ರಾಮ ಜನ್ಮಭೂಮಿ ವಿವಾದ:ಇಬ್ಬರು ಪರಿವೀಕ್ಷಕರ ನೇಮಕಕ್ಕೆ ಸುಪ್ರೀಂ ಸೂಚನೆ
ಅಲಹಾಬಾದ್, ಸೆಪ್ಟೆಂಬರ್ 11: ರಾಮಜನ್ಮಭೂಮಿ ವಿವಾದ ಪ್ರಕರಣದಲ್ಲಿ ಇಬ್ಬರು ನ್ಯಾಯಾಲಯದ ಅಧಿಕಾರಿಗಳನ್ನು ಪರಿವೀಕ್ಷಕರಾಗಿ ನೇಮಿಸಬೇಕೆಂದು ಸುಪ್ರೀಂ ಕೋರ್ಟ್ ಅಲಹಾಬಾದ್ ಹೈಕೋರ್ಟ್ ಗೆ ಸೂಚನೆ ನೀಡಿದೆ. ಇನ್ನು 10 ದಿನಗಳಲ್ಲಿ ಪರಿವೀಕ್ಷಕರನ್ನು ನೇಮಿಸುವಂತೆ ಅದು ತಾಕೀತು ಮಾಡಿದೆ.
ಕೆಲವು ವರ್ಷಗಳ ಹಿಂದೆ, ರಾಮ ಜನ್ಮಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ 13 ಮೇಲ್ಮನವಿಗಳು ಸುಪ್ರೀಂ ಕೋರ್ಟ್ ಮುಂದಿವೆ. ಆ ಎಲ್ಲಾ ಮೇಲ್ಮನವಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್, ಇದೇ ವರ್ಷ ಡಿ. 5ರಿಂದ ಕೈಗೆತ್ತಿಕೊಳ್ಳುತ್ತಿದೆ.

ಅಲ್ಲದೆ, ಈ ವರ್ಷ ಬಾಬ್ರಿ ಮಸೀದಿ ಧ್ವಂಸಗೊಂಡು 25 ವರ್ಷಗಳೂ ಉರುಳುತ್ತಿರುವ ಹಿನ್ನೆಲೆಯಲ್ಲಿ ಈ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಸುಪ್ರೀಂ ಕೋರ್ಟ್, ಅಲಹಾಬಾದ್ ಹೈಕೋರ್ಟ್ ಗಮನಕ್ಕೆ ತರಲು ಪ್ರಯತ್ನಿಸಿದೆ.
ಇದೇ ಕಾರಣಕ್ಕಾಗಿಯೇ ಇಬ್ಬರು ಪರಿವೀಕ್ಷರನ್ನು ಹೊಸತಾಗಿ ನೇಮಿಸುವಂತೆ ಅದು ಅಲಹಾಬಾದ್ ಹೈಕೋರ್ಟ್ ಗೆ ಸೂಚನೆ ನೀಡಿದೆ.












Click it and Unblock the Notifications