Ayodhya Ram Mandir: ಸೋರುತ್ತಿದೆ ಬಾಲರಾಮನಿರುವ ಗರ್ಭಗುಡಿಯ ಮೇಲ್ಛಾವಣಿ

ರಾಮ ಮಂದಿರ ಉದ್ಘಾಟನೆ ವೇಳೆ ಜಗತ್ತಿನಲ್ಲಿರುವ ಹಿಂದೂಗಳೆಲ್ಲ ಹಬ್ಬ ಮಾಡಿದ್ದರು. ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯ ಇನ್ನೂ ಸಂಪೂರ್ಣವಾಗಿಲ್ಲ, ಉದ್ಘಾಟನೆಯಾದ ಆರು ತಿಂಗಳಲ್ಲೇ ದೇವಸ್ಥಾನದ ಮೇಲ್ಛಾವಣಿ ಸೋರಿಕೆಯಾಗುತ್ತಿದೆ.

ಮಳೆಯ ಸಮಯದಲ್ಲಿ ಸೀಲಿಂಗ್‌ನಿಂದ ನೀರು ಸೋರಿಕೆಯಾಗುತ್ತಿದೆ ಎಂದು ದೇವಾಲಯದ ಮುಖ್ಯ ಅರ್ಚಕರು ಹೇಳಿದ್ದಾರೆ. ಮೊದಲ ಮಳೆಯಲ್ಲೇ ಬಾಲರಾಮನ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದ ಗರ್ಭಗುಡಿಯ ಮೇಲ್ಛಾವಣಿ ಸೋರಲಾರಂಭಿಸಿದೆ ಎಂದು ಆಚಾರ್ಯ ಸತ್ಯೇಂದ್ರ ದಾಸ್ ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.

Ram Temple in Ayodhya Faces Leakage Issues Chief Priest Raises Concerns

ಈ ಬಗ್ಗೆ ಗಮನ ನೀಡಬೇಕು ಮತ್ತು ಏನು ಸಮಸ್ಯೆ ಇದೆ ಎಂಬುದನ್ನು ಕಂಡುಹಿಡಿಯಬೇಕು. ಇದು ಅತೀ ಮುಖ್ಯವಾದುದು. ದೇವಸ್ಥಾನದಿಂದ ನೀರು ಹರಿಸಲು ಜಾಗವಿಲ್ಲ ಎಂದು ಅವರು ಮನವಿ ಮಾಡಿದ್ದಾರೆ. ಮಳೆ ಪ್ರಮಾಣ ಹೆಚ್ಚಾದರೆ, ದೇವಸ್ಥಾನದಲ್ಲಿ ಪೂಜೆ ಮಾಡಲೂ ಕೂಡ ಕಷ್ಟವಾಗುತ್ತದೆ ಎಂದಿದ್ದಾರೆ.

ಅನೇಕ ತಜ್ಞ ಎಂಜಿನಿಯರ್‍‌ಗಳು ದೇವಸ್ಥಾನ ನಿರ್ಮಾಣದಲ್ಲಿ ಭಾಗಿಯಾಗಿದ್ದರೂ, ಛಾವಣಿಯಿಂದ ನೀರು ಸೋರುತ್ತಿರುವುದಕ್ಕೆ ಅರ್ಚಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ದುರಸ್ತಿ ಮಾಡಲು ಸೂಚನೆ

ಮೊದಲ ಮಹಡಿಯಿಂದ ಮಳೆ ನೀರು ಸೋರಿಕೆಯಾಗುತ್ತಿದೆ ಎಂದು ಶ್ರೀರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಕೂಡ ಖಚಿತಪಡಿಸಿದ್ದಾರೆ. ಮೇಲ್ಛಾವಣಿಯ ದುರಸ್ತಿ ಮಾಡಲು ಸೂಚನೆ ಕೊಟ್ಟಿದ್ದಾರೆ.

ನಾನು ಅಯೋಧ್ಯೆಯಲ್ಲಿದ್ದೇನೆ. ಮೊದಲ ಮಹಡಿಯಿಂದ ಮಳೆ ನೀರು ಬೀಳುವುದನ್ನು ನೋಡಿದೆ. ಇದನ್ನು ನಿರೀಕ್ಷಿಸಲಾಗಿದೆ ಏಕೆಂದರೆ ಗುರು ಮಂಟಪವು ಇನ್ನೂ ತೆರೆದುಕೊಂಡಿದೆ ಗೋಪುರವನ್ನು ಪೂರ್ಣಗೊಳಿಸಿದ ಬಳಿಕ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ ಎಂದಿದ್ದಾರೆ.

ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರವನ್ನು ಉದ್ಘಾಟನೆ ಮಾಡಿದ್ದರು. ಮೈಸೂರಿನ ಕಲಾವಿದ ಅರುಣ್ ಯೋಗಿರಾಜ್ ಕೆತ್ತನೆ ಮಾಡಿರುವ ಬಾಲರಾಮ ಮೂರ್ತಿಯನ್ನು ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಾಗಿದೆ.

ಮಳೆಯಿಂದ ನಗರದಲ್ಲಿ ಸಮಸ್ಯೆ

ಮುಂಗಾರು ಮಳೆಯು ಅಯೋಧ್ಯೆಯಲ್ಲಿ ಸಾಕಷ್ಟು ಸಮಸ್ಯೆಯನ್ನು ಉಂಟುಮಾಡಿದೆ. ಹೊಸದಾಗಿ ನಿರ್ಮಿಸಲಾದ ರಾಂಪತ್ ರಸ್ತೆಯಯಲ್ಲಿ ಗುಂಡಿಗಳನ್ನು ಮಾಡಿದೆ.

ಭಾನುವಾರ ಬೆಳಗ್ಗೆಯಿಂದ ರಾಂಪತ್‌ಗೆ ಸಂಪರ್ಕ ಕಲ್ಪಿಸುವ ಎಲ್ಲ 13 ರಸ್ತೆಗಳು ರಾತ್ರಿ ಸುರಿದ ಮಳೆಗೆ ಜಲಾವೃತಗೊಂಡಿವೆ. ಸಂಪರ್ಕ ರಸ್ತೆಗಳ ಹಲವು ಮನೆಗಳಿಗೂ ಚರಂಡಿ ನೀರು ನುಗ್ಗಿದೆ.

ಲೋಕೋಪಯೋಗಿ ಇಲಾಖೆ ಕಾಮಗಾರಿ ಮಾಡಿದೆ ಮತ್ತು ಅವರು ಅದಕ್ಕೆ ಉತ್ತರ ಕೊಡಬೇಕು ಎಂದು ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತೀಶ್ ಕುಮಾರ್ ಹೇಳಿದ್ದಾರೆ.

ಅಯೋಧ್ಯೆ ಮೇಯರ್ ಗಿರೀಶ್ ಪತಿ ತ್ರಿಪಾಠಿ ಮಾತನಾಡಿ, ಮಳೆಯ ನೀರನ್ನು ಹೊರಹಾಕುವ ಪ್ರಯತ್ನವನ್ನು ಪ್ರಾರಂಭಿಸಲಾಗಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+