ಇಂದು ಬಹುಕೋಟಿ ಮೇವು ಹಗರಣದ ತೀರ್ಪು: ಲಾಲೂ ಭವಿಷ್ಯ ನಿರ್ಧಾರ?

ರಾಂಚಿ, ಡಿಸೆಂಬರ್ 23: ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರು ಮುಖ್ಯ ಆರೋಪಿಯಾಗಿರುವ 900 ಕೋಟಿ ರೂ.ಗಳ ಮೇವು ಹಗರಣದ ತೀರ್ಪನ್ನು ರಾಂಚಿಯ ವಿಶೇಷ ನ್ಯಾಯಾಲಯವೊಂದು ಇಂದು(ಡಿ.23) ಹೊರಹಾಕಲಿದೆ.

ಮೊನ್ನೆ ತಾನೇ 2 ಜಿ ಸ್ಪೆಕ್ಟ್ರಂ ಹಗರಣದಲ್ಲಿ ಆರೋಪಿಗಳನ್ನೆಲ್ಲ ಖುಲಾಸೆಗೊಳಿಸಿದಂತೆ ಈ ಪ್ರಕರಣದಲ್ಲೂ ಲಾಲೂ ಯಾದವ್ ಖುಲಾಸೆಗೊಳ್ಳುತ್ತಾರಾ ಅಥವಾ, ತಪ್ಪಿತಸ್ಥರಾಗುತ್ತಾರಾ ಎಂಬುದನ್ನು ಕೋರ್ಟು ನಿರ್ಧರಿಸಲಿದೆ.

Ranchi special court to announce Lalu Yadav's fodder scam verdict

1994-1996 ರಲ್ಲಿ ಬಿಹಾರದಲ್ಲಿ ನಡೆದ ಈ ಹಗರಣದಲ್ಲಿ ಪಶುಗಳಿಗೆ ಮೇವು ಹಾಗೂ ಔಷಧಿ ಪೂರೈಸುವ ಉದ್ದೇಶದಿಂದ ಡಿಯೋದರ್(ಈಗ ಜಾರ್ಖಾಂಡ್ ರಾಜ್ಯದಲ್ಲಿದೆ) ಎಂಬ ಜಿಲ್ಲೆಯ ಸರ್ಕಾರಿ ಖಜಾನೆಯಿಂದ ಕೋಟ್ಯಂತರ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಈ ಹಣವನ್ನು ಮೂಲ ಉದ್ದೇಶಕ್ಕಾಗಿ ಬಳಸಿಕೊಳ್ಳದೆ ಬಿಹಾರದ ಆಗಿನ ಮುಖ್ಯಮಂತ್ರಿಯಾಗಿದ್ದ ಲಾಲೂ ಯಾದವ್ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದಾರೆ ಎಂಬುದು ಆರೋಪವಾಗಿತ್ತು.

1996 ರಲ್ಲಿ ಬೆಳಕಿಗೆ ಬಂದ ಈ ಪ್ರಕರಣದ ವಿಚಾರಣೆ ಡಿ.13, 2017 ಕ್ಕೆ ಅಂತ್ಯವಾಗಿದ್ದು, ಇಂದು ತೀರ್ಪು ಹೊರಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+