ತಿಂಗಳಿಗೆ ಕೋಟಿ ಕೋಟಿ ಕೈತುಂಬಾ ದುಡಿಯುವ ‘ರಾಮೇಶ್ವರಂ ಕೆಫೆ’ ಓನರ್ ದಿವ್ಯಾ ರಾವ್ ಬಗ್ಗೆ ನಿಮಗೆಷ್ಟು ಗೊತ್ತು?
'ರಾಮೇಶ್ವರಂ ಕೆಫೆ' ಬೆಂಗಳೂರಿನ ಟೆಕ್ಕಿಗಳು ಹಾಗೂ ಸಾಮಾನ್ಯ ಜನರ ಪಾಲಿಗೆ ಫೇವರಿಟ್ ಹೋಟೆಲ್. ಅದರಲ್ಲೂ ಎಷ್ಟೋ ಜನರು ಈ ಹೋಟೆಲ್‌ನಲ್ಲೇ ಪ್ರತಿದಿನ ಊಟ & ತಿಂಡಿನ ಮಾಡ್ತಾರೆ. ನೀವು ಇಲ್ಲಿ ಒಂದು ಇಡ್ಲಿ ತಗೊಬೇಕು ಅಂದ್ರೆ ಎಷ್ಟೋ ಹೊತ್ತು ಕಾಯಬೇಕು ಆ ರೀತಿ ಕ್ರೌಡ್ ಇರುತ್ತೆ. ಜನರು ನೊಣಗಳ ರೀತಿ ಮುತ್ತಿಕೊಂಡೇ ಇರುತ್ತಾರೆ. ಹಾಗಾದರೆ ಈ ಕೆಫೆ ಮಾಲೀಕರು ಅಂದ್ರೆ ಹೋಟೆಲ್ ಓನರ್‌ಗೆ ಪ್ರತಿ ತಿಂಗಳಿಗೆ ಸಿಗುವ ಹಣ ಎಷ್ಟು ಕೋಟಿ ರೂಪಾಯಿ ಗೊತ್ತೆ?
'ರಾಮೇಶ್ವರಂ ಕೆಫೆ' ಇಂದು ತುಂಬಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದ್ರಲ್ಲೂ ಇಂದು ಮಧ್ಯಾಹ್ನ ರಾಮೇಶ್ವರಂ ಕೆಫೆ ಒಳಗೆ ಸಂಭವಿಸಿದ ಭೀಕರ ಸ್ಫೋಟ ಎಲ್ಲರನ್ನೂ ಈ ದಿನ ನಡುಗಿಸಿಬಿಟ್ಟಿದೆ. ಆದ್ರೆ ಹೀಗೆ ಕೋಟಿ ಕೋಟಿ ದುಡಿಯುವ ಪ್ರತಿಷ್ಠಿತ ಹೋಟೆಲ್‌ನಲ್ಲಿ ಆದಾಯ ಹೇಗಿದೆ? ಈ ಪ್ರತಿಷ್ಠಿತ ಹೋಟೆಲ್ 'ರಾಮೇಶ್ವರಂ ಕೆಫೆ' ಕಟ್ಟಿ ಬೆಳೆಸಿರುವ ದಿವ್ಯಾ ರಾವ್ ಬಗ್ಗೆ ನಿಮಗೆಷ್ಟು ಗೊತ್ತು? ಬನ್ನಿ ಆ ಕುರಿತಾಗಿ ಸಂಪೂರ್ಣ ಮಾಹಿತಿ ತಿಳಿಯೋಣ, ಮುಂದೆ ಓದಿ.

ಸಾವಿರ TO ಕೋಟಿ ಕೋಟಿ!
ಬೆಂಗಳೂರು ಕೋಟ್ಯಂತರ ಜನಗಳಿಗೆ ಜೀವನ & ಜೀವ ಕೊಟ್ಟ ನಗರ. ಇಂತಹ ಬೆಂಗಳೂರು ನಗರಕ್ಕೆ ಬದುಕು ಕಟ್ಟಿಕೊಳ್ಳೋದಕ್ಕೆ ಸಾವಿರಾರು ಜನಗಳು ಬರುತ್ತಾರೆ ಸಣ್ಣಪುಟ್ಟ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ತಾರೆ. ಹೀಗೆ ಕಷ್ಟಪಟ್ಟು ಬದುಕುವ ಜನಗಳಿಗೆ ಬೆಂಗಳೂರು ಎಂದಿಗೂ ಮೋಸ ಮಾಡಿಲ್ಲ. ಅದರಲ್ಲೂ ಬೆಂಗಳೂರಿನಲ್ಲಿ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಬೇರೆಯವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಾರೆ ಜನರು. ಅಂದ್ರೆ ಹೋಟೆಲ್ ಉದ್ಯಮ ಆರಂಭಿಸಿ, ಸಣ್ಣದಾಗಿ ಶುರು ಮಾಡಿ ಕೋಟಿ ಕೋಟಿ ಗಳಿಸುತ್ತಾರೆ. ಅಂತಹವರ ಸಾಲಿನಲ್ಲಿ 'ರಾಮೇಶ್ವರಂ ಕೆಫೆ' ಸಹ ಸಂಸ್ಥಾಪಕಿ ದಿವ್ಯಾ ರಾವ್ & ಅವರ ಪತಿ ಕೂಡ ಸೇರುತ್ತಾರೆ.
10×10 ಜಾಗದಲ್ಲೇ ಕೋಟಿ ಕೋಟಿ!
ಹೋಟೆಲ್ ಉದ್ಯಮ ನಿಲ್ಲುವುದು ಬಂಡವಾಳದ ಮೇಲೆ ಅಲ್ಲ, ಕೈಯಲ್ಲಿ ಇರುವ ಹಣವನ್ನ ಹೇಗೆ ಬಳಕೆ ಮಾಡಿಕೊಳ್ಳುತ್ತಾರೆ? ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಇರುವ ಅಲ್ಪ, ಸ್ವಲ್ಪ ಹಣದಲ್ಲೇ ಸಣ್ಣ ಹೋಟೆಲ್ ಕಟ್ಟಿ ಇದೀಗ ಕೋಟಿ ಕೋಟಿ ದುಡಿಯುವ ಹಂತಕ್ಕೂ ಕೆಲವರು ಹೋಗಿದ್ದಾರೆ. ಈ ಸಾಲಿನಲ್ಲಿ ಇದೀಗ 'ರಾಮೇಶ್ವರಂ ಕೆಫೆ' ಕೂಡ ಸೇರುತ್ತೆ. ಈ ಕೆಫೆ 10×10 & 10×15 ಚದರ ಅಡಿ ಜಾಗದಲ್ಲಿ ಶುರುವಾಗಿ ಪ್ರತಿ ತಿಂಗಳಿಗೆ 4ರಿಂದ 5 ಕೋಟಿ ರೂಪಾಯಿ ತನಕ ವ್ಯವಹಾರ ಮಾಡುತ್ತದೆ ಅಂದ್ರೆ ಆಶ್ಚರ್ಯ ಆಗಲೇಬೇಕು.
'ರಾಮೇಶ್ವರಂ ಕೆಫೆ'ಯಲ್ಲಿ ಸ್ಫೋಟ
ಇಷ್ಟುದಿನ ಬೆಂಗಳೂರಿನಲ್ಲಿ ಯಾರ ಬಾಯಲ್ಲಿ ಕೇಳಿದರೂ ಬರೀ ಫಾಸ್ಟ್ ಫುಡ್ ಹೆಸರುಗಳೇ ಕೇಳಿ ಬರುತ್ತಿದ್ದವು. ಆದ್ರೆ ಇದೀಗ ಪರಿಸ್ಥಿತಿ ಬೇರೆಯೇ ಆಗಿದೆ, ಬೆಂಗಳೂರಿಗರು ಈಗ ತಮ್ಮ ಟೇಸ್ಟ್ ಜೊತೆಗೆ ಆರೋಗ್ಯಕ್ಕೂ ಒತ್ತು ನೀಡುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ಫೇವರಿಟ್ & ಸೂಪರ್ ಹಿಟ್ ಬ್ರಾಂಡ್ ಆಗಿ ಬೆಳೆದು ನಿಂತಿದೆ ರಾಮೇಶ್ವರಂ ಕೆಫೆ. ಆದರೆ ಇಂದು ಇದೇ, ಹೋಟೆಲ್ ಒಳಗೆ ಅವಘಡ ನಡೆದಿದೆ. ಈ ಬಗ್ಗೆ ತನಿಖೆ ಕೂಡ ಆರಂಭವಾಗಿದೆ. ಈ ಘಟನೆ ಬಗ್ಗೆ ಇದೀಗ ಖುದ್ದಾಗಿ ಹೋಟೆಲ್‌ನ ಎಂಡಿ ಕೂಡ ಮಾತನಾಡಿದ್ದಾರೆ. ಹಾಗೇ ಘಟನೆ ಬಗ್ಗೆ ಆತಂಕ ಕೂಡ ಹೊರಹಾಕಿದ್ದಾರೆ. ಗ್ರಾಹಕರ ಪಾಲಿನ ನೆಚ್ಚಿನ ಹೋಟೆಲ್‌ನಲ್ಲಿ ಈ ರೀತಿಯ ಘಟನೆ ನಡೆದಿದ್ದು ಮಾತ್ರ ದುರಂತವೇ ಸರಿ.

ಇದೆಲ್ಲಾ ಏನೇ ಇದ್ರೂ ಬೆಂಗಳೂರು ಮೂಲದ 'ರಾಮೇಶ್ವರಂ ಕೆಫೆ' ಒಂದು ಹೆಮ್ಮೆಯಾಗಿ ಬೆಳೆದು ನಿಂತಿದೆ. ಹೀಗಾಗಿ ಬೆಂಗಳೂರಿಗರು ಕೂಡ ಈ ಕೆಫೆಯನ್ನು ತುಂಬಾ ಇಷ್ಟಪಡ್ತಾರೆ. ಅಲ್ಲದೆ ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಒಟ್ಟು 4 ಬ್ರಾಂಚ್ ಹೊಂದಿರುವ 'ರಾಮೇಶ್ವರಂ ಕೆಫೆ' ದುಬೈನಲ್ಲಿ 1 & ಹೈದರಾಬಾದ್‌ನಲ್ಲಿ 1 ಬ್ರಾಂಚ್ ಹೊಂದಿದೆ.












Click it and Unblock the Notifications