ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣಮೃಗ ಬೇಟೆ ಪ್ರಕರಣ : ಸಲ್ಮಾನ್ ಗೆ ಮತ್ತೆ ಸಂಕಟ

By Mahesh
|
Google Oneindia Kannada News

ಜೈಪುರ, ಆಗಸ್ಟ್ 03: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ರಾಜಸ್ಥಾನ ಹೈಕೋರ್ಟ್ ನಿಂದ ಶುಭ ಸುದ್ದಿ ಸಿಕ್ಕ ಕೆಲ ದಿನಗಳಲ್ಲೇ ಮತ್ತೆ ಸಂಕಟ ಶುರುವಾಗಿದೆ. 1998ರ ಕೃಷ್ಣಮೃಗ ಬೇಟೆ ಪ್ರಕರಣದಿಂದ ಸಲ್ಮಾನ್ ಖಾನ್ ಖುಲಾಸೆಗೊಂಡಿದ್ದರು. ಆದರೆ, ಹೈಕೋರ್ಟ್ ತೀರ್ಪು ಪ್ರಶ್ನಿಸಿ ರಾಜಸ್ಥಾನ ಸರ್ಕಾರ ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಮುಂದಾಗಿದೆ.

ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ರಾಜಸ್ಥಾನದ ಕಾನೂನು ಸಚಿವ ರಾಜೇಂದ್ರ ರಾಥೋಡ್, ಪ್ರಕರಣದ ಬಗ್ಗೆ ಬಗ್ಗೆ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದರು. [ಕೃಷ್ಣಮೃಗ ಆತ್ಮಹತ್ಯೆ ಮಾಡ್ಕೊಂಡಿದ್ದು, ಅದ್ಕೆ ಸಲ್ಲೂ ಬಚಾವ್!]

Rajasthan govt to appeal against Salman Khan's acquittal in SC

ಹಮ್ ಸಾಥ್ ಸಾಥ್ ಹೇ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ರಾಜಸ್ಥಾನದ ಭವಾದ್ ನ ಲ್ಲಿ ಸೆಪ್ಟೆಂಬರ್ 26, 1998ರಲ್ಲಿ ನಡೆದ ಶೂಟಿಂಗ್ ಹಾಗೂ ಘೋಡಾ ಫಾರ್ಮ್ ನಲ್ಲಿ ಸೆಪ್ಟೆಂಬರ್ 28, 1998ರಲ್ಲಿ ನಡೆದ ಶೂಟಿಂಗ್ ನಲ್ಲಿ ಕೃಷ್ಣಮೃಗಗಳನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದರು.

ಈ ಪ್ರಕರಣದಲ್ಲಿ 1 ಹಾಗೂ 5 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಕೆಳ ಹಂತದ ನ್ಯಾಯಾಲಯದಲ್ಲಿ ಸಲ್ಮಾನ್ ಖಾನ್ ಅವರನ್ನು ಅಪರಾಧಿ ಎಂದು ಪರಿಗಣಿಸಿ ನೀಡಿದ್ದ ಆದೇಶದ ವಿರುದ್ಧ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟಿನಲ್ಲಿ ಸಲ್ಮಾನ್ ಪರ ಆದೇಶ ಜುಲೈ 25 ರಂದು ಬಂದಿತ್ತು.

English summary
The Rajasthan government on Tuesday said it will file an appeal in the Supreme Court against the High Court's decision acquitting actor Salman Khan in two cases of chinkara poaching.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X