Rashmika Mandanna: ನಟಿ ರಶ್ಮಿಕಾ ಹಂಚಿಕೊಂಡ್ರು ಅಟಲ್ ಸೇತು ಬ್ರಿಡ್ಜ್ ವಿಡಿಯೋ: ಪ್ರಧಾನಿ ಮೋದಿ ಪ್ರತಿಕ್ರಿಯೆ
ನವದೆಹಲಿ, ಮೇ 16: ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣಾ ಅವರು ಇತ್ತೀಚೆಗೆ ದೇಶದ ಅಭಿವೃದ್ಧಿ ಬಗ್ಗೆ ಮಾತನಾಡಿದ್ದರು. ಇದೀಗ ಅವರು ಹೊಸದಾಗಿ ನಿರ್ಮಿಸಿದ 'ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್' ಕುರಿತು ಇಂಟ್ರಸ್ಟಿಂಗ್ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿಯವರು ಶೇರ್ ಮಾಡಿರುವುದು ವಿಶೇಷ.
ನಟಿ ರಶ್ಮಿಕಾ ಮಂದಣ್ಣ (Actress Rahsmika Mandanna) ತಮ್ಮ ಮುಂದಿನ 'ಪುಷ್ಪ 2: ದಿ ರೂಲ್' ಸಿನಿಮಾ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ. ಈ ವೇಳೆ ಅವರು ದೇಶದ ಜನರನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ (ಎಕ್ಸ್) ಕರೆದೊಯ್ದು ನೂತನವಾಗಿ ನಿರ್ಮಾಣವಾದ ಭಾರತದ ಅತೀ ಉದ್ದದ ಸಮುದ್ರ ಸೇತುವೆ (ಬ್ರಿಡ್ಜ್) 'ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಶೇವಾ ಅಟಲ್' ಸೇತುವೆಯನ್ನು ಪರಿಚಯಿಸಿದ್ದಾರೆ.

ದೇಶದ ಅತೀ ಉದ್ದದ ಸೀ ಬ್ರೀಡ್ಜ್ ಮೇಲೆ ಸಂಚರಿಸುವ ಮತ್ತು ಹೆದ್ದಾರಿ ಕುರಿತು ಚೆಂದದ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಭಾರತವು ಮಹತ್ವದ ಸಾಧನೆಗಳಲ್ಲಿ ಇದು ಒಂದಾಗಿದೆ. ಕೇವಲ ಏಳು ವರ್ಷದಲ್ಲಿ ಇಂತಹ ಅದ್ಭುತ ಕೆಲಸ ಸಾಧ್ಯವಾಗಿದೆ ಎಂದು ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ.
ರಶ್ಮಿಕಾ ವಿಡಿಯೋದಲ್ಲಿ ಏನಿದೆ?
ನನ್ನ ನೋಡಬೇಡಿ, ಕಾರಿನ ಹೊರಗೆ ನೋಡಿ. ನೀವೀಗ ಸಮುದ್ರ ಸೇತುವೆ ನೋಡುತ್ತಿದ್ದರೆ ನಿಮ್ಮ ಕಣ್ಣುಗಳನ್ನು ತೆರೆಯಿರಿ ಬ್ರೋ....ಇದು ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್, ಭಾರತದ ಇದುವರೆಗಿನ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ. ಒಟ್ಟು ಆರು ಲೈನ್ (ಪಥ) ಇರುವ ಬ್ರೀಡ್ ಬರೋಬ್ಬರಿ 22 ಕಿಮೀ ಉದ್ದವಿದೆ.

ಈ ಬ್ರಿಡ್ಜ್‌ನಿಂದಾಗಿ ನಿರಂತರ ಎರಡು ಗಂಟೆಗಳ ಪ್ರಯಾಣದ ಸಮಯವನ್ನು ಇದು 20 ನಿಮಿಷಗಳಿಗೆ ಕಡಿತಗೊಳಿಸಿದೆ. ನಂಬಲು ಅಸಾಧ್ಯವೆನಿಸಿದರೂ ಇದು ನಿಜ. ಕೆಲವೇ ವರ್ಷಗಳ ಹಿಂದೆ ಭಾರತದಲ್ಲಿ ಇಂತಹ ಬೃಹತ್ ಸೀ ಬ್ರಿಡ್ಜ್ ನಿರ್ಮಾಣವಾಗುತ್ತದೆ ಎಂದು ಭಾವಿಸಿರಲಿಲ್ಲ. ಇದೀಗ ಭಾರತವು ದೊಡ್ಡ ಕನಸನ್ನು ನನಸು ಮಾಡಿದೆ ಎಂದು ನಟಿ ರಶ್ಮಿಕಾ ಮಂದಣ್ಣ ವಿವರಿಸಿದ್ದಾರೆ.
ಅಟಲ್ ಸೇತು ದೇಶದ ಭವಿಷ್ಯದ ಬಾಗಿಲುಗಳನ್ನು ತೆರೆದಿಟ್ಟಿದೆ. ಇದು ಬರೀ ಸೇತುವೆ ಅಲ್ಲ, ಯುವ ಭಾರತಕ್ಕೆ ಇದೊಂದು ಗ್ಯಾರಂಟಿಯಾಗಿದೆ. ಇನ್ನು ಭಾರತದಲ್ಲಿ ರಾಷ್ಟ್ರ ನೀವು ಇಂತಹ 100 ರಷ್ಟು ಅಟಲ್ ಸೇತು ಸೇತುವೆಗಳನ್ನು ಪಡೆಯಲು ಬಯಸುವಿರಾ? ಹಾಗಾದರೆ ಎಚ್ಚೆತ್ತುಕೊಂಡು ಅಭಿವೃದ್ಧಿಗಾಗಿ ಮತ ಚಲಾಯಿಸಿ' ಎಂದು ಅವರು ತಿಳಿಸಿದ್ದಾರೆ.
South India to North India… West India to East India… Connecting people, connecting hearts! 🤍 #MyIndia pic.twitter.com/nma43rN3hM
— Rashmika Mandanna (@iamRashmika) May 16, 2024
ರಶ್ಮಿಕಾ ವಿಡಿಯೋ ಶೇರ್ ಮಾಡಿದ ಪ್ರಧಾನಿ ಹೇಳಿದ್ದೇನು?
ಅಟಲ್ ಸೇತು ಕುರಿತ ನಟಿ ರಶ್ಮಿಕಾ ಮಂದಣ್ಣಾ ಅವರ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ಹ್ಯಾಂಡರ್‌ನಿಂದ ಶೇರ್ ಆಗಿದೆ. ಇದರೊಂದಿಗೆ ದೇಶದ ಜನರನ್ನು ಸಂಪೂರ್ಣವಾಗಿ ಸಂಪರ್ಕಿಸುವುದು ಹಾಗೂ ಅವರ ಜೀವನವನ್ನು ಸುಧಾರಿಸುವುದಕ್ಕಿಂತ ಮತ್ತೇನು ಹೆಚ್ಚು ತೃಪ್ತಿಕರವಾದದ್ದು ಇಲ್ಲ ಎಂದು ಪ್ರಧಾನಿಯವರು ಬರೆದುಕೊಂಡಿದ್ದಾರೆ.
ಬುಧವಾರವಷ್ಟೇ ಅಲಟ್ ಸೇತುವೆ ಮೇಲೆ ಶೂಟಿಂಗ್ ವೇಳೆ ಕಳೆದ ಹತ್ತು ವರ್ಷ ಸಾಧನೆ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಯನ್ನು ನಟಿ ಕೊಂಡಾಡಿದ್ದರು. ಈ ಬಗ್ಗೆ ಎಎನ್‌ಐ ವರದಿ ಮಾಡಿತ್ತು.
ಸದ್ಯ ರಶ್ಮಿಕಾ ಮಂದಣ್ಣ ಅವರು ಪ್ರಧಾನಿ ಮೋದಿ ಹೊಗಳಿದ್ದಾರೆ ಎಂದು ಎಡಪಂಥದವರಿಂದ ಟೀಕೆ ಎದುರಿಸುತ್ತಿದ್ದಾರೆ. ನಟ ಚೇತನ್ ಅಹಿಂಸಾ ಅವರು ರಶ್ಮಿಕಾಗೆ ಟಾಂಗ್ ಕೊಟ್ಟಿದ್ದಾರೆ. ಇನ್ನು ಮಾಜಿ ಸಚಿವೆ ಅಂಜಲಿ ನಿಂಬಾಳ್ಕರ್ ಅವರು ಬೂಟು ನೆಕ್ಕುವುದನ್ನು ಬಿಡಿ ರಶ್ಮಿಕಾ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನೂ ನಟ ಚೇತನ್ ಅಹಿಂಸಾ ಅವರು, ರಶ್ಮಿಕಾಗೆ ಅಜ್ಞಾನಿ ಎಂದಿದ್ದಾರೆ. ಪ್ರಧಾನಿಯ ಸಾಧನೆ, ಕಳೆದ ಹತ್ತು ವರ್ಷದ ಸಾಧನೆ ಹೊಗಳಿದ್ದಕ್ಕೆ ಎಕ್ಸ್ ಖಾತೆಯಲ್ಲಿ ಟಾಂಗ್ ಕೊಟ್ಟಿದ್ದಾರೆ. ಹತ್ತು ವರ್ಷದಲ್ಲಿ ಭಾರತದ ಆಧಾಯ ಅಸಮಾನತೆ ಗಗನಕ್ಕೇರಿದೆ. ಯಾವ ಪಕ್ಷವೋ ಕಾಂಕ್ರೀಟ್ ಸುರಿದಿರಬಹುದು. ನಿಜವಾದ ಅಭಿವೃದ್ಧಿ ಬಗ್ಗೆ ಮಾತನಾಡಲು ಒಳನೋಟದ ಅಗತ್ಯವಿದೆ ಎಂದು ರಶ್ಮಿಕಾ ಗೆ ಟಾಂಗ್ ಕೊಟ್ಟಿದ್ದಾರೆ.












Click it and Unblock the Notifications