ಸುದೀಪ್ vs ದೇವಗನ್ ವಾಗ್ಯುದ್ಧ: ಕಿಚ್ಚನಿಗೆ ಆರ್‌ಜಿವಿ ಬೆಂಬಲ

ಬೆಂಗಳೂರು, ಏ. 29: ಕಿಚ್ಚ ಸುದೀಪ್ ಮತ್ತು ಹಿಂದಿಯ ಸ್ಟಾರ್ ಅಜಯ್ ದೇವಗನ್ ನಡುವೆ ನಡೆದಿದ್ದ ಭಾಷಾ ಜಟಾಪಟಿಗೆ ನಿರ್ದೇಶಕ ರಾಮಗೋಪಾಲ್ ವರ್ಮಾ ಒಗ್ಗರಣೆ ಬೆರೆಸಿದ್ದಾರೆ. ಕಿಚ್ಚನ ವರಸೆಯನ್ನ ಬೆಂಬಲಿಸಿರುವ ಬಾಲಿವುಡ್ ಕಮ್ ಟಾಲಿವುಡ್ ಡೈರೆಕ್ಟರ್ ಆರ್‌ಜಿವಿ ಹಿಂದಿ ಮಂದಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. "ದಕ್ಷಿಣ ಸ್ಟಾರ್‌ಗಳನ್ನ ಕಂಡರೆ ಉತ್ತರದ ಸ್ಟಾರ್‌ಗಳಿಗೆ ಒಂಥರಾ ಹೊಟ್ಟೆಯುರಿ, ಅಭದ್ರತೆಯ ಭಾವನೆ" ಎಂದು ವರ್ಮಾ ವ್ಯಂಗ್ಯ ಮಾಡಿದ್ದಾರೆ.

ಹಿಂದಿ ರಾಷ್ಟ್ರಭಾಷೆ ಅಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿ ಅಜಯ್ ದೇವಗನ್ ಮತ್ತು ಕಿಚ್ಚ ಸುದೀಪ್ ಮಧ್ಯೆ ಮೊನ್ನೆ ಪುಟ್ಟ ವಾಗ್ಯುದ್ಧವೇ ಆಗಿತ್ತು. ಹಿಂದಿ ರಾಷ್ಟ್ರಭಾಷೆಯಲ್ಲ ಅಂದರೆ, ಹಿಂದಿ ಯಾವತ್ತಿಗೂ ರಾಷ್ಟ್ರಭಾಷೆ ಎಂದು ವಾದಿಸಿದ್ದರು. ಆ ನಂತರ ಕಿಚ್ಚನ ಮಾತಿನ ವರಸೆಗೆ ಅಜಯ್ ದೇವಗನ್ ಸೋಲಬೇಕಾಯಿತು.

ಇದೀಗ ಖ್ಯಾತ ನಿರ್ದೇಶಕ ರಾಮಗೋಪಾಲ್ ವರ್ಮಾ ಈಗ ಮತ್ತೆ ಕಿಚ್ಚು ಹಚ್ಚಿದ್ದಾರೆ. "ಕನ್ನಡದಿಂದ ಹಿಂದಿಗೆ ಡಬ್ ಆದ ಕೆಜಿಎಫ್2 ಸಿನಿಮಾ ಮೊದಲ ದಿನವೇ 50 ಕೋಟಿ ರೂ ಕಲೆಕ್ಷನ್ ಮಾಡಿತ್ತು. ಮುಂದಿನ ದಿನಗಳಲ್ಲಿ ಹಿಂದಿನ ಸಿನಿಮಾಗಳು ಮೊದಲ ದಿನ ಎಷ್ಟು ಕಲೆಕ್ಷನ್ ಮಾಡುತ್ತವೆ ಎಂಬುದಕ್ಕೆ ನಾವೆಲ್ಲಾ ಗಮನಿಸುತ್ತೇವೆ. ಹೀಗಾಗಿ, ದಕ್ಷಿಣದ ಸ್ಟಾರ್‌ಗಳನ್ನ ಕಂಡರೆ ಉತ್ತರ ಸ್ಟಾರ್‌ಗಳಿಗೆ ಹೊಟ್ಟೆಯುರಿ ಮತ್ತು ಅಭದ್ರತೆಯ ಭಾವನೆ ಇದೆ" ಎಂದು ರಾಮಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

Ram Gopal Verma supports Kichcha Sudeep in Ajay Devgan Kannada Hindi Controversy

ಇಷ್ಟಕ್ಕೆ ಸುಮ್ಮನಾಗದ ವರ್ಮಾ, ಈಗ ಬಿಡುಗಡೆಯಾಗಿರುವ ಅಜಯ್ ದೇವಗನ್ ನಟನೆಯ "ರನ್‌ವೇ 34" ಸಿನಿಮಾ ಪ್ರಸ್ತಾಪಿಸಿ ಬಾಲಿವುಡ್ ನಟನ ಕಾಲೆಳೆದಿದ್ದಾರೆ.

"ಹಿಂದಿ ವರ್ಸಸ್ ಕನ್ನಡದಲ್ಲಿ ಯಾವುದಕ್ಕೆ ಹೆಚ್ಚು ಗೋಲ್ಡ್ ಇದೆ ಎಂಬುದು ರನ್‌ವೇ 34 ಸಿನಿಮಾ ಕಲೆಕ್ಷನ್‌ನಲ್ಲಿ ತಿಳಿಯುತ್ತದೆ" ಎಂದು ಆರ್‌ಜಿವಿ ತಮ್ಮದೇ ಶೈಲಿಯಲ್ಲಿ ಲೇವಡಿ ಮಾಡಿದ್ದಾರೆ.

ಕಿಚ್ಚನ ಹೇಳಿಕೆ, ಅದಕ್ಕೆ ದೇವಗನ್ ಪ್ರತಿಕ್ರಿಯೆ.... ಹೀಗೆ ಸರಣಿ ಶುರು...
ಉಪೇಂದ್ರ ನಟನೆಯ 'ಐ ಆ್ಯಮ್ ಆರ್' ಸಿನಿಮಾ ಬಿಡುಗಡೆ ಸಮಾರಂಭದಲ್ಲಿ ನಾಲ್ಕು ದಿನಗಳ ಹಿಂದೆ ಮಾತನಾಡುವಾಗ, "ಕನ್ನಡದಲ್ಲಿ ಪಾನ್ ಇಂಡಿಯಾ ಮೂವಿ ಮಾಡಲಾಯಿತು ಎಂದು ನೀವು ಹೇಳಿದಿರಿ. ಒಂದು ಸಣ್ಣ ಕರೆಕ್ಷನ್ ಮಾಡಬಯಸುತ್ತೇನೆ. ಹಿಂದಿ ರಾಷ್ಟ್ರಭಾಷೆಯಾಗಿ ಉಳಿದಿಲ್ಲ. ಬಾಲಿವುಡ್‌ನವರು ಇವತ್ತು ಪಾನ್ ಇಂಡಿಯಾ ಸಿನಿಮಾಗಳನ್ನ ಮಾಡುತ್ತಿದ್ದಾರೆ ಅಷ್ಟೇ" ಎಂದು ರಾಮ್ ಗೋಪಾಲ್ ವರ್ಮಾ ಅವರಿಗೆ ಹೇಳಿದರು.

Ram Gopal Verma supports Kichcha Sudeep in Ajay Devgan Kannada Hindi Controversy

ಆ ದಿನ ಕಿಚ್ಚ ಸುದೀಪ್ ಹೇಳಿದ ಈ ಮಾತಿಗೆ ಮೊನ್ನೆ ಅಜಯ್ ದೇವಗನ್ ಹಿಂದಿ ಭಾಷೆಯಲ್ಲಿ ಟ್ವೀಟ್ ಮೂಲಕ ಪ್ರತಿಕ್ರಿಯೆ ಕೊಟ್ಟರು. "...ನಿಮ್ಮ ಪ್ರಕಾರ ಒಂದು ವೇಳೆ ಹಿಂದಿ ನಮ್ಮ ರಾಷ್ಟ್ರೀಯ ಭಾಷೆ ಅಲ್ಲದೇ ಹೋಗಿದ್ದರೆ ನಿಮ್ಮ ಮಾತೃ ಭಾಷೆಯ ಸಿನಿಮಾಗಳನ್ನ ಹಿಂದಿಗೆ ಡಬ್ ಮಾಡಿ ಯಾಕೆ ಬಿಡುಗಡೆ ಮಾಡುತ್ತೀರಿ? ಹಿಂದಿ ನಮ್ಮ ಮಾತೃಭಾಷೆ, ಜೊತೆಗೆ ರಾಷ್ಟ್ರೀಯ ಭಾಷೆಯೂ ಆಗಿತ್ತು. ಮುಂದೆಯೂ ಹೀಗೇ ಇರುತ್ತದೆ.." ಎಂದು ತಮ್ಮ ಟ್ವೀಟ್‌ನಲ್ಲಿ ತಿಳಿಸಿದರು.

ಇದಕ್ಕೆ ಸುದೀಪ್ ನಯವಾಗಿಯೇ ತಿರುಗೇಟು ಕೊಟ್ಟರು: "ಸರ್, ನೀವು ಹಿಂದಿಯಲ್ಲಿ ಬರೆದ ಪದಗಳನ್ನ ನಾನು ಅರ್ಥ ಮಾಡಿಕೊಳ್ಳಬಲ್ಲೆ. ನಾವು ಹಿಂದಿಯನ್ನ ಗೌರವಿಸುತ್ತಿರುವುದುರಿಂದ, ಪ್ರೀತಿಸುತ್ತಿರುವುದರಿಂದ ಮತ್ತು ಕಲಿಯುತ್ತಿರುವುದರಿಂದ ಇದು ಸಾಧ್ಯವಾಗಿದೆ. ತಪ್ಪು ತಿಳಿಯಬೇಡಿ ಸರ್, ನಾನು ಕನ್ನಡದಲ್ಲಿ ಬರೆದು ಪ್ರತಿಕ್ರಿಯೆ ಕೊಟ್ಟರೆ ಹೇಗಿರುತ್ತಿತ್ತು ಯೋಚಿಸಿ. ನಾವೂ ಕೂಡ ಭಾರತಕ್ಕೆ ಸೇರಿಲ್ಲವಾ ಸರ್" ಎಂದು ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದರು.

ಅಗ ಅಜಯ್ ದೇವಗನ್ ದಾರಿಗೆ ಬಂದಿದ್ದಾರೆ. "ಸುದೀಪ್ ನೀವು ನನ್ನ ಸ್ನೇಹಿತ. ನನ್ನ ತಪ್ಪು ತಿಳಿವಳಿಕೆಯನ್ನ ನಿವಾರಿಸಿದ್ದಕ್ಕೆ ಧನ್ಯವಾದ. ಇಡೀ ಚಿತ್ರರಂಗ ಒಂದು ಎಂಬುದು ನನ್ನ ಭಾವನೆ. ನಾವು ಎಲ್ಲಾ ಭಾಷೆಗಳನ್ನ ಗೌರವಿಸುತ್ತೇವೆ. ಪ್ರತಿಯೊಬ್ಬರೂ ನಮ್ಮ ಭಾಷೆಯನ್ನ ಗೌರವಿಸಬೇಕೆಂದು ಅಪೇಕ್ಷಿಸುತ್ತೇವೆ. ಬಹುಶಃ ಭಾಷಾಂತರ (ಗ್ರಹಿಕೆ) ದಲ್ಲಿ ತಪ್ಪಾಗಿರಬೇಕು" ಎಂದು ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದರು.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+