ರಾಜ್ಯಸಭಾ ಚುನಾವಣೆ: ಇಲ್ಲಿದೆ ಅಭ್ಯರ್ಥಿಗಳ ಅಂತಿಮ ಪಟ್ಟಿ

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 12: ರಾಜ್ಯಸಭಾ ಚುನಾವಣೆಗೆ ಈಗಾಗಲೇ ಅಖಾಡ ಸಿದ್ಧವಾಗಿದೆ. 59 ರಾಜ್ಯಸಭಾ ಸೀಟುಗಳಿಗೆ ನಡೆಯಲಿರುವ ಚುನಾವಣೆಗೆ ಮಾ.23 ರಂದು ಮತದಾನ ನಡೆಯಲಿದೆ.

ಈಗಾಗಲೇ ಎಲ್ಲ ಪಕ್ಷಗಳೂ ರಾಜ್ಯಸಭೆಗೆ ತಮ್ಮ ಪಕ್ಷಗಳ ಅಭ್ಯರ್ಥಿಯನ್ನು ಘೋಷಿಸಿದ್ದಾರೆ. ಬಿಜೆಪಿ 18 ಅಭ್ಯರ್ಥಿಗಳ ಹೆಸರು ಘೋಷಿಸಿದ್ದರೆ, ಕಾಂಗ್ರೆಸ್ 10 ಅಭ್ಯರ್ಥಿಗಳ ಹೆಸರು ಸೂಚಿಸಿದೆ. ಬಿಜೆಪಿ ಘೋಷಿಸಿದ 18 ಅಭ್ಯರ್ಥಿಗಳಲ್ಲಿ 7 ಅಭ್ಯರ್ಥಿಗಳು ಉತ್ತರ ಪ್ರದೇಶದಿಂದ ಸ್ಪರ್ಧಿಸುತ್ತಿದ್ದಾರೆ.

ರಾಜ್ಯಸಭೆಗೆ ಸದಸ್ಯರ ಆಯ್ಕೆ ಹೇಗೆ? ಮತ ಲೆಕ್ಕಾಚಾರ ಹೇಗಿರುತ್ತೆ?

ಮಾ.23 ರಂದು ಚುನಾವಣೆ ನಡೆಯಲಿದ್ದು, ಅಂದೇ ಮತ ಎಣಿಕೆಯೂ ನಡೆಯುತ್ತದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ ಇಂದು(ಮಾ.12). ನಾಮಪತ್ರ ಹಿಂಪಡೆಯಲು ಮಾರ್ಚ್ 15 ಕೊನೇ ದಿನ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಬಿಜೆಪಿ ಅಭ್ಯರ್ಥಿಗಳು ಯಾರ್ಯಾರು?

* ಉತ್ತರ ಪ್ರದೇಶ -ಅಶೋಕ್ ಬಾಜಪೈ, ವಿಜಯ್ ಪಾಲ್ ಸಿಂಗ್ ತೊಮರ್, ಸಕಲ್ ದೀಪ ರಾಜ್ಭಾರ್, ಕಾಂತ ಕರ್ದಮ್, ಅನಿಲ್ ಜೈನ್, ಜಿವಿಎಲ್ ನರಸಿಂಹ ರಾವ್ ಮತ್ತು ಹರ್ನತ್ ಸಿಂಗ್ ಹಾದವ್ ಛತ್ತೀಸ್ ಗಢದಿಂದ ಸರೋಜ್ ಪಾಂಡೆ

*ಉತ್ತರಾಖಂಡ- ಅನಿಲ್ ಬಾಲುನಿ

* ರಾಜಸ್ಥಾನ- ಕಿರೋರಿ ಲಾಲ್ ಮೀನಾ ಮತ್ತು ಮದನ್ ಲಾಲ್ ಸೈನಿ,

* ಮಹಾರಾಷ್ಟ್ರ- ನಾರಾಯಣ್ ರಾಣೆ ಮತ್ತು ವಿ.ಮುರಳೀಧರನ್

* ಕರ್ನಾಟಕ- ರಾಜೀವ್ ಚಂದ್ರಶೇಖರ್

* ಜಾರ್ಖಂಡ್ -ಸಮೀರ್ ಉರ್ನವ್

* ಹರ್ಯಾಣ-ಲೆ.ಜ. ಡಿಪಿ ವತ್ಸ್(ನಿ.)

* ಮಧ್ಯಪ್ರದೇಶ- ಅಜಯ್ ಪ್ರತಾಪ್ ಸಿಂಗ್ ಮತ್ತು ಕೈಲಾಶ್ ಸೋನಿ

ಕಾಂಗ್ರೆಸ್ ಅಭ್ಯರ್ಥಿಗಳು ಯಾರು?

ಕಾಂಗ್ರೆಸ್ ಒಟ್ಟು 10 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.

* ಕರ್ನಾಟಕ- ಶಾ.ಎಲ್.ಹನುಮಂತಯ್ಯ ಡಾ.ಸಯ್ಯದ್ ನಾಸೀರ್ ಹುಸೇನ್, ಜಿ.ಸಿ.ಚಂದ್ರಶೇಖರ್

* ಗುಜರಾತ್ -ನರನ್ ಭಾಯ್ ರಥ್ವಾ ಮತ್ತು ಅಮೀ ಯಜ್ಞ್ನಿಕ್

* ಜಾರ್ಖಂಡ್ - ಧೀರಜ್ ಪ್ರಸಾದ್ ಸಹು

* ಮಧ್ಯಪ್ರದೇಶ- ರಾಜಮಾಣಿ ಪಟೇಲ್

* ಮಹಾರಾಷ್ಟ್ರ- ಕುಮಾರ್ ಕೇಟ್ಕರ್

* ತೆಲಂಗಾಣ- ಪೂರಿಕಾ ಬಲ್ರಾಮ್ ನಾಯಕ್

* ಪಶ್ಚಿಮ ಬಂಗಾಳ- ಅಭಿಷೇಕ್ ಮನಿ ಸಿಂಗ್ವಿ

ರಾಜ್ಯಸಭಾ ಚುನಾವಣೆ: ಕಾಂಗ್ರೆಸ್ ನ 3 ಅಭ್ಯರ್ಥಿಗಳ ಹೆಸರು ಅಂತಿಮ

ಇತರ ಅಭ್ಯರ್ಥಿಗಳು

ಇತರ ಅಭ್ಯರ್ಥಿಗಳು

* ಉತ್ತರ ಪ್ರದೇಶದಲ್ಲಿ ಭೀಮರಾವ್ ಅಂಬೇಡ್ಕರ್ - ಬಿಎಸ್ ಪಿ(ಬಹುಜನ ಸಮಾಜವಾದಿ ಪಕ್ಷ)

* ಬಾಲಿವುಡ್ ನಟಿ ಜಯಾ ಬಚ್ಚನ್ -ಎಸ್ ಪಿ(ಸಮಾಜವಾದಿ ಪಕ್ಷ)

* ಸಿಪಿಐ-ಎಂ ನೇತೃತ್ವದ ಎಲ್ ಡಿಎಫ್ ನಿಂದ ಜೆಡಿಯು ಮುಖಂಡ ಎಂ.ಪಿ.ವೀರೆಂದ್ರ ಕುಮಾರ್

* ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷ - ಸಿಎಂ ರಮೇಶ್

* ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್) - ಜೆ.ಸಂತೋಷ್ ಕುಮಾರ್, ಬಿ. ಲಿಂಗಯ್ಯ ಯಾದವ್ ಮತ್ತು ಬಿ.ಪ್ರಕಾಶ್

* ಬಿಹಾರ ಜೆಡಿಯು - ಮಹೇಂದ್ರ ಪ್ರದಾಸ್ ಸಿಂಗ್ ಮತ್ತು ಬಶಿಸ್ಥಾ ನರೇನ್ ಸಿಂಗ್

ರಾಜ್ಯಸಭಾ ಚುನಾವಣೆ

ರಾಜ್ಯಸಭಾ ಚುನಾವಣೆ

ವಿಧಾನಸಭಾ ಸದಸ್ಯರಂತೇ, ರಾಜ್ಯಸಭಾ ಸದಸ್ಯರನ್ನು ನೇರವಾಗಿ ಜನರು ಆಯ್ಕೆ ಮಾಡುವುದಿಲ್ಲ. ಮತದಾರರು ಈಗಾಗಲೇ ಆಯ್ಕೆ ಮಾಡಿದ ಜನಪ್ರತಿನಿಧಿಗಳು, ಅಂದರೆ ಶಾಸಕರು(ಎಂಎಲ್ಎ) ರಾಜ್ಯಸಭೆಗೆ ಸದಸ್ಯರನ್ನು ಆಯ್ಕೆ ಮಾಡುತ್ತಾರೆ. ಆಯಾ ರಾಜ್ಯದ ವಿಧಾನಸಭೆಯಲ್ಲಿ ಹೆಚ್ಚಿನ ಸ್ಥಾನ ಹೊಂದಿರುವ ಪಕ್ಷ ಸಹಜವಾಗಿ ತನ್ನ ಪಕ್ಷದಿಂದ ಹೆಚ್ಚು ಸದಸ್ಯರನ್ನು ರಾಜ್ಯಸಭೆಗೆ ಕಳಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: Rajya Sabha polls 2018
English summary
The stage is set for the Rajya Sabha elections. Today is the last date of nomination for the elections to 59 Rajya Sabha seats. The polling and counting will take place on March 23. The last date to withdraw is March 15.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ