ಕಾಂಗ್ರೆಸ್ ನಾಯಕನಿಂದ ಕೆಲಸದಾಳಿಗೆ 600 ಕೋಟಿ ದಾನ

ಸ್ಥಳೀಯ ಕಾಂಗ್ರೆಸ್ ನಾಯಕರೊಬ್ಬರು ಹೀಗೆ ಕೆಲಸದಾಳಿಗೆ 600 ಕೋಟಿ ರೂಪಾಯಿ ದಾನ ಮಾಡಿದ್ದಾರೆ. ಕಾಂಗ್ರೆಸ್ಸಿನ ಹಿರಿಯ ನಾಯಕ ಗಜರಾಜ್ ಸಿಂಗ್ ಜಡೇಜಾ ಅವರ ಮನೆಯಲ್ಲಿ ವಿನೂಭಾಯಿ ಕಾಂಜಿಭಾಯಿ ಜೈಪಾಲ್ ಕೆಲಸ ಮಾಡಿಕೊಂಡಿದ್ದ.
ಅವಿವಾಹಿತ ಗಜರಾಜ್ ಸಿಂಗ್ ಜಡೇಜಾ ಕಳೆದ ಸೆಪ್ಟೆಂಬರಿನಲ್ಲಿ ಮೃತಪಟ್ಟಿದ್ದರು. ಆದರೆ ಇತ್ತೀಚೆಗೆ ಅವರ ವಿಲ್ ತೆಗೆದುನೋಡಿದಾಗ ಆಶ್ಚರ್ಯ ಕಾದಿತ್ತು. ತಮ್ಮ 600 ಕೋಟಿ ರೂಪಾಯಿ ಆಸ್ತಿಗೆ ವಾರಸುದಾರರನ್ನಾಗಿ ವಿನೂಭಾಯಿ ಕಾಂಜಿಭಾಯಿ ಜೈಪಾಲ್ ಅವರನ್ನು ಹೆಸರಿಸಿದ್ದರು.
ಕೋಟ್ಯಂತರ ರೂಪಾಯಿ ಭೂಮಿ, ಮನೆ, ನಗದು ಮತ್ತಿತರ ಆಸ್ತಿಯನ್ನು ಹೊಂದಿದ್ದರು. ಗಜರಾಜ್ ಸಿಂಗ್ ಜಡೇಜಾ ನಿಧನಾನಂತವೇ ವಿನೂಭಾಯಿ ಕಾಂಜಿಭಾಯಿಗೆ ಇಷ್ಟೆಲ್ಲಾ ಆಸ್ತಿಯಿರುವುದು ತಿಳಿದುಬಂದಿದೆ.
ತಾನು ಕೋಟ್ಯಧಿಪತಿಯಾಗುತ್ತೇನೆ ಎಂದು ಕನಸುಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ಗಜರಾಜ್ ಸಿಂಗ್ ಜಡೇಜಾ ಅವರು ಭಾರಿ ಪ್ರಮಾಣದ ಆಸ್ತಿಯನ್ನು ಬಿಟ್ಟುಹೋಗಿದ್ದಾರೆ. ಅವರು ಇಷ್ಟೊಂದು ಆಸ್ತಿವಂತರು ಎಂಬುದು ನನಗೆ ಯಾವತ್ತಿಗೂ ಗೊತ್ತಾಗಿರಲಿಲ್ಲ ಎಂದು ವಿನೂಭಾಯಿ ಕಾಂಜಿಭಾಯಿ ಪ್ರತಿಕ್ರಿಯಿಸಿದ್ದಾನೆ.
ಗಜರಾಜ್ ಸಿಂಗ್ ಜಡೇಜಾ ಅವರಿಗೆ ವಾರಸುದಾರರು ಯಾರೂ ಇರಲಿಲ್ಲ. ಆದರೆ ತನ್ನ ಮನೆಯ ಕೆಲಸದಾಳು ಶ್ರೀಮಂತನಾಗಲಿ ಎಂದು ಬಯಸುವಷ್ಟು ಹೃದಯ ಶ್ರೀಮಂತಿಕೆಯೂ ಆತನಲ್ಲಿತ್ತು. ಈ ಹಿಂದೆ ವಿನೂಭಾಯಿ ಕಾಂಜಿಭಾಯಿ ಮದುವೆಯನ್ನೂ ಮಾಡಿಸಿದ್ದರು. ಆತನ ಮಕ್ಕಳಿಗೆ ಶಿಕ್ಷಣವನ್ನೂ ಕೊಡಿಸುತ್ತಿದ್ದರು. ಆ ಮಕ್ಕಳು ದೊಡ್ಡವರಾದ ಮೇಲೆ ಅವರನ್ನು ಉನ್ನತ ಶಿಕ್ಷಣಕ್ಕೆಂದು ಇಂಗ್ಲೆಂಡಿಗೂ ಕಳುಹಿಸದ್ದರು ಎಂದು ವಿನೂಭಾಯಿ ಕಾಂಜಿಭಾಯಿ ಕುಟುಂಬಸ್ಥರು ತಿಳಿಸಿದ್ದಾರೆ.












Click it and Unblock the Notifications