ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ರಾಜ್ಯಗಳ ಚುನಾವಣೆ: ಬುಕ್ಕಿಗಳು ಏನನ್ತಾರೆ?

By Srinath
|
Google Oneindia Kannada News

Rajasthan Madya Pradesh Delhi assembly polls prediction by bookies,
ನವದೆಹಲಿ,ನ. 28: ಎಲ್ಲರದೂ ಒಂದು ತೂಕವಾದರೆ ಈ ಬಾಜಿಗಾರರದ್ದೇ ಒಂದು ತೂಕ. ಕಾನೂನು ಚೌಕಟ್ಟಿನಲ್ಲಿ ಅದನ್ನು ತೂಗುವುದು ಸಲ್ಲದಾದರೂ ಅದಕ್ಕೆ ಭಾರಿ ಮನ್ನಣೆಯಂತೂ ಇದೆ. ಹಾಗಾಗಿ ಚುನಾವಣೆ ಪೂರ್ವ ಸಮೀಕ್ಷೆಗಳು, ಮತಗಟ್ಟೆ ಸಮೀಕ್ಷೆಗಳು ಇದನ್ನೆಲ್ಲಾ ಪಕ್ಕಕ್ಕಿಟ್ಟು ಹೇಳುವುದಾದರೆ...

ಡಿಸೆಂಬರ್ 8ಕ್ಕೆ ಫಲಿತಾಂಶ ಹೊರಬೀಳುವುದಕ್ಕೂ ಮುನ್ನ ದೆಹಲಿ, ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಇಂತಿಂಥ ಪಕ್ಷಗಳೇ ಅಧಿಕಾರಕ್ಕೆ ಬರುತ್ತವೆ ಎಂದು ಬಾಜಿಗಾರರು ಅದಾಗನೇ ಶಕುನ ನುಡಿದಿದ್ದಾರೆ. ಅದು ಎಷ್ಟು ನಿಖರ ಎಂಬುದನ್ನು ಓರೆಗೆ ಹಚ್ಚಲು ಇನ್ನೂ 10 ದಿನ ಕಾಯುವುದು ಅನಿವಾರ್ಯ.

ರಾಜಸ್ಥಾನದ ಶೇಖಾವತ್ ಭಾಗದಲ್ಲಿ ಪಿಕೆ ತಿವಾರಿ ಎಂಬ ಬುಕ್ಕಿ ಇದ್ದಾನೆ. ಈತ ತನ್ನನ್ನು ಚುನಾವಣೆ ವಿಶ್ಲೇಷಣೆಕಾರ ಎಂದು ಹೇಳಿಕೊಂಡು ಫಲಿತಾಂಶದ ಸುಳಿಹುಗಳನ್ನು ಹರಿಯಬಿಡುತ್ತಾನೆ. ಆದರೆ ವಾಸ್ತವವಾಗಿ ಈತ ಈ ಭಾಗದ ದೊಡ್ಡ ಬುಕ್ಕಿ. ಈತ ದೇಶದ ರಾಜಕೀಯ/ಚುನಾವಣೆ ನಾಡಿಮಿಡಿತ ಚೆನ್ನಾಗಿ ಬಲ್ಲವ.

ಏನಪ್ಪಾ ರಾಜಸ್ಥಾನದ ರಾಜ ಯಾರು? ಸರಕಾರವನ್ನು ಯಾರು ರಚಿಸುತ್ತಾರೆ? ದಿಲ್ಲಿಯಲ್ಲಿ ಅರವಿಂದ್ ಕೇಜ್ರಿವಾಲಾ ಕಥೆಯೇನು? ಹಾಗೆ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಸುಧಾರಿಸುತ್ತದಾ? ಎಂದು ಕೇಳಿದರೆ (ಕಥೆ ಆಮೇಲೆ, ಅವನು ತಿವಾರಿ ಏನು ಹೇಳಿದ ಮೊದಲು ಅದನ್ನು ಹೇಳು ಎನ್ನುವ ಓದುಗರಿಗಾಗಿ... ಫಲಿತಾಂಶ ಕೊನೆಯಲ್ಲಿ ಹೇಳಲಾಗಿದೆ!)

ಬುಕ್ಕಾ ಫಕೀರ: ಅದಕ್ಕೂ ಮುನ್ನ ಕ್ರಿಕೆಟ್ ಬುಕ್ಕಿಗಳಂತೆ ಈ ಪೊಲಿಟಿಕಲ್ ಬುಕ್ಕಿಗಳು ಎಲ್ಲೋ ದುಬೈನಲ್ಲೋ ಮತ್ತೆಲ್ಲೋ ಅಂತರ್ದಾನವಾಗಿರುವುದಿಲ್ಲ. ಅಥವಾ ಮೊಬೈಲು ಇಂಟರ್ನೆಟ್ ಅಂತ ಪಟ್ಟಾಂಗ ಹಾಕಿ ಕುಳಿತಿರುವುದಿಲ್ಲ. ಬದಲಿಗೆ ಜನರ ಮಧ್ಯೆಯೇ ಇದ್ದುಕೊಂಡು ಜನರ ನಾಡಿಮಿಡಿತ ಅರಿಯುತ್ತಾ ಬಾಜಿ ಕಟ್ಟುತ್ತಾ ಸಾಗುತ್ತಾರೆ. ಹಾಗಾಗಿ ಇವರನ್ನು ತುಸು ಹೆಚ್ಚು ನಂಬಬಹುದು. ಬುಕ್ಕಿ ಪಿಕೆ ತಿವಾರಿ ಸರಿಯಾಗಿ ಒಂದು ವರ್ಷದ ಹಿಂದೆ ನರೇಂದ್ರ ಮೋದಿ 115 ಸೀಟು ಗೆದ್ದು ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದಿದ್ದರು.

ಇವರ ನೆಟ್ ವರ್ಕ್ ಹೇಗೆ ವಬರ್ಕ್ ಆಗುತ್ತದೆ ಗೊತ್ತಾ? ಶೇಖಾವತಿ ಮತ್ತು ಫಲೋಡಿ ಕೇಂದ್ರೀಕೃತ ಗ್ರಾಮಗಳಲ್ಲಿ ಬುಕ್ಕಿ ಮತ್ತು ಸದಸ್ಯರು ಇರುತ್ತಾರೆ. ಆ ಬುಕ್ಕಿ ಪಕ್ಕದ ಪಟ್ಟಣದ ಇನ್ನು ಸ್ವಲ್ಪ ದೊಡ್ಡ ಬುಕ್ಕಿ ಜತೆ ಬಾಂಧವ್ಯ ಸಾಧಿಸಿರುತ್ತಾನೆ. ಮುಂದಿನ ಘಟ್ಟದಲ್ಲಿ ಪಟ್ಟಣದ ಬುಕ್ಕಿ ಜಿಲ್ಲಾ ಕೇಂದ್ರದಲ್ಲಿ ಹಿಡಿತ ಸಾಧಿಸಿರುತ್ತಾನೆ.

ಸೋ, ಪ್ರತಿ ಹಂತದಲ್ಲೂ ಜನರ ನಾಡಿಮಿಡಿತ ಸರಿಯಾದ ದಿಕ್ಕಿನಲ್ಲಿ ಪಾಸ್ ಆಗುತ್ತದೆ. ಕೊನೆಗೆ ಅದು ದೊಡ್ಡ ಬುಕ್ಕಿ ತಿವಾರಿ ಕೈಗೆ ಬರುತ್ತದೆ. ಆತ ಅಂತಿಮವಾಗಿ ಲೆಕ್ಕಾಚಾರಕ್ಕೆ ಕುಳಿತುಕೊಳ್ಳುತ್ತಾನೆ. ಈ ಮಧ್ಯೆ, ಪಂಟರುಗಳ ಕೈಯಲ್ಲಿರುವ ಸೆಲ್ ಫೋನುಗಳು ಸದಾ ಗಿಜಿಗುಡುತ್ತಿರುತ್ತವೆ. ಕುತೂಹಲದ ಸಂಗತಿಯೆಂದರೆ ಕೆಲವೊಂದು ಅಭ್ಯರ್ಥಿಗಳೂ ಬೆಟ್ ಕಟ್ಟತೊಡಗುತ್ತಾರೆ. ಇನ್ನು ಪಕ್ಷದ ನಾಯಕರೂ ಸಹ ತಿವಾರಿಯನ್ನು ಸಂಪರ್ಕಿಸುವುದುಂಟು.

ಸೋ, ಬುಕ್ಕಿ ತಿವಾರಿಯ ಅಂತಿಮ ಫಲಿತಾಂಶ ಹೀಗಿದೆ:
1. Rajasthan: BJPಗೆ 114-116 ಸೀಟು.
2. Madhya Pradesh: BJP ಗೆ 122-124 ಸೀಟು.
3. New Delhi: ಅರವಿಂದ್ ಪಾರ್ಟಿಗೆ 8-10 ಸೀಟು.
32-34 ಸೀಟಿನೊಂದಿಗೆ ಬಿಜೆಪಿ ಮಡಿಲಿಗೆ ಸರಕಾರದ ಚುಕ್ಕಾಣಿ

English summary
Rajasthan Madya Pradesh Delhi assembly polls prediction by bookies. Who is winning in Rajasthan? The BJP is likely to win 114-116 seats out of 200. Who is ahead in Madhya Pradesh? The BJP will manage to win 122 -124 seats. What will happen to Arvind Kejriwal? His party would be No 3 with 8-10 seats. The BJP will form the next government with 32-34 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X