ಮೋದಿ ಜೀ ನಿಮ್ಮ ಸೋಶಿಯಲ್ ಮೀಡಿಯಾ ನಿರ್ವಹಣೆ ನನಗೆ ಕೊಡಿ:ಕಂಗನಾ ಸಹೋದರಿ

ಮುಂಬೈ, ಮಾರ್ಚ್ 4: ಮೋದಿ ಜೀ ನಿಮ್ಮ ವಿರೋಧಿಗಳಿಗೆ ಏನೋ ಹೇಳೋದಿದೆ. ನಿಮ್ಮ ಸೋಶಿಯಲ್ ಮೀಡಿಯಾ ಖಾತೆ ನಿರ್ವಹಣೆ ನನಗೆ ಬಿಟ್ಟುಕೊಡಿ ಎಂದು ನಟಿ ಕಂಗನಾ ರಾಣಾವತ್ ಸಹೋದರಿ ರಂಗೋಲಿ ಚಾಂದೇಲ್ ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಮಹಿಳಾ ದಿನಾಚರಣೆ ದಿನ ಸಾಧಕ ಮಹಿಳೆಯರಿಗಾಗಿ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಬಿಟ್ಟುಕೊಡುವುದಾಗಿ ಈಗಾಗಲೇ ಘೋಷಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು #SheInspiresUs ಎಂಬ ಹ್ಯಾಷ್​ಟ್ಯಾಗ್​ನಲ್ಲಿ ಸಾಧಕ ಮಹಿಳೆಯರು ತಮ್ಮ ಸ್ಫೂರ್ತಿದಾಯಕ ಕತೆಯನ್ನು ಹಂಚಿಕೊಳ್ಳಿ ಎಂದು ಕರೆ ನೀಡಿದ್ದಾರೆ.

Rangoli Chandel Wants To Take Over PM Narendra Modis Social Media

ಮಹಿಳಾ ದಿನಾಚರಣೆಗೆ ಸಂಬಂಧಪಟ್ಟು ನರೇಂದ್ರ ಮೋದಿಯವರು ಮಾಡಿದ ಟ್ವೀಟ್​ನ್ನು ರೀಟ್ವೀಟ್ ಮಾಡಿಕೊಂಡಿರುವ ರಂಗೋಲಿ ಚಾಂದೇಲ್​, ಮೋದಿ ಜೀ ದಯವಿಟ್ಟು ನನಗೆ ನಿಮ್ಮ ಸೋಷಿಯಲ್​ ಮೀಡಿಯಾ ಬಳಸಲು ನನಗೊಂದು ಅವಕಾಶ ಕೊಡಿ. ನಿಮ್ಮ ವಿರೋಧಿಗಳಿಗೆ ನನ್ನ ಮನಸಿನಲ್ಲಿರುವ ಒಂದು ಸ್ವಲ್ಪ ವಿಚಾರಗಳನ್ನು ತಿಳಿಸುವುದಿದೆ ಎಂದು ಟ್ವೀಟ್ ಮಾಡಿದ್ದಾರೆ.

ನರೇಂದ್ರ ಮೋದಿಯವರ ಸಾಮಾಜಿಕ ಜಾಲತಾಣಗಳನ್ನು ಬಳಸುವ ಸ್ಫೂರ್ತಿದಾಯಕ ಮಹಿಳೆಯರು ಯಾರಾಗಬಹುದು ಎಂಬ ಕುತೂಹಲ ಹುಟ್ಟಿಕೊಂಡಿದೆ. ಈ ಬೆನ್ನಲ್ಲೇ ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರ ಸಹೋದರಿ ರಂಗೋಲಿ ಚಾಂದೇಲ್​, ದಯವಿಟ್ಟು ನಿಮ್ಮ ಖಾತೆಯನ್ನು ನನಗೇ ಬಿಟ್ಟುಕೊಡಿ ಎಂದು ಮೋದಿಯವರನ್ನು ಕೇಳಿಕೊಂಡಿದ್ದಾರೆ.

ರಂಗೋಲಿ ಚಾಂದೇಲ್​ ಮಾತ್ರವಲ್ಲ ಕಂಗನಾ ರಣಾವತ್​ ಕೂಡ ನರೇಂದ್ರ ಮೋದಿಯವರ ಕಟ್ಟಾ ಬೆಂಬಲಿಗರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+