Rakul Preet Singh: “ಐಟಿ ದಾಳಿ ನನಗೆ ಸಂಬಂಧಿಸಿದ್ದಲ್ಲ”; ಸೆನ್ಸೇಷನಲ್ ವರದಿಗಳ ವಿರುದ್ಧ ನಟಿ ಕಿಡಿ, ಪೋಸ್ಟ್ ವೈರಲ್!
Rakul Preet Singh: ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಅವರಿಗೆ ಸಂಬಂಧಿಸಿದ ಕೆಲವು ಪ್ರದೇಶಗಳಲ್ಲಿ ಐಟಿ ದಾಳಿ ನಡೆದಿದೆ. ಇದರ ಬೆನ್ನಲ್ಲೇ ಈ ವಿಚಾರವಾಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಆನ್‌ಲೈನ್ ಮೀಡಿಯಾಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಾಸ್ತವಾಂಶಗಳನ್ನು ಪರಿಶೀಲಿಸದೆ, ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡದೆ ಸುದ್ದಿಯನ್ನು ಸೆನ್ಸೇಷನಲ್ ಮಾಡುವ ರೀತಿಯಲ್ಲಿ ವರದಿ ಮಾಡುವ ಸ್ವಯಂಘೋಷಿತ ಆನ್‌ಲೈನ್ ವರದಿಗಾರರು ಹಾಗೂ ಕೆಲವು ಮುಖ್ಯವಾಹಿನಿ ಮಾಧ್ಯಮ ಪತ್ರಕರ್ತರ ಸಂಖ್ಯೆ ಹೆಚ್ಚುತ್ತಿರುವುದು ನೋವುಂಟು ಮಾಡುತ್ತಿದೆ. ಆದ್ದರಿಂದ, ಈ ವಿಚಾರದಲ್ಲಿ ಒಮ್ಮೆ ಮತ್ತು ಎಲ್ಲರಿಗೂ ಸ್ಪಷ್ಟನೆ ನೀಡಲು ಬಯಸುತ್ತೇನೆ.

ಐಟಿ ಇಲಾಖೆಯ ಶೋಧ ಕಾರ್ಯಾಚರಣೆ ನನಗೆ ಸಂಬಂಧಿಸಿದ್ದಲ್ಲ. ನಾನು ಸಶಸ್ತ್ರ ಪಡೆಗಳ ಹಿನ್ನೆಲೆಯಿಂದ ಬಂದವಳು. ಚಿತ್ರರಂಗದಲ್ಲಿ ನನಗೆ ಯಾವುದೇ ಗಾಡ್‌ಫಾದರ್ ಇರಲಿಲ್ಲ. ಕಠಿಣ ಪರಿಶ್ರಮದ ಮೂಲಕವೇ ನಾನು ಈ ಹಂತಕ್ಕೆ ಬಂದಿದ್ದೇನೆ. ಜವಾಬ್ದಾರಿಯುತ ಹಾಗೂ ಕಾನೂನು ಪಾಲಿಸುವ ನಾಗರಿಕನಾಳಾಗಿ ನಾನು 20ನೇ ವಯಸ್ಸಿನಿಂದಲೇ ನಿಯಮಿತವಾಗಿ ನನ್ನ ತೆರಿಗೆಗಳನ್ನು ಪಾವತಿಸುತ್ತಿದ್ದೇನೆ.
ನಾನು ವೈಯಕ್ತಿಕವಾಗಿ ಅಥವಾ ಯಾವುದೇ ನಿರ್ಮಾಣ ಸಂಸ್ಥೆಯ ಪರವಾಗಿ ಯಾವುದೇ ರೀತಿಯ ಅಕ್ರಮ ವಿದೇಶಿ ಹಣ ವರ್ಗಾವಣೆಯಲ್ಲಿ ಭಾಗಿಯಾಗಿಲ್ಲ. ದೇಶದ ಯಾವುದೇ ಭಾಗದಲ್ಲಾಗಲಿ ಅಥವಾ ವಿದೇಶದಲ್ಲಾಗಲಿ, ಯಾರ ಪರವಾಗಿಯೂ ಯಾವುದೇ ಬೇನಾಮಿ ಆಸ್ತಿಯನ್ನು ಹೊಂದಿಲ್ಲ. ಯಾರೂ ನನಗೆ ಎಂದಿಗೂ ಯಾವುದೇ ಆಸ್ತಿಯನ್ನು ಉಡುಗೊರೆಯಾಗಿ ನೀಡಿಲ್ಲ. ಇಂತಹ ದುಬಾರಿ ಉಡುಗೊರೆಗಳನ್ನು ಸ್ವೀಕರಿಸುವುದು ನನ್ನ ತತ್ವಗಳಿಗೆ ವಿರುದ್ಧವಾಗಿರುವುದರಿಂದ, ನಾನು ಅವುಗಳನ್ನು ಸ್ವೀಕರಿಸುವುದಿಲ್ಲ. ಆದ್ದರಿಂದ, ಈ ಸುಳ್ಳು, ದುರುದ್ದೇಶಪೂರಿತ ಹಾಗೂ ಊಹಾಪೋಹಗಳಿಂದ ಕೂಡಿದ ವರದಿಗಳನ್ನು ಪ್ರಕಟಿಸಿರುವ ಎಲ್ಲರೂ ಅವುಗಳನ್ನು ಹಿಂಪಡೆದು, ವಾಸ್ತವಾಂಶಗಳನ್ನು ಸ್ಪಷ್ಟಪಡಿಸುವಂತೆ ನಾನು ಮನವಿ ಮಾಡುತ್ತೇನೆ.
ಎಷ್ಟೇ ದೊಡ್ಡದಾದರೂ ಪ್ರತಿಯೊಂದು ಮಾಧ್ಯಮ ಸಂಸ್ಥೆಯೂ ತನ್ನದೇ ಆದ ವಾಣಿಜ್ಯ ಒತ್ತಡಗಳನ್ನು ಹೊಂದಿರುತ್ತದೆ ಎಂಬುದು ನನಗೆ ಅರ್ಥವಾಗುತ್ತದೆ. ಆದರೆ ಅದರ ಬೆಲೆ ವಾಸ್ತವಾಂಶಗಳಾಗಬಾರದು. ಅದರಲ್ಲೂ ಒಬ್ಬ ವ್ಯಕ್ತಿಯ ಗೌರವ ಮತ್ತು ಜೀವನೋಪಾಯಕ್ಕೆ ಧಕ್ಕೆ ತರುವಂತಿರಬಾರದು ಎಂದು ನಟಿ ರಕುಲ್ ಪ್ರೀತ್ ಸಿಂಗ್ ಅವರು ಎಚ್ಚರಿಕೆ ನೀಡಿದ್ದಾರೆ.
Rakul Preet Singh: ನಟಿ ರಕುಲ್ ಪ್ರೀತ್ ಸಿಂಗ್ ಪೋಸ್ಟ್‌ಗೆ ನೆಟ್ಟಿಗರು ಹೇಳಿದ್ದೇನು ?
ಕೆಲಸವಿಲ್ಲದ ಜನರಿಗೆ, ಅವರು ಏನು ಬೇಕಾದರೂ ಬರೆಯಬಹುದು, ಅದು ಉಚಿತ ಮತ್ತು ಸುಲಭ. ಯಾರೂ ಅವರನ್ನು ಪ್ರಶ್ನಿಸುವುದಿಲ್ಲ. ಈ ವಿಷಯ ಮಾನವೀಯತೆಗೆ ಬೆದರಿಕೆಯಾಗಿ ಬದಲಾಗುತ್ತಿದೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಈ ಆಧಾರರಹಿತ ವದಂತಿಗಳಿಗೆ ಪೂರ್ಣ ವಿರಾಮ ಹಾಕುವ ಸಮಯ ಬಂದಿದೆ. ದುಃಖಕರವೆಂದರೆ, ಕೆಲವು ರಾಜಕಾರಣಿಗಳು ಸಹ ಇವುಗಳಿಗೆ ಉತ್ತೇಜನ ನೀಡುತ್ತಿದ್ದಾರೆ. ದಯವಿಟ್ಟು ನಿಮ್ಮ ಮತ್ತು ಕೆಟಿಆರ್ ಅವರ ಬಗ್ಗೆ ಸುಳ್ಳು ಮಾಹಿತಿ ಹರಡುವವರ ವಿರುದ್ಧ ಪೊಲೀಸ್ ಬೆಂಬಲದೊಂದಿಗೆ ಬಲವಾದ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಿ ಎಂದು ಅವರ ಅಭಿಮಾನಿಗಳು ಸಲಹೆ ನೀಡಿದ್ದಾರೆ.
ಸೋಕಾಲ್ಡ್ ಪತ್ರಕರ್ತರೆಂದು ಕರೆಯಲ್ಪಡುವವರು YouTube ನಲ್ಲಿ ಮಾತ್ರ ಇರುತ್ತಾರೆ. ಅವರಿಗೆ ಸತ್ಯಗಳ ಬಗ್ಗೆ ಕಾಳಜಿ ಇಲ್ಲ; ಅವರು ಹಣ ಗಳಿಸಲು ವೀವ್ಸ್ ಮಾತ್ರ ಬಯಸುತ್ತಾರೆ, ಅಷ್ಟೇ. ನೀವು ಸೆಲೆಬ್ರಿಟಿಯಾಗಿರುವುದು ಒಂದೇ ತಪ್ಪು - ಅವರು ನಿಮ್ಮ ಬಗ್ಗೆ ಸುದ್ದಿ ಮಾಡಿದರೆ, ಎಲ್ಲರೂ ಅದನ್ನು ನೋಡುತ್ತಾರೆ ಎಂದು ವಸು ಎನ್ನುವ ನೆಟ್ಟಿಗರು ರಿಯಾಕ್ಟ್ ಮಾಡಿದ್ದಾರೆ.


Click it and Unblock the Notifications
