ರಾಜಸ್ಥಾನ: ನದಿಗೆ ಉರುಳಿ ಬಿದ್ದ ಬಸ್, 30 ಸಾವು, ಹಲವರಿಗೆ ಗಾಯ

Posted By:
Subscribe to Oneindia Kannada

ದುಬಿ (ರಾಜಸ್ಥಾನ), ಡಿಸೆಂಬರ್ 23: ಸೇತುವೆ ಮೇಲಿಂದ ಬಸ್ ವೊಂದು ನದಿಗೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 30 ಜನ ಪ್ರಯಾಣಿಕರು ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿರುವ ಭೀಕರ ದುರಂತ ರಾಜಸ್ಥಾನದ ಸವೈ ಮಧೋಪುರ್ ಜಿಲ್ಲೆಯ ದುಬಿಯಲ್ಲಿ ಶನಿವಾರ ನಡೆದಿದೆ.

ಶನಿವಾರ ಬೆಳಗ್ಗೆ ಸವೈ ಮಧೋಪುರ್ ಜಿಲ್ಲೆಯ ದುಬಿಯ ಬಳಿ ಇರುವ ಬನಸ್ ನದಿ ಸೇತುವೆ ಮೇಲೆ ಚಲಿಸುತ್ತಿದ್ದ ಬಸ್ ಏಕಾಏಕರಿ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿ ಬಿದ್ದಿದೆ.

Rajasthan: 30 dead, 15 injured after bus falls into Banas river in Sawai Madhopur's Dubi

ಸುದ್ದಿ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿ ಈಗಾಗಲೇ ಮೂವತ್ತು ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ದುರಂತದಲ್ಲಿ ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least 30 people dead and over 15 are reported to have suffered serious injuries after a passenger bus fell into Banas river today in Sawai Madhopur's Dubi on December 23 morning.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ