ ವಿಚಾರ ಇದೀಗ ಚರ್ಚೆಗೆ ಕಾರಣವಾಗಿದೆ. ಆ ಪೋಸ್ಟ್‌ಗಳನ್ನು ರತನ್‌ ಟಾಟಾ ಅವರ ಮಾಧ್ಯಮ ನಿರ್ವಹಣೆಯಿಂದ ಮಾಡಲಾಗಿತ್ತೇ. ಇಲ್ಲ ಆ ಸಂದರ್ಭದಲ್ಲಿ ಅವರು ಆರೋಗ್ಯವಾಗಿದ್ದರೆ ಎನ್ನುವುದು ಸಹ ಪ್ರಶ್ನೆಯಾಗಿದೆ. ಆದರೆ, ಈ ರೀತಿ ಆರೋಗ್ಯ ಸಮಸ್ಯೆಯನ್ನು ಮುಚ್ಚಿಡುವ ಪ್ರಶ್ನೆ ಇಲ್ಲ ಎಂದೂ ಹೇಳಲಾಗಿದೆ. ಆ ಒಂದು ಕಾರಣಕ್ಕಾಗಿ ಅವರ ಆರೋಗ್ಯ ಸಮಸ್ಯೆಯನ್ನು ವಿಳಂಬವಾಗಿ ಪ್ರಕಟಿಸಿರುವ ಸಾಧ್ಯತೆ ಇದೆ.

ರಕ್ಷಣೆ ದೃಷ್ಟಿಯಿಂದ ವಿಳಂಬ ?

ರತನ್‌ಟಾಟಾ ಅವರಿಗೆ ಕೋಟ್ಯಾಂತರ ಜನ ಅಭಿಮಾನಿಗಳು ಇದ್ದಾರೆ. ಅಲ್ಲದೇ ನೂರಾರು ಬ್ಯುಸಿನೆಸ್‌ಗಳಿವೆ. ಗಣ್ಯರು ನಿಧನರಾಧಾಗ ಹೆಚ್ಚು ಭದ್ರತೆ ಹಾಗೂ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಅವರ ಕುಟುಂಬದವರಿಗೂ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮಯಬೇಕಾಗುತ್ತದೆ. ಕಾನೂನು ಹಾಗೂ ಭದ್ರತೆಯ ದೃಷ್ಟಿಯಿಂದಲೂ ಅವರ ಸಾವಿನ ಅಥವಾ ಆರೋಗ್ಯ ಸಮಸ್ಯೆಯನ್ನು ವಿಳಂಬವಾಗಿ ಪ್ರಕಟಿಸಲಾಗಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಎದುರಾಗಿದೆ.

Ratan Tata Death Ratan Tata s health problem was covered up for this reason

ರತನ್‌ಟಾಟಾ ಅವರ ಹಿನ್ನೆಲೆ: ರತನ್‌ ಟಾಟಾ ಅವರು ಉದ್ಯಮದ ಕಾರಣದಿಂದ ಮಾತ್ರವಲ್ಲ ಭಾರತೀಯರಿಗೆ ಅವರ ಆಸೆಗಳನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಅವರ ಆಸೆಗಳನ್ನು ಈಡೇರಿಸಿದ ವ್ಯಕ್ತಿಯಾಗಿದ್ದಾರೆ. ಭಾರತದಲ್ಲಿನ ಮಧ್ಯಮ ವರ್ಗದವರ ಕನಸುಗಳನ್ನು ಈಡೇರಿಸುವಲ್ಲಿ ಅವರ ಪಾತ್ರ ದೊಡ್ಡದಿದೆ. ಭಾರತೀಯ ಉದ್ಯಮದ ಅಮೋಘ ಸಾಧನೆಯನ್ನು ಅವರು ಮಾಡಿದ್ದಾರೆ. ರತನ್‌ ಟಾಟಾ ಅವರ ಬಗ್ಗೆ ಭಾರತದ ಮಧ್ಯಮ ವರ್ಗಕ್ಕೆ ಅಪಾರ ಗೌರವ ಹಾಗೂ ಅಭಿಮಾನ ಇದೆ. ರತನ್‌ ಟಾಟಾ ಅವರು, ಟಾಟಾ ಸನ್ಸನ್ ಅಧ್ಯಕ್ಷರಾಗಿ 1991ರಲ್ಲಿ ಅಧ್ಯಕ್ಷರಾದರು. ಅಲ್ಲಿಂದ 2012 ರವರೆಗೆ ದೇಶದ ಪ್ರತಿಷ್ಠಿತ ಟಾಟಾ ಸಮೂಹದ ಮುಂದಾಳತ್ವ ವಹಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+