ಜೈಪುರದಲ್ಲಿ ದುರಂತ: ಒಂದೇ ಮನೆಯ ಐವರು ಬೆಂಕಿಗೆ ಆಹುತಿ
ಜೈಪುರ, ಜನವರಿ 13: ರಾಜಸ್ಥಾನದ ಜೈಪುರದ ವಿದ್ಯಾನಗರದಲ್ಲಿ ಒಂದೇ ಕುಟುಂಬದ ಐವರು ಸಜೀವ ದಹನವಾದ ಭೀಕರ ಘಟನೆ ಇಂದು(ಜ.13) ಬೆಳಿಗ್ಗೆ ನಡೆದಿದೆ.
ಸಿಲೀಂಡರ್ ಸ್ಫೋಟಿಸಿದ ಪರಿಣಾಮ ಬೆಂಕಿ ಹೊತ್ತಿಕೊಂಡು ಈ ಘಟನೆ ನಡೆದಿರಬಹುದು ಎಂದು ಮೂಲಗಳು ತಿಳಿಸಿವೆ.
ಮನೆಯ ಸದಸ್ಯರೆಲ್ಲೂ ಮಲಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಇದೇ ಕುಟುಂಬದ ಇನ್ನೂ ಮೂರು ಮುಂದ ಆಗ್ರಾ ಪ್ರವಾಸಕ್ಕೆ ತೆರಳಿದ್ದರಿಂದ ಬದುಕುಳಿದಿದ್ದಾರೆ.

ಮೃತರ ಕುರಿತು ಹೆಚ್ಚಿನ ವಿವರ ತಿಳಿದುಬಂದಿಲ್ಲ.
ಕಳೆದ ವಾರವಷ್ಟೇ ಬೆಂಗಳೂರಿನ ಬಾರ್ ವೊಂದರಲ್ಲಿ ಸಂಭವಿಸಿದ್ದ ಅಗ್ನಿ ಆಕಸ್ಮಿಕದಲ್ಲಿ ಐದು ಜನ ಸಜೀವ ದಹನವಾಗಿದ್ದರು.
ಇಂದು ಬೆಳಿಗ್ಗೆಯಷ್ಟೇ ಗುಜರಾತಿನ ರಾಜ್ ಕೋಟ್ ನಲ್ಲಿ ಶಿಬಿರವೊಂದರಲ್ಲಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಮೂವರು ಮಹಿಳೆಯರು ಮೃತರಾಗಿದ್ದರು.












Click it and Unblock the Notifications