ಹುಬ್ಬಳ್ಳಿಯಿಂದ ಇಲ್ಲಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ, ಕಾಮಗಾರಿ ಪ್ರಯುಕ್ತ ವಿವಿಧ ರೈಲುಗಳ ಸಂಚಾರ ರದ್ದು
ಬೆಂಗಳೂರು: ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಪ್ರಯಾಣಿಕರ ದಟ್ಟಣೆಗೆ ನಿರ್ವಹಣೆಗೆ ಹುಬ್ಬಳ್ಳಿ-ಚಿಕ್ಕಮಗಳೂರು ಮಾರ್ಗದಲ್ಲಿ ವಿಶೇಷ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ಮಾಡಲಾಗುತ್ತದೆ. ಇನ್ನೊಂದೆಡೆ ಕೆಳ ಸೇತುವೆ ನಿರ್ಮಾಣ ಪ್ರಯುಕ್ತ ಜೂನ್ 23ರವರೆಗೆ ವಿವಿಧ ರೈಲುಗಳ ಸಂಚಾರ ರದ್ದು, ಭಾಗಶಃ ರದ್ದು ಮತ್ತು ರೈಲಗಳ ನಿಯಂತ್ರಣ ಮಾಡಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉತ್ತರ ಕರ್ನಾಟಕದ ಎಸ್ ಎಸ್ ಎಸ್ ಹುಬ್ಬಳ್ಳಿ ಜಂಕ್ಷನ್‌ನಿಂದ ಮಲೆನಾಡಿನ ಚಿಕ್ಕಮಗಳೂರುವರೆಗೆ ಜೂನ್ 20 ಮತ್ತು 21 ರಂದು ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ನೀಡಲಿದೆ. ಎರಡು ದಿಕ್ಕಿನಲ್ಲಿ ತಲಾ ಎರಡರಂತೆ ಒಟ್ಟು 4 ಟ್ರಿಪ್‌ಗಳ ಸೇವೆ ಈ ಮಾರ್ಗದ ಪ್ರಯಾಣಿಕರಿಗೆ ಸಿಗಲಿದೆ. ಇದರಿಂದ ಚಿಕ್ಕಮಗಳೂರು, ಹುಬ್ಬಳ್ಳಿ ಜೊತೆಗೆ ನಡುವಿನ ವಿವಿಧ ಜಿಲ್ಲೆಗ ಪ್ರಯಾಣಿಕರಿಗೂ ಹೆಚ್ಚುವರಿ ರೈಲು ಸಾರಿಗೆ ಸೇವೆ ಸಿಕ್ಕಂತಾಗುತ್ತದೆ.

ಹುಬ್ಬಳ್ಳಿ-ಚಿಕ್ಕಮಗಳೂರು ಎಕ್ಸ್‌ಪ್ರೆಸ್ ರೈಲು ವೇಳಾಪಟ್ಟಿ
ಹುಬ್ಬಳ್ಳಿ-ಚಿಕ್ಕಮಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು (17341) ಜೂನ್ 20ರಂದು 21ರಂದು (ಶನಿವಾರ ಮತ್ತು ಭಾನುವಾರ) ಬೆಳಗ್ಗೆ 5 ಗಂಟೆಗೆ ಹೊರಡುತ್ತದೆ. ಅದೇ ದಿನ ಚಿಕ್ಕಮಗಳೂರು ನಿಲ್ದಾಣವನ್ನು ಬೆಳಗ್ಗೆ 11.15ಕ್ಕೆ ತಲುಪುತ್ತದೆ.
ಮರಳಿ ಅದೇ ಮಾರ್ಗದಲ್ಲಿ ಹುಬ್ಬಳ್ಳಿ-ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು (17342) ಅದೇ ಎರಡು ದಿನ ಸಂಜೆ 17.30ಕ್ಕೆ ಹೊರಟು, ರಾತ್ರಿ 23.20ಗಂಟೆಗೆ ಹುಬ್ಬಳ್ಳಿ ನಿಲ್ದಾಣಕ್ಕೆ ಬಂದು ಸೇರಲಿದೆ. ಒಟ್ಟು ಹತ್ತು ಬೋಗಿಗಳ ರೈಲುಗಳು ಇದಾಗಿದೆ.
ಮಾರ್ಗ, ನಿಲುಗಡೆ ನಿಲ್ದಾಣಗಳ ಮಾಹಿತಿ
ಸದರಿ ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ವಿಶೇಷ ಎಕ್ಸ್‌ಪ್ರೆಸ್ ಎರಡು ದಿಕ್ಕಿನಲ್ಲಿ ಕುಂದಗೋಳ, ಸಂಶಿ,ಯಲವಿಗಿ, ಹಾವೇರಿ, ರಾಣೆಬೆನ್ನೂರು, ಹಾವೇರಿ, ಹರಿಹರ ದಾವಣಗೆರೆ, ಚಿಕ್ಕಜಾಜೂರು, ರಾಮಗಿರಿ, ಅಜ್ಜಂಪುರ, ಬೀರೂರು, ಬಿಸಳೇಹಳ್ಳಿ, ಸಕ್ರಾಯಪಟ್ಟಣ, ಕಣವಿಹಳ್ಳಿ ಮಾರ್ಗದಲ್ಲಿ ಸಾಗುತ್ತದೆ. ಈ ಎಲ್ಲ ನಿಲ್ದಾಣಗಳಲ್ಲಿ ನಿಲುಗಡೆ ನೀಡುವ ಮೂಲಕ ಚಿಕ್ಕಮಗಳೂರು ತಲುಪುತ್ತದೆ. ಪ್ರಯಾಣಿಕರು ಟಿಕೆಟ್ ಬುಕಿಂಗ್, ರೈಲಿನ ವೇಳಾಪಟ್ಟಿ, ಸಮಯದ ಮಾಹಿತಿಗೆ ರೈಲ್ವೆ ಇಲಾಖೆಯ ಅಧಿಕೃತ ಜಾಲತಾಣ https://www.indianrail.gov.in/enquiry/StaticPages/StaticEnquiry.jsp?StaticPage=index.html ಭೇಟಿ ನೀಡುವಂತೆ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
ಸಂಚಾರ ರದ್ದು, ಭಾಗಶಃ ರದ್ದು ಮತ್ತು ನಿಯಂತ್ರಣ ರೈಲುಗಳ ಪಟ್ಟಿ
ಹೊಳೆನರಸೀಪುರ ಮತ್ತು ಮಾವಿನಕೆರೆ ರೈಲ್ವೆ ನಿಲ್ದಾಣಗಳ ನಡುವಿನ ರಸ್ತೆ ಕೆಳಸೇತುವೆ (ಆರ್‌ಯುಬಿ) ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ವಿವಿಧ ರೈಲುಗಳ ಸೇವೆಯನ್ನು ತಾತ್ಕಾಲಿಕವಾಗಿ ರದ್ದು, ಭಾಗಶಃ ರದ್ದು ಮತ್ತು ನಿಯಂತ್ರಣ ಮಾಡಲಾಗುವುದು ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 18 ಮತ್ತು 23ರಂದು ಅರಸೀಕೆರೆ-ಮೈಸೂರು ದೈನಂದಿನ ಪ್ಯಾಸೆಂಜರ್ (ರೈಲು ಸಂಖ್ಯೆ 56267), ಮೈಸೂರು-ತಾಳಗುಪ್ಪ ದೈನಂದಿನ ಎಕ್ಸ್‌ಪ್ರೆಸ್ ರೈಲು (16206) ಮತ್ತು ತಾಳಗುಪ್ಪ-ಮೈಸೂರು ದೈನಂದಿನ ಎಕ್ಸ್'ಪ್ರೆಸ್ ರೈಲು (16205) ರೈಲುಗಳ ಸಂಚಾರವನ್ನು ಎರಡು ದಿನ ರದ್ದುಗೊಳಿಸಲಾಗಿದೆ.
ಜೂನ್ 18 ಮತ್ತು 23ರಂದು ಮೈಸೂರು-ಶಿವಮೊಗ್ಗ ಟೌನ್ ದೈನಂದಿನ ಎಕ್ಸ್‌ಪ್ರೆಸ್ ರೈಲು (16225) ರೈಲನ್ನು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದು ಮಾಡಲಾಗಿದೆ. ಈ ರೈಲು ಮೈಸೂರಿನ ಬದಲಿಗೆ ಅರಸೀಕೆರೆಯಿಂದಲೇ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.
ಜೂನ್ 18 ಮತ್ತು 23ರಂದು ಹೊರಡುವ ಮೈಸೂರು-ಯಶವಂತಪುರ ದೈನಂದಿನ ಎಕ್ಸ್‌ಪ್ರೆಸ್ ರೈಲು (16208) ರೈಲಿನ ಸಂಚಾರ ಮಾರ್ಗಮಧ್ಯೆ ಕ್ರಮವಾಗಿ 30 ನಿಮಿಷ ಮತ್ತು 120 ನಿಮಿಷ ನಿಯಂತ್ರಿಸಲಾಗುತ್ತದೆ ಎಂದು ರೈಲ್ವೆ ಪ್ರಕಟಣೆ ಮಾಹಿತಿ ನೀಡಿದೆ.













Click it and Unblock the Notifications