• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಧಾನಿ ಮೋದಿಯನ್ನು ಹಕ್ಕಿ ಪಿಕ್ಕೆಗೆ ಹೋಲಿಸಿದರಾ ರಮ್ಯಾ?

|

ಬೆಂಗಳೂರು, ನವೆಂಬರ್ 01: ಪ್ರಧಾನಿ ಮೋದಿ ಅವರನ್ನು ಟ್ವಿಟ್ಟರ್‌ನಲ್ಲಿ ಕಾಲೆಳೆಯುವುದು, ಮೋದಿ ಬಗ್ಗೆ ಕೀಳಾಗಿ ಮಾತನಾಡುವುದು ಕಾಂಗ್ರೆಸ್‌ ಐಟಿ ಘಟಕದ ಮುಖ್ಯಸ್ಥೆ, ನಟಿ ರಮ್ಯಾ ಅವರಿಗೆ ಮಾಮೂಲಾದಂತಿದೆ.

ಹಿಂದೊಮ್ಮೆ ಮೋದಿ ಅವರು ಗಾಂಜಾ ಸೇವಿಸಿ ಮಾತನಾಡಿದ್ದಾರೆ ಎಂಬರ್ಥದ ಮಾತನ್ನಾಡಿದ್ದ ರಮ್ಯಾ ಈಗ ಮತ್ತೆ ಮೋದಿ ಅವರ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ.

ಮಂಡ್ಯ ಉಪ ಚುನಾವಣೆ : ಕಾಂಗ್ರೆಸ್‌ಗೆ ಬಿಸಿತುಪ್ಪವಾದ ರಮ್ಯಾ ಅಭಿಮಾನಿಗಳು

ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಭಾರಿ ಪ್ರತಿಮೆಯ ಕಾಲ ಬಳಿ ಮೋದಿ ಅವರು ಬಿಳಿ ಬಣ್ಣದ ಬಟ್ಟೆ ಧರಿಸಿ ನಿಂತಿರುವ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿರುವ ರಮ್ಯಾ, 'ಅದು ಹಕ್ಕಿ ಪಿಕ್ಕೆಯಾ?' ಎಂದು ಪ್ರಶ್ನೆ ಮಾಡಿದ್ದಾರೆ.

'ಚೋರ್ ಪಿಎಂ' ಎಂದು ಟೀಕಿಸಿದ ಗೌರಮ್ಮನ ವಿರುದ್ಧ ಉತ್ತರ ಪ್ರದೇಶದಲ್ಲಿ ಕೇಸ್

ಸಾಂವಿಧಾನಿಕ ಸ್ಥಾನವಾದ ಪ್ರಧಾನಿ ಹುದ್ದೆಯನ್ನು ಹೊಂದಿರುವ ವ್ಯಕ್ತಿಯೊಬ್ಬರ ಬಗ್ಗೆ ಇಷ್ಟು ಕೀಳಾಗಿ ಮಾತನಾಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ತಮ್ಮ ಬಗ್ಗೆ ಹಬ್ಬಿದ್ದ ಗಾಳಿ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ ರಮ್ಯಾ

ರಮ್ಯಾ ಅವರು, ಒಂದೇ ಬಾರಿ ಪ್ರಧಾನಿ ಮೋದಿ ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ನೆಟ್ಟಿಗರು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Congress IT cell chief Ramya tweets about Narendra Modi today and called him as bird dropping. Tweeps gets angry on her for calling Modi as bird dropping.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X