Rajasthan Election: ಮದುವೆ ಕಾರಣ ರಾಜಸ್ಥಾನ ಚುನಾವಣೆ ಮುಂದೂಡಿಕೆ?
ರಾಜಸ್ಥಾನ ವಿಧಾನಸಭೆ ಚುನಾವಣಾ ದಿನಾಂಕ ದಿಢೀರ್ ಬದಲಾವಣೆಯಾಗಿದೆ. ಈ ಹಿಂದೆ ವಿಧಾನಸಭೆಗೆ ನವೆಂಬರ್ 23ರಂದು ಮತದಾನ ನಡೆಸಲು ನಿರ್ಧರಿಸಲಾಗಿತ್ತು. ಆದ್ರೆ ಇದೀಗ ಬ್ರೇಕಿಂಗ್ ನ್ಯೂಸ್ ಕೊಟ್ಟಿರುವ ಚುನಾವಣಾ ಆಯೋಗವು, ಚುನಾವಣಾ ದಿನಾಂಕ ದಿಢೀರ್ ಮುಂದೂಡಿಕೆ ಮಾಡಿದೆ. ಹಾಗಾದರೆ ಬಹುನಿರೀಕ್ಷಿತ ರಾಜಸ್ಥಾನದ ವಿಧಾನಸಭೆಗೆ ಎಲೆಕ್ಷನ್ ಯಾವಾಗ ನಡೆಯುತ್ತೆ? ದಿಢೀರ್ ಚುನಾವಣೆ ಮುಂದೂಡಲು ಕಾರಣವೇನು?
ECI changes the date of Assembly poll in Rajasthan to 25th November from 23rd November; Counting of votes on 3rd December pic.twitter.com/lG1eYPJ4Hg
— ANI (@ANI) October 11, 2023
ರಾಜಸ್ಥಾನ ವಿಧಾನಸಭೆ ಗೆದ್ದು ಬೀಗಲು ಒಂದು ಕಡೆ ಬಿಜೆಪಿ, ಮತ್ತೊಂದು ಕಡೆ ಕಾಂಗ್ರೆಸ್ ನಾಯಕರು ಸಮರ ಆರಂಭಿಸಿದ್ದಾರೆ. ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಬಿಜೆಪಿಗೆ ಇಲ್ಲಿ ಅಧಿಕಾರ ಸಿಗುವ ಸಾಧ್ಯತೆ ಇದೆ. ಹೀಗೆ ರಾಜಸ್ಥಾನ ಗೆಲ್ಲಲು ಕಮಲ ಪಾಳಯ ಕೂಡ ಸಿಕ್ಕಾಪಟ್ಟೆ ಎಫರ್ಟ್ ಹಾಕುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ದಿಢೀರ್ ಎಲೆಕ್ಷನ್ ಡೇಟ್, ನವೆಂಬರ್ 23ರ ಬದಲಾಗಿ ನವೆಂಬರ್ 25ಕ್ಕೆ ಮುಂದೂಡಿಕೆ ಮಾಡಲಾಗಿದೆ. ಹಾಗಾದ್ರೆ ಈಗ ದಿಢೀರ್ ಎಲೆಕ್ಷನ್ ಮುಂದೂಡಿದ್ದು ಏಕೆ?

ಮದುವೆ ಕಾರಣಕ್ಕೆ ಚುನಾವಣೆ ಮುಂದೂಡಿಕೆ?
ರಾಜಸ್ಥಾನದಲ್ಲಿ ಈಗ ಮದುವೆ ಸೀಸನ್ ಇದ್ದು ಸಾಮೂಹಿಕ ಮದುವೆ ನಡೆಯಲಿರುವ ಬಗ್ಗೆ ಚುನಾವಣೆ ಆಯೋಗಕ್ಕೆ ಮನವಿ ಹೋಗಿತ್ತು. ಸಾಕಷ್ಟು ಮದುವೆ ಸಮಾರಂಭ ನಡೆಯುವ ಹಿನ್ನೆಲೆ, ಮತದಾನ ನಡೆಯುವ ನವೆಂಬರ್ 23ರಂದು ಜನರು ಮತದಾನ ಮಾಡದೆ ಚಕ್ಕರ್ ಹಾಕುವ ಆತಂಕ ಎದುರಾಗಿತ್ತು. ಈ ಬಗ್ಗೆ ರಾಜಕೀಯ ಪಕ್ಷಗಳ ಮನವಿ ಹಿನ್ನೆಲೆ ಭಾರತದ ಚುನಾವಣಾ ಆಯೋಗವು ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಆದ್ರೆ ಇನ್ನೂ ಕಾರಣ ಸ್ಪಷ್ಟವಾಗಿಲ್ಲ. ದಿಢೀರ್ ಹೀಗೆ ಚುನಾವಣೆ ಮುಂದೂಡಿಕೆ ಬಗ್ಗೆ ಚುನಾವಣಾ ಆಯೋಗವು ಮಾಹಿತಿ ನೀಡಿರುವುದು ಸಂಚಲನ ಸೃಷ್ಟಿಸಿದೆ.
ಆಯೋಗ ಈ ಮೊದಲು ಹೇಳಿದ್ದೇನು?
ಈ ಮೊದಲು ಚುನಾವಣಾ ಆಯೋಗ ಘೋಷಣೆ ಮಾಡಿದ್ದಂತೆ, ನವೆಂಬರ್ 23ಕ್ಕೆ ಎಲೆಕ್ಷನ್ ನಡೆಸಲು ಅಕ್ಟೋಬರ್ 30ರಂದು ಚುನಾವಣೆ ಗೆಜೆಟ್ ಅಧಿಸೂಚನೆ ಹೊರಡಿಸಲು ನಿರ್ಧಾರ ಕೈಗೊಳ್ಳಲಾಗಿತ್ತು. ನವೆಂಬರ್ 6ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ನವೆಂಬರ್ 7 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ ಎಂದು ಚುನಾವಣಾ ಆಯೋಗವು ಮಾಹಿತಿ ನೀಡಿತ್ತು. ಹಾಗೇ ಅಭ್ಯರ್ಥಿಗಳು ನವೆಂಬರ್ 9ರ ಒಳಗೆ ನಾಮಪತ್ರ ಹಿಂಪಡೆಯಲು ಡೆಡ್‌ಲೈನ್ ಫಿಕ್ಸ್ ಮಾಡಲಾಗಿತ್ತು. ಆದರೆ ಇದೀಗ ಚುನಾವಣೆಯ ದಿನಾಂಕ ಮುಂದೂಡಿಕೆ ಆಗಿರುವ ಹಿನ್ನೆಲೆ, ಎಲ್ಲವೂ ಬದಲಾಗುತ್ತಾ? ಎಂಬ ಕುತೂಹಲ ಮೂಡಿದೆ.
ಒಟ್ನಲ್ಲಿ 200 ಸದಸ್ಯರನ್ನ ಹೊಂದಿರುವ ರಾಜಸ್ಥಾನ ವಿಧಾನಸಭೆ ಕುತೂಹಲ ಕೆರಳಿಸಿದ್ದು, ಇದೇ ಸಮಯಕ್ಕೆ ಚುನಾವಣೆ ದಿನಾಂಕ ಕೂಡ ಮುಂದೂಡಿಕೆಯಾಗಿದೆ. ಒಂದು ಕಡೆ ಇಲ್ಲಿ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಫೈಟ್ ಮಾಡುತ್ತಿದ್ದರೆ, ಬಿಜೆಪಿ ರಾಜಸ್ಥಾನದಲ್ಲಿ ಮತ್ತೆ ತನ್ನ ಬಾವುಟ ಹಾರಿಸಲು ಸಜ್ಜಾಗಿದೆ. ಹೀಗಾಗಿಯೇ ರಾಜಸ್ಥಾನ ಚುನಾವಣೆ ದೇಶದ ಗಮನ ಸೆಳೆದಿದೆ.












Click it and Unblock the Notifications