Rain in August 2023: ಆಗಸ್ಟ್‌ ತಿಂಗಳಲ್ಲಿ ಕಡಿಮೆ ಮಳೆ, ಹಗಲಿನ ತಾಪಮಾನದಲ್ಲಿ ಹೆಚ್ಚಳ- ಸಂಪೂರ್ಣ ಮಾಹಿತಿ, ವಿವರ

ಬೆಂಗಳೂರು, ಆಗಸ್ಟ್ 03: ಈ ಬಾರಿಯ ಮಳೆಗಾಲ ಹಲವು ಅಚ್ಚರಿಗಳಿಗೆ ಕಾರಣವಾಗುತ್ತಿದೆ. ಜೂನ್‌ನಲ್ಲಿ ಮಳೆ ಕೊರತೆ ಕಾಡಿದ ಬಳಿಕ ಜುಲೈನಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆ ದಾಖಲಾಯಿತು. ಆದರೆ, ಆಗಸ್ಟ್‌ನಲ್ಲಿ ಮತ್ತೆ ಮಳೆ ಕೊರತೆಯಾಗಲಿದ್ದು, ಹಗಲಿನ ತಾಪಮಾನದಲ್ಲಿ ಹೆಚ್ಚಳ ಕಂಡುಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಭಾರತದ ಹವಾಮಾನ ಇಲಾಖೆಯ ಇತ್ತೀಚಿನ ಮುನ್ಸೂಚನೆ ಪ್ರಕಾರ, ಆಗಸ್ಟ್ 2023 ರಲ್ಲಿ ಒಟ್ಟಾರೆಯಾಗಿ ದೇಶದಾದ್ಯಂತ ಮಾಸಿಕ ಮಳೆಯು ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ. ದೀರ್ಘಾವಧಿಯ ಸರಾಸರಿಯ ಶೇ 94ರಷ್ಟು ಕಡಿಮೆ ಮಳೆಯಾಗಲಿದೆ. ಪ್ರತಿ ಬಾರಿಗಿಂತ ಈ ಬಾರಿ ಒಣ ಹವೆ ಹೆಚ್ಚಿರುತ್ತದೆ.

rain-in-august-2023

ಪೂರ್ವ-ಮಧ್ಯ ಭಾರತದ ಹೆಚ್ಚಿನ ಪ್ರದೇಶಗಳು ಮತ್ತು ಹಿಮಾಲಯದ ಉದ್ದಕ್ಕೂ ಇರುವ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದೆ. ಪೂರ್ವ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಇದೆ.

ಮತ್ತೊಂದೆಡೆ, ದಕ್ಷಿಣ ಭಾರತದ ಹೆಚ್ಚಿನ ಭಾಗಗಳು, ವಾಯುವ್ಯ ಹಾಗೂ ಮಧ್ಯ ಭಾರತದ ಅನೇಕ ಪ್ರದೇಶಗಳಲ್ಲಿ ಸರಾಸರಿಗಿಂತ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಹಗಲಿನ ತಾಪಮಾನದಲ್ಲಿ ಹೆಚ್ಚಳ

ಹಗಲಿನ ತಾಪಮಾನವು ಸರಾಸರಿಗಿಂತ ಹೆಚ್ಚು ಇರಲಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಭಾರತದಲ್ಲಿ ಭಾರೀ ಏರಿಕೆ ಕಂಡುಬರಲಿದೆ. ಪೂರ್ವ ಮತ್ತು ಈಶಾನ್ಯ ಭಾರತದ ಹೆಚ್ಚಿನ ಭಾಗಗಳು, ವಾಯುವ್ಯ ಮತ್ತು ಮಧ್ಯ ಭಾರತದ ಅನೇಕ ಪ್ರದೇಶಗಳಲ್ಲಿ ಬಿಸಿ ಹವಾಮಾನ ಇರಲಿದೆ. ಆದರೆ, ಪೂರ್ವ ಹಾಗೂ ಮಧ್ಯ ಭಾರತದ ಕೆಲವು ಪ್ರದೇಶಗಳು, ಹಿಮಾಲಯದ ಬಯಲು ಪ್ರದೇಶಗಳಲ್ಲಿ ಹವಾಮಾನ ತಂಪಾಗಿ ಇರುತ್ತದೆ ಎಂದು ಮಾಹಿತಿ ನೀಡಿದೆ.

rain-in-august-2023

ವಾಯುವ್ಯ ಭಾರತವನ್ನು ಹೊರತು ಪಡಿಸಿ, ಭಾರತದ ಬಹುತೇಕ ಪ್ರದೇಶಗಳಲ್ಲಿ ರಾತ್ರಿಗಳು ಬೆಚ್ಚಗಿರುತ್ತವೆ ಎಂದು ಹವಾಮಾನ ಇಲಾಖೆ ಹೇಳಿದೆ.

ಒಟ್ಟಾರೆಯಾಗಿ ಆಗಸ್ಟ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಮಳೆಗಾಲವು ಸರಾಸರಿಗಿಂತ ಕಡಿಮೆ ಇರುತ್ತದೆ ಎಂದು ಐಎಂಡಿ ತಿಳಿಸಿದೆ.

ದೇಶದಲ್ಲಿ ಜೂನ್‌ ತಿಂಗಳಲ್ಲಿ ಶೇ 9 ರಷ್ಟು ಮಳೆ ಪ್ರಮಾಣ ಕಡಿಮೆ ಇತ್ತು. ಜುಲೈನಲ್ಲಿ ಶೇಕಡಾ 13 ರಷ್ಟು ಅಧಿಕ ಮಳೆಯಾಗಿದೆ.

ಮುಂಗಾರು ಋತುವಿನಲ್ಲಿ ಇದುವರೆಗಿನ 467 ಮಿಮೀ ಮಳೆ ದಾಖಲಾಗಿದೆ. ಇದು ಶೇಕಡಾ ಐದಕ್ಕಿಂತ ಹೆಚ್ಚು ಎಂದು ಹವಾಮಾನ ಇಲಾಖೆ ಹೇಳಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದ್ದು, ಕಾವೇರಿ ಹಾಗೂ ಕೃಷ್ಣಾ ಜಲಾನಯನ ಪ್ರದೇಶದ ಡ್ಯಾಮ್‌ಗಳಲ್ಲಿ ಒಳಹರಿವು ಜಾಸ್ತಿಯಾಗಿದೆ. ಜೂನ್‌ನಲ್ಲಿ ಬರಗಾಲದ ಛಾಯೆ ಆವರಿಸಿತ್ತು. ಜುಲೈನಲ್ಲಿ ಇದು ಬರಗಾಲದ ಛಾಯೆ ಬಹುತೇಕ ಮಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+