Live

Rajya Sabha Elections 2022 Live : ಬಿಜೆಪಿ 19, ಕಾಂಗ್ರೆಸ್ 8- ಏಳು ಸ್ಥಾನಗಳಿಗೆ ಫಲಿತಾಂಶ ಪ್ರಕಟ ಬಾಕಿ

ನವದೆಹಲಿ, ಜೂನ್ 11: ದೇಶದಲ್ಲಿ ರಾಜ್ಯಸಭೆ ಚುನಾವಣೆಯದ್ದೇ ಹಲ್ ಚಲ್ ನಡೆಯುತ್ತಿದೆ. 15 ರಾಜ್ಯಗಳ 57 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಇದರಲ್ಲಿ 11 ರಾಜ್ಯಗಳಲ್ಲಿ ಒಟ್ಟು 41 ರಾಜ್ಯಸಭೆ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆದಿದೆ.

ಕರ್ನಾಟಕದಲ್ಲಿ ಅನಿಶ್ಚಿತವಾಗಿದ್ದ ನಾಲ್ಕನೇ ಸ್ಥಾನ ಬಿಜೆಪಿ ಪಾಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಬಿಜೆಪಿ ಮೂರು ರಾಜ್ಯಸಭಾ ಸ್ಥಾನಗಳನ್ನು ಗೆದ್ದಂತಾಗಿದೆ. ರಾಜಸ್ಥಾನದ ನಾಲ್ಕು ಸ್ಥಾನಗಳ ಪೈಕಿ ಕಾಂಗ್ರೆಸ್ ಮೂರನ್ನು ಗೆದ್ದರೆ ಬಿಜೆಪಿಗೆ ದಕ್ಕಿದ್ದು ಒಂದು ಮಾತ್ರ.

ಬಿಜೆಪಿ ಮತ್ತು ಕಾಂಗ್ರೆಸ್ ಜಿದ್ದಾಜಿದ್ದಿನ ಹೋರಾಟದ ನಡುವೆ ಸ್ವತಂತ್ರ್ಯ ಅಭ್ಯರ್ಥಿಗಳು ಮತ್ತು ಪ್ರಾದೇಶಿಕ ಪಕ್ಷದ ಸದಸ್ಯರ ಮತಗಳೇ ಫಲಿತಾಂಶವನ್ನು ನಿರ್ಧರಿಸುವ ಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಕಳ್ಳಬೇಟೆಗಾಗಿ ಹೋಟೆಲ್ ಅಥವಾ ರೆಸಾರ್ಟ್ ರಾಜಕಾರಣ ಈಗಾಗಲೇ ಶುರುವಾಗಿದೆ.

Rajya Sabha Polls 2022 Live Updates in Kannada; 15 States Rajya Sabha Elections Voting, Counting of Votes and Results

ಜೂನ್ 10ರ ಶುಕ್ರವಾರ ಮತದಾನ ಪ್ರಕ್ರಿಯೆ ನಡೆಯಲಿದೆ. ಸಂಜೆ ಮತ ಎಣಿಕೆ ನಡೆದು ಫಲಿತಾಂಶ ಸಹ ಘೋಷಣೆಯಾಗಲಿದೆ. ರಾಜ್ಯಸಭಾ ಚುನಾವಣೆ ರಾಜಕೀಯ ಬೆಳವಣಿಗೆಗಳು ಮತ್ತು ಫಲಿತಾಂಶದ ಕ್ಷಣಕ್ಷಣದ ಮಾಹಿತಿಗಾಗಿ ಮುಂದೆ ಓದಿ....

Jun 11, 2022, 1:19 am IST
ಮಹಾರಾಷ್ಟ್ರ

ಚುನಾವಣಾ ಆಯೋಗವು RO/ ವೀಕ್ಷಕರು/ವಿಶೇಷ ವೀಕ್ಷಕರ ವರದಿ, ವೀಡಿಯೊ ದೃಶ್ಯಾವಳಿಗಳನ್ನು ವೀಕ್ಷಿಸಿದ ನಂತರ ವಿವರವಾದ ಆದೇಶವನ್ನು ನೀಡಲಿದೆ. ಸದ್ಯಕ್ಕೆ ಶಾಸಕ ಸುಹಾಸ್ ಕಾಂಡೆ ಅವರು ಚಲಾಯಿಸಿದ ಮತವನ್ನು ತಿರಸ್ಕರಿಸಲು ROಗೆ ನಿರ್ದೇಶಿಸಿದ್ದು, ಮತಗಳ ಎಣಿಕೆಯನ್ನು ಪ್ರಾರಂಭಿಸಲು ಅನುಮತಿ ನೀಡಿದೆ.
Jun 11, 2022, 1:17 am IST
ಮಹಾರಾಷ್ಟ್ರ

ಮಹಾರಾಷ್ಟ್ರ: ಮತ ಎಣಿಕೆಗೆ ಅನುಮತಿ ನೀಡಿದ ಆಯೋಗ

ಮಹಾರಾಷ್ಟ್ರ ರಾಜ್ಯಸಭಾ ಚುನಾವಣಾ ಫಲಿತಾಂಶ: ಮತ ಎಣಿಕೆಗೆ ಕೇಂದ್ರ ಚುನಾವಣಾ ಆಯೋಗದಿಂದ ಅನುಮತಿ, ಶಾಸಕ ಸುಹಾಸ್ ಕಾಂಡೆ ಅವರ ಮತವನ್ನು ತಿರಸ್ಕರಿಸಲಾಗಿದೆ.
Jun 11, 2022, 12:05 am IST

ಮಹಾರಾಷ್ಟ್ರದಲ್ಲಿ 5 ಮತ್ತು ಹರಿಯಾಣದಲ್ಲಿ 2 ಸ್ಥಾನಗಳಿಗೆ ಫಲಿತಾಂಶ ಬರಬೇಕಿದೆ. ಮಹಾರಾಷ್ಟ್ರದಲ್ಲಿ ಒಟ್ಟು 6 ರಾಜ್ಯಸಭಾ ಸ್ಥಾನಗಳಿದ್ದು, ಬಿಜೆಪಿಯ ಪಿಯೂಶ್ ಗೋಯಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Jun 11, 2022, 12:00 am IST
ರಾಜಸ್ಥಾನ

ರಾಜಸ್ಥಾನ ಬಿಜೆಪಿ ಶಾಸಕ ಅಮಾನತು

ಧೋಲ್ ಪುರ್ ಶಾಸಕರಾದ ಶೋಭಾರಾಣಿ ಕುಶ್ವಾಹ ಅವರು ಇಂದು ನಡೆದ ರಾಜ್ಯಸಭೆ ಚುನಾವಣೆ ಮತದಾನ ಪ್ರಕ್ರಿಯೆಯಲ್ಲಿ ಅಡ್ಡ ಮತದಾನ ಮಾಡಿ ಪ್ರತಿಪಕ್ಷಕ್ಕೆ ನೆರವು ನೀಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಬಿಜೆಪಿ ಅಧಿಕೃತವಾಗಿ ಹೇಳಿದೆ.
Jun 10, 2022, 11:56 pm IST

ರಾಜ್ಯಸಭೆ ಚುನಾವಣೆ ಫಲಿತಾಂಶ: ಒಟ್ಟು ಸ್ಥಾನ 57 ಈವರೆಗೆ ಫಲಿತಾಂಶ ಪ್ರಕಟವಾಗಿರುವುದು: 50 ಬಿಜೆಪಿ: 19 ಎಡಿಎಂಕೆ: 2 ಜೆಡಿಯು: 1 ಆರ್‌ಎಲ್‌ಡಿ: 1 ಕಾಂಗ್ರೆಸ್: 8 ಡಿಎಂಕೆ: 3 ಆರ್‌ಜೆಡಿ: 2 ವೈಎಸ್ಸಾರ್ ಕಾಂಗ್ರೆಸ್: 4 ಬಿಜೆಡಿ: 3 ಎಎಪಿ: 2 ಜೆಎಂಎಂ: 1 ಎಸ್‌ಪಿ: 1 ಪಕ್ಷೇತರ: 1 ಟಿಆರ್‌ಎಸ್: 2
Jun 10, 2022, 11:35 pm IST

ರಾಜಸ್ಥಾನದಲ್ಲಿ ವಿಜೇತರು

ಕಾಂಗ್ರೆಸ್ ಪಕ್ಷದ ರಣದೀಪ್ ಸುರ್ಜೇವಾಲ, ಮುಕುಲ್ ವಾಸ್ನಿಕ್, ಪ್ರಮೋದ್ ತಿವಾರಿ, ಬಿಜೆಪಿಯ ಘನಶ್ಯಾಮ್ ತಿವಾರಿ. ಬಿಜೆಪಿ ಬೆಂಬಲಿತ ಉದ್ಯಮಿ ಸುಭಾಷ್ ಚಂದ್ರಗೆ ಸೋಲು.
Jun 10, 2022, 11:32 pm IST

ರಾಜಸ್ಥಾನದಲ್ಲಿ ಕೈ ಪಾಲಾದ 3 ಸ್ಥಾನಗಳು

ರಾಜಸ್ಥಾನದಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷ ಮೂರು ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಬಿಜೆಪಿ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
Jun 10, 2022, 9:22 pm IST

ಕರ್ನಾಟಕದಲ್ಲಿ ಬಿಜೆಪಿಗೆ 3, ಕಾಂಗ್ರೆಸ್‌ಗೆ 1 ಸ್ಥಾನ

ನಿರ್ಮಲಾ ಸೀತಾರಾಮನ್, ಜಗ್ಗೇಶ್, ಜಯರಾಮ್ ರಮೇಶ್‌, ಲೆಹರ್ ಸಿಂಗ್‌ ಜಯ
Jun 10, 2022, 9:21 pm IST

ಕರ್ನಾಟಕದಲ್ಲಿ ಬಿಜೆಪಿಗೆ 3, ಕಾಂಗ್ರೆಸ್‌ಗೆ 1 ಸ್ಥಾನ. ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಮತ್ತು ಲೆಹರ್ ಸಿಂಗ್ ಆಯ್ಕೆ. ಕಾಂಗ್ರೆಸ್‌ನ ಜೈರಾಜ್ ರಮೇಶ್‌ಗೂ ಗೆಲುವು.
Jun 10, 2022, 8:55 pm IST

ನಿರ್ಮಲಾ ಸೀತಾರಾಮನ್, ಜಗ್ಗೇಶ್, ಜಯರಾಮ್ ರಮೇಶ್‌, ಲೆಹರ್ ಸಿಂಗ್‌ ಜಯ

ರಾಜ್ಯಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ನಿರೀಕ್ಷೆಯಂತೆ ಬಿಜೆಪಿಯ ಇಬ್ಬರು ಅಭ್ಯರ್ಥಿಗಳಾದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ನಟ ಜಗ್ಗೇಶ್ ಹಾಗೂ ಕಾಂಗ್ರೆಸ್‌ನ ಜಯರಾಮ್ ರಮೇಶ್ ಕರ್ನಾಟಕದಿಂದ ರಾಜ್ಯಸಭೆ ಪ್ರವೇಶ ಮಾಡಿದ್ದಾರೆ.
Jun 10, 2022, 8:53 pm IST

ಕಾಂಗ್ರೆಸ್ –ಜೆಡಿಎಸ್ ಪ್ರತಿಷ್ಠೆಗೆ ಜಾತ್ಯತೀತತೆ ಮಂತ್ರ ನಗಣ್ಯ!

ಜಾತ್ಯತೀತ ಮಂತ್ರ ಜಪಿಸುತ್ತಾ, ಬಿಜೆಪಿಯನ್ನು ಕೋಮುವಾದಿ ಎಂಬಂತೆ ಬಿಂಬಿಸುತ್ತಾ ಒಂದಷ್ಟು ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಬಹುದು ಎಂಬ ಚಿಂತನೆಯಲ್ಲಿರುವ ಜೆಡಿಎಸ್‌ ಮತ್ತು ಕಾಂಗ್ರೆಸ್ ರಾಜ್ಯಸಭೆ ಚುನಾವಣೆ ಬಳಿಕ ಬದ್ಧವೈರಿಗಳಾಗಿದ್ದು, ಸದ್ಯದ ಎರಡು ಪಕ್ಷಗಳ ಮನಸ್ಥಿತಿಯನ್ನು ಗಮನಿಸಿದರೆ ಎರಡು ಪಕ್ಷಗಳ ನಾಯಕರ ಪ್ರತಿಷ್ಠೆಗೆ ಜಾತ್ಯಾತೀತ ಮಂತ್ರ ನಗಣ್ಯವಾದಂತಾಗಿದೆ.
Jun 10, 2022, 8:16 pm IST

ಅವಿರೋಧವಾಗಿ ಆಯ್ಕೆಯಾಗಿರುವ 41 ಮಂದಿ ಪೈಕಿ, ಎನ್‌ಡಿಎ 17, ಯುಪಿಎ 10 ಮತ್ತು ಇತರರು 14 ಸದಸ್ಯರಿದ್ದಾರೆ. ಇನ್ನುಳಿದ 16 ಸ್ಥಾನಗಳಿಗೆ ಯಾರು ಆಯ್ಕೆಯಾಗುತ್ತಾರೆ ಎಂಬ ಕುತೂಹಲಕ್ಕೆ ಸದ್ಯದಲ್ಲೇ ತೆರೆಬೀಳಲಿದೆ.
Jun 10, 2022, 6:55 pm IST

ಮಹಾರಾಷ್ಟ್ರದ ಆಡಳಿತಾರೂಢ ಮೈತ್ರಿಕೂಟದ ಮೂವರು ಶಾಸಕರಿಂದ ಮತದನಾ ನಿಯಮ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಎನ್‌ಸಿಪಿಯ ಜಿತೇಂದ್ರ ಅವ್ಹಾದ್, ಕಾಂಗ್ರೆಸ್‌ನ ಯಶೋಮತಿ ಠಾಕೂರ್ ಮತ್ತು ಶಿವಸೇನೆಯ ಸುಹಾಸ್ ಕಾಂಡೆ ಅವರ ಮತಗಳನ್ನು ಅಸಿಂಧುಗೊಳಿಸುವಂತೆ ವಿಪಕ್ಷ ಬಿಜೆಪಿ ಒತ್ತಾಯಿಸಿದೆ. ಮಹಾರಾಷ್ಟ್ರದಲ್ಲಿ ಒಟ್ಟು 6 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಆಗಿದೆ.
Jun 10, 2022, 3:55 pm IST

ಒವೈಸಿ ಮಹಾ ಕಾರ್ಯತಂತ್ರ

ಮಹಾರಾಷ್ಟ್ರದ ಆರು ರಾಜ್ಯಸಭಾ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಅಸಾದುದ್ದೀನ್ ಒವೈಸಿಯವರ ಎಐಎಂಐಎಂ ಪಕ್ಷ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಲು ನಿರ್ಧಾರ ಮಾಡಿದೆ. ಬಿಜೆಪಿಯನ್ನು ಸೋಲಿಸಲು ಒವೈಸಿ ಈ ಕಾರ್ಯತಂತ್ರ ಮಾಡಿದೆ. ಮಹಾರಾಷ್ಟ್ರದಲ್ಲಿ ಎಐಎಂಐಎಂ ಪಕ್ಷದ ಇಬ್ಬರು ಶಾಸಕರಿದ್ಧಾರೆ. ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಪ್ರತಾಪಗಡಿ ಅವರಿಗೆ ಈ ಇಬ್ಬರೂ ಕೂಡ ಮತ ಹಾಕಿದ್ಧಾರೆ.
Jun 10, 2022, 3:25 pm IST

ಚಾಲೀಸ ಪಠಣ

ಮಹಾರಾಷ್ಟ್ರದಲ್ಲಿ ಸಿಎಂ ನಿವಾಸದ ಎದುರು ಹನುಮಾನ್ ಚಾಲೀಸ ಪಠಣ ಮಾಡುವುದಾಗಿ ಹೇಳಿ ಬಂಧಿತರಾಗಿದ್ದ ಶಾಸಕ ರವಿ ರಾಣಾ ಇಂದು ರಾಜ್ಯಸಭೆ ಚುನಾವಣೆಗೆ ಮತದಾನಕ್ಕೆ ಹೊರಡುವ ಮುನ್ನ 101 ಬಾರಿ ಹನುಮಾನ್ ಚಾಲೀಸ ಮಂತ್ರಗಳನ್ನು ಪಠಣ ಮಾಡಿದರೆನ್ನಲಾಗಿದೆ.
Jun 10, 2022, 3:15 pm IST

ಇದುವರೆಗಿನ ಅಪ್‌ಡೇಟ್ಸ್

* ಕರ್ನಾಟಕದ 4 ಸೇರಿದಂತೆ ಒಟ್ಟು 57 ರಾಜ್ಯಸಭಾ ಸ್ಥಾನಗಳಿಗೆ ಇಂದು ಚುನಾವಣೆ * 41 ಸ್ಥಾನಗಳಿಗೆ ಅವಿರೋಧವಾಗಿ ಅಭ್ಯರ್ಥಿಗಳು ಆಯ್ಕೆ * ಇನ್ನುಳಿದ 16 ಸ್ಥಾನಗಳಿಗೆ ನಿಕಟ ಪೈಪೋಟಿ ಇದೆ. * ಕರ್ನಾಟಕದ ನಾಲ್ಕು ಸ್ಥಾನಗಳ ಪೈಕಿ ಬಿಜೆಪಿಗೆ 2 ಮತ್ತು ಕಾಂಗ್ರೆಸ್‌ಗೆ 1 ಸ್ಥಾನ ಸಿಕ್ಕಿದೆ. ಇನ್ನೊಂದು ಸ್ಥಾನಕ್ಕಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಪೈಪೋಟಿ ಇದೆ. * ಜೆಡಿಎಸ್‌ನ ಕೆಲ ಶಾಸಕರು ಕಾಂಗ್ರೆಸ್ ಪರ ಕ್ರಾಸ್ ವೋಟಿಂಗ್ ಮಾಡಿದ್ದು ಮುಂದಿನ ರಾಜ್ಯ ರಾಜಕೀಯ ದಿಗ್ಸೂಚಿಯಾಗುವ ನಿರೀಕ್ಷೆ ಇದೆ.
Jun 10, 2022, 2:54 pm IST
ಮಹಾರಾಷ್ಟ್ರ

ಮಹಾ ವಿಕಾಸ್ ಅಗಾಧಿಯ ಎಲ್ಲಾ ನಾಲ್ಕು ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಬಿಜೆಪಿಗೆ ಇದು ಗೊತ್ತಿದ್ದು, ಅದಕ್ಕಾಗಿ ಅವರು ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಯಶೋಮತಿ ಠಾಕೂರ್ ದೂಷಿಸಿದ್ದಾರೆ.
Jun 10, 2022, 2:35 pm IST
ಮಹಾರಾಷ್ಟ್ರ

"ಇಬ್ಬರು ಶಾಸಕರು ತಮ್ಮ ಮತಪತ್ರಗಳನ್ನು ತಮ್ಮ ಪಕ್ಷಗಳ ಮತಗಟ್ಟೆ ಏಜೆಂಟರಿಗೆ ನೀಡಿದ್ದು ನಿಯಮ ಉಲ್ಲಂಘನೆಯಾಗಿದೆ ಎಂಬ ಕಾರಣಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಅವರು ತಮ್ಮ ಮತಪತ್ರಗಳನ್ನು ತಮ್ಮ ಏಜೆಂಟರಿಗೆ ಮಾತ್ರ ತೋರಿಸಬಹುದು ಆದರೆ ಅವುಗಳನ್ನು ಯಾರಿಗೂ ಹಸ್ತಾಂತರಿಸಬಾರದು," ಬಿಜೆಪಿ ಮುಖಂಡ ಪರಾಗ್ ಅಲ್ವಾನಿ ಹೇಳಿದ್ದಾರೆ.
Jun 10, 2022, 2:26 pm IST
ಮಹಾರಾಷ್ಟ್ರ

ಎಂವಿಎ-ಐಎನ್‌ಸಿಯ ಯಶೋಮತಿ ಠಾಕೂರ್, ಎನ್‌ಸಿಪಿಯ ಜಿತೇಂದ್ರ ಅವ್ಹಾದ್ ಮತ್ತು ಶಿವಸೇನೆಯ ಸುಹಾಸ್ ಕಾಂಡೆ ಅವರ ಮೂರು ಮತಗಳ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಅವರ ಮತಗಳನ್ನು ಅಸಿಂಧುಗೊಳಿಸುವಂತೆ ಬಿಜೆಪಿ ಚುನಾವಣಾಧಿಕಾರಿಗೆ ಮನವಿ ಮಾಡಿದೆ
Jun 10, 2022, 2:13 pm IST
ಕರ್ನಾಟಕ

ನಾಲ್ಕು ಸ್ಥಾನಗಳಿಗೆ ನಡೆದ ರಾಜ್ಯಸಭೆ ಚುನಾವಣೆಗೆ ಮತದಾನ ಬಹುತೇಕ ಅಂತ್ಯವಾಗಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷದ ಶಾಸಕರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
Jun 10, 2022, 2:06 pm IST
ರಾಜಸ್ಥಾನ

ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಕುದುರೆ ವ್ಯಾಪಾರದಲ್ಲಿ ತೊಡಗಿಸಿಕೊಳ್ಳಲು ಹಣದ ಬಲವನ್ನು ಬಳಸುತ್ತಿದೆ ಎಂದು ವಿರೋಧ ಪಕ್ಷದ ಉಪನಾಯಕ ರಾಜೇಂದ್ರ ರಾಥೋಡ್ ಆರೋಪಿಸಿದ್ದಾರೆ. ಮತದಾನದ ವೇಳೆ ತಿರಸ್ಕೃತಗೊಂಡಿರುವ ಪಕ್ಷದ ಶಾಸಕಿ ಶೋಭಾ ರಾಣಿ ಖುಷ್ವಾಹಾ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಬಿಜೆಪಿ ನಾಯಕತ್ವ ನಿರ್ಧರಿಸಲಿದೆ ಎಂದು ಅವರು ತಿಳಿಸಿದರು.
Jun 10, 2022, 1:56 pm IST
ಕರ್ನಾಟಕ

"ಜೆಡಿಎಸ್ ಅಭ್ಯರ್ಥಿಗೆ ನನ್ನ ಮತ"

ರಾಜ್ಯಸಭೆ ಚುನಾವಣೆ ಹಿನ್ನೆಲೆ ಮೈಸೂರಿನಿಂದ ಹೊರಟ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ವಿಧಾನಸೌಧಕ್ಕೆ ತಲುಪಿದ್ದಾರೆ. "ನಮ್ಮ ಪಕ್ಷದಲ್ಲಿ ಎಷ್ಟೇ ವಿರಸವಿದ್ದರೂ, ನನ್ನ ಮತ ಜೆಡಿಎಸ್ ಪರವಾಗಿಯೇ ಇರುತ್ತದೆ. ನನಗೆ ಕ್ಷೇತ್ರದ ಮತದಾರರು ಜೆಡಿಎಸ್ ಅಭ್ಯರ್ಥಿ ಎಂದು ಮತ ನೀಡಿದ್ದಾರೆ. ನಾನು ಈಗ ಜೆಡಿಎಸ್ ಅಭ್ಯರ್ಥಿಗೆ ಮತದಾನ ಮಾಡುತ್ತೇನೆ," ಎಂದು ಜಿ ಟಿ ದೇವೇಗೌಡ ಹೇಳಿದ್ದಾರೆ.
Jun 10, 2022, 1:49 pm IST
ಮಹಾರಾಷ್ಟ್ರ

ಮಧ್ಯಾಹ್ನ 1 ಗಂಟೆ ಅಂಕಿ-ಅಂಶ:

ರಾಜ್ಯಸಭೆ ಚುನಾವಣೆ ಹಿನ್ನೆಲೆ ಈ ಸಮಯಕ್ಕೆ ಒಟ್ಟು 260 ಶಾಸಕರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.
Jun 10, 2022, 1:40 pm IST
ಕರ್ನಾಟಕ

ಹೆಚ್ ಡಿ ರೇವಣ್ಣಗೆ ಆಯೋಗದ ಕ್ಲೀನ್ ಚಿಟ್:

ಹೆಚ್ ಡಿ ರೇವಣ್ಣಗೆ ಆಯೋಗದ ಕ್ಲೀನ್ ಚಿಟ್:
ರಾಜ್ಯಸಭೆ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ವಿರುದ್ಧ ಕಾಂಗ್ರೆಸ್ ಮತ್ತು ಬಿಜೆಪಿ ನೀಡಿದ ದೂರನ್ನು ಆಯೋಗ ತಿರಸ್ಕರಿಸಿದೆ. ರೇವಣ್ಣ ಮತವನ್ನು ಅಸಿಂಧುಗೊಳಿಸುವಂತೆ ನೀಡಿದ ದೂರಿನ ಹಿನ್ನೆಲೆ ಎಲ್ಲ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗಿದೆ. ಮತವು ಯಾವುದೇ ರೀತಿ ಅಸಿಂಧುವಾಗಿಲ್ಲ, ಎಂದು ರಾಜ್ಯ ಚುನಾವಣಾ ಅಧಿಕಾರಿ ವಿಶಾಲಾಕ್ಷಿ ಪತ್ರ ಬರೆದಿದ್ದಾರೆ.
Jun 10, 2022, 1:31 pm IST
ಕರ್ನಾಟಕ

"ಸಿದ್ದರಾಮಯ್ಯನ ಕಾಂಗ್ರೆಸ್ ಪಕ್ಷಕ್ಕೆ ಗೂಟ":

"ಜೆಡಿಎಸ್ ಪಕ್ಷದ ಇಬ್ಬರು ಶಾಸಕರು ಅಡ್ಡ ಮತದಾನ ಮಾಡುವ ಸುಳಿವು ಮೊದಲೇ ಇತ್ತು. ಆದರೆ ಕಾಂಗ್ರೆಸ್ ಪಕ್ಷದ ನಿರೀಕ್ಷೆಯಂತೆ 8 ರಿಂದ 10 ಶಾಸಕರು ಅಡ್ಡ ಮಾಡುತ್ತಾರೆ ಎನ್ನುವುದು ಸುಳ್ಳಾಗಿದೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನವರ ಕಾಂಗ್ರೆಸ್ ಪಕ್ಷಕ್ಕೆ ಗೂಟ ಹೊಡೆಯುತ್ತೇವೆ," ಎಂದು ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Jun 10, 2022, 1:10 pm IST
ಕರ್ನಾಟಕ

ಕಾಂಗ್ರೆಸ್ ಎನ್ನುವುದು ಬಿಜೆಪಿ "B" ಟೀಮ್:

ಶ್ರೀನಿವಾಸಗೌಡ ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎಂದು ಹೇಳಿದ್ದೆ. ಎಸ್‌ಆರ್‌ ಶ್ರೀನಿವಾಸ್‌ ಕೂಡ ಜೆಡಿಎಸ್‌ಗೆ ಮತ ಹಾಕಿಲ್ಲ. ಕಾಂಗ್ರೆಸ್ ಇಂದು ತನ್ನ ನಿಜವಾದ ಮುಖವನ್ನು ತೋರಿಸಿದೆ. ಬಿಜೆಪಿಯ ‘B’ ಟೀಂ ಕಾಂಗ್ರೆಸ್. ದೇಶದಲ್ಲಿ ಬಿಜೆಪಿ ಬೆಳೆಯಲು ಇವರೇ ಕಾರಣಕರ್ತರು," ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ದೂಷಿಸಿದ್ದಾರೆ.
Jun 10, 2022, 1:03 pm IST
ರಾಜಸ್ಥಾನ

ಮತ ಸಿಂಧುತ್ವ ನಿರ್ಧರಿಸಲು ಸಿಸಿ ಕ್ಯಾಮರಾ ಪರಿಶೀಲನೆ:

ಕೈಲಾಶ್ ಮೀನಾ ಅವರು ತಮ್ಮ ಮತಪತ್ರವನ್ನು ತೋರಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಬಹುದು, ತದನಂತರದಲ್ಲಿ ಮತದ ಸಿಂಧುತ್ವವನ್ನು ನಿರ್ಧರಿಸಲಾಗುತ್ತದೆ.
Jun 10, 2022, 12:57 pm IST
ರಾಜಸ್ಥಾನ

ಬಿಜೆಪಿ ಶಾಸಕ ಕೈಲಾಶ್ ಮೀನಾ ಬಿಜೆಪಿ ಪೋಲಿಂಗ್ ಏಜೆಂಟ್‌ಗೆ ತಮ್ಮ ಮತವನ್ನು ತೋರಿಸಿದ್ದಾರೆ ಎಂದು ಆರೋಪಿಸಿ ರಾಜಸ್ಥಾನ ವಿಧಾನಸಭೆಯ ಉಪನಾಯಕ ರಾಜೇಂದ್ರ ರಾಥೋಡ್ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಾಸ್ರಾ ನಡುವೆ ವಾಗ್ವಾದ ನಡೆಯಿತು.
Jun 10, 2022, 12:55 pm IST
ರಾಜಸ್ಥಾನ

ರಾಜ್ಯಸಭಾ ಚುನಾವಣೆಯ ಮತದಾನದ ವೇಳೆ ಬಿಜೆಪಿ ಶಾಸಕಿ ಶೋಭಾರಾಣಿ ಕುಶ್ವಾಹ ಮತವನ್ನು ತಿರಸ್ಕರಿಸಲಾಗಿದೆ. ಅವರು ಧೋಲ್ಪುರದ ಶಾಸಕಿಯಾಗಿದ್ದು, ಮತ ಎಣಿಕೆ ವೇಳೆಯಲ್ಲಿ ಸಿಂಧುತ್ವವನ್ನು ನಿರ್ಧರಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಹೇಳಿದ್ದಾರೆ.
Jun 10, 2022, 12:47 pm IST
ಹರ್ಯಾಣ

ನಾನು ಕಾರ್ತಿಕೇಯ ಶರ್ಮಾ ಅಥವಾ ಇತರ ಯಾವುದೇ ಅಭ್ಯರ್ಥಿಗೆ ಮತ ಹಾಕುವುದಿಲ್ಲ. ಇಂದು ನಾನು ಗೈರು ಹಾಜರಾಗಿದ್ದೇನೆ. ನಾನು ಹರ್ಯಾಣದ ಜನರೊಂದಿಗೆ ನಿಲ್ಲುತ್ತೇನೆ. ಇಲ್ಲಿ ಶಾಸಕರ ಖರೀದಿ ಮತ್ತು ಮಾರಾಟಕ್ಕೆ 'ಮಂಡಿ' ಇದೆ. ನನಗೆ ಹಲವು ಆಫರ್‌ಗಳು ಬಂದಿವೆ, ಆದರೆ ಯಾರೂ ನನ್ನನ್ನು ಖರೀದಿಸಲು ಅಥವಾ ಬೆದರಿಕೆ ಹಾಕಲು ಸಾಧ್ಯವಿಲ್ಲ," ಎಂದು ಪಕ್ಷೇತರ ಶಾಸಕ ಬಾಲರಾಜ್ ಕುಂದು ಹೇಳಿದ್ದಾರೆ. :ಬಾಲರಾಜ್ ಕುಂದು, ಸ್ವತಂತ್ರ ಶಾಸಕ
READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+