ಹಲವು ಪತಂಜಲಿ ಉತ್ಪನ್ನಗಳು ಕಳಪೆ, ಆರ್ ಟಿಐನಿಂದ ಬಹಿರಂಗ
ನವದೆಹಲಿ, ಮೇ 30 : ಯೋಗ ಗುರು ಬಾಬಾ ರಾಮದೇವ್ ಅವರ ಹಲವು ಪತಂಜಲಿ ಉತ್ಪನ್ನಗಳು ಗುಣಮಟ್ಟ ಪರೀಕ್ಷೆಯಲ್ಲಿ ಪಾಸಾಗಿಲ್ಲ ಎಂಬ ಅಂಶ ಆರ್ ಟಿಐನಿಂದ ಬೆಳಕಿಗೆ ಬಂದಿದೆ.
ಪತಂಜಲಿ ಹಾಗೂ ವಿವಿಧ ಆಯುರ್ವೇದ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರೊಬ್ಬರು ಹರಿದ್ವಾರದ ಆಯರ್ವೇದ ಮತ್ತು ಯುನಾನಿ ಪ್ರಯೋಗಾಲಯ ಕಚೇರಿಗೆ ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು.[ಆರ್ಮಿ ಕ್ಯಾಂಟೀನ್ ನಿಂದ ಪತಂಜಲಿ ನೆಲ್ಲಿ ಜ್ಯೂಸ್ ಗೆ ಕೊಕ್]

ಈ ಬಗ್ಗೆ ಅರ್ಜಿದಾರರಿಗೆ ಮಾಹಿತಿ ನೀಡಿದ ಆಯರ್ವೇದ ಮತ್ತು ಯುನಾನಿ ಪ್ರಯೋಗಾಲಯ ಕಚೇರಿಯು 'ದೇಶದಲ್ಲಿ 40 ರಷ್ಟು ಆರ್ಯವೇದ ಉತ್ಪನ್ನಗಳು ಕಳಪೆಯಾಗಿವೆ. ಇದರಲ್ಲಿ ಪತಂಜಲಿಯ ಹಲವು ಉತ್ಪನ್ನಗಳು ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್ ಆಗಿವೆ' ಎಂಬ ಮಾಹಿತಿ ನೀಡಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಪತಂಜಲಿಯ ಜನಪ್ರಿಯ ಉತ್ಪನ್ನಗಳಾದ ದಿವ್ಯ ಆಮ್ಲರಸ ಮತ್ತು ಶಿವಲಿಂಗ ಬೀಜದಲ್ಲೂ ಬೇರೆ ಪದಾರ್ಥಗಳು ಪತ್ತೆಯಾಗಿದ್ದು ಇವು ಗುಣಮಟ್ಟ ಪರೀಕ್ಷೆಯಲ್ಲಿ ಪಾಸಾಗಿಲ್ಲ.
2013 ರಿಂದ 2016ರ ವರೆಗೆ ಒಟ್ಟು 80 ಉತ್ಪನ್ನಗಳ ಗುಣಮಟ್ಟ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 32 ಉತ್ಪನ್ನಗಳು ಕಳಪೆಯಾಗಿವೆ. ಇವುಗಳಲ್ಲಿ ಪತಂಜಲಿಯ ಹಲವು ಉತ್ಪನ್ನಗಳು ಸೇರಿವೆ ಎಂದು ವರದಿಯಲ್ಲಿ ಹೇಳಿದೆ.
ಪಶ್ಚಿಮ ಬಂಗಾಳದ ಸರ್ಕಾರಿ ಪ್ರಯೋಗಾಲಯವು ಪತಂಜಲಿಯ ಆಮ್ಲ ಜ್ಯೂಸ್ ಅನ್ನು ಪರೀಕ್ಷೆ ಮಾಡಿದ್ದು ಇದರಲ್ಲಿ ಪಿಎಚ್ ಮೌಲ್ಯ ಕಡಿಮೆ ಇದ್ದು ಈ ಪಾನಿಯಾ ಕಳಪೆಯಾಗಿದೆ ಎಂದು ವರದಿ ನೀಡಿತ್ತು.
ಈ ಪಾನಿಯಾವನ್ನು ಪಶ್ಚಿಮ ಬಂಗಾಳದ ಮಿಲಿಟರಿ ಕ್ಯಾಂಟಿನ್ ನಲ್ಲಿ ಅರೆ ಸೇನಾಪಡೆ ಯೋಧರಿಗೆ ನೀಡಲಾಗುತ್ತಿತ್ತು ಈ ವರದಿ ಬಂದ ಕೂಡಲೇ ಈ ಪದಾರ್ಥದ ಮೇಲೆ ನಿಷೇಧ ಹೇರಲಾಗಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications