Weather forecast: ಕರ್ನಾಟಕ, ಕೇರಳ, ತೆಲಂಗಾಣಗಳಲ್ಲಿ ಭಾರೀ ಮಳೆ ಮುನ್ಸೂಚನೆ- ವರದಿ, ವಿವರ

ಬೆಂಗಳೂರು, ಸೆಪ್ಟೆಂಬರ್‌ 29: ಕೇರಳ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇಡೀ ಕೇರಳ ರಾಜ್ಯದಾದ್ಯಂತ ಮಳೆಯಾದರೆ, ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಬೀಳಲಿದೆ ಎಂದು ತಿಳಿದುಬಂದಿದೆ. ಇದೇ ರೀತಿ ತೆಲಂಗಾಣ ಹಾಗೂ ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ನಾಳೆ ಮತ್ತು ನಾಡಿದ್ದು ಅಂದರೆ ಸೆಪ್ಟೆಂಬರ್ 28 ಮತ್ತು 29 ರಂದು ಕರಾವಳಿ ಕರ್ನಾಟಕ ಮತ್ತು ಕೇರಳ ಎರಡರಲ್ಲೂ ಮಳೆಯು ಹೆಚ್ಚು ತೀವ್ರವಾಗಿರುತ್ತದೆ. ಎರಡೂ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್ 30 ರಿಂದ ಮಳೆ ಕಡಿಮೆಯಾಗಲು ಪ್ರಾರಂಭವಾಗುತ್ತದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ಹಂಚಿಕೊಂಡಿದೆ.

Rain forecast: HEAVY RAINS likely in KARNATAKA, KERALA, Telangana and Maharashtra

ಭಾರತೀಯ ಹವಾಮಾನ ಇಲಾಖೆಯು ಕೇರಳದ ಹತ್ತು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ನೀಡಿದೆ. ಶುಕ್ರವಾರ ತಿರುವನಂತಪುರಂ, ಕೊಲ್ಲಂ, ಆಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಎಚ್ಚರಿಕೆ ನೀಡಿದೆ. ಬಂಗಾಳಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ಮೇಲೆ ಚಂಡಮಾರುತದ ಪ್ರಭಾವದಿಂದ ಕೇರಳದಲ್ಲಿ ಮಾನ್ಸೂನ್ ಸಕ್ರಿಯವಾಗಿದೆ.

ಶನಿವಾರ ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡುಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ಶನಿವಾರ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

Rain forecast: HEAVY RAINS likely in KARNATAKA, KERALA, Telangana and Maharashtra

ಹೈದರಾಬಾದ್‌ನಲ್ಲಿ ಆರೇಂಜ್‌ ಅಲರ್ಟ್‌

ಹಿಮಾಯತ್ ನಗರ, ಬಶೀರ್‌ಬಾಗ್, ನಾರಾಯಣಗುಡಾ, ಮುಶೀರಾಬಾದ್, ಉಪ್ಪಲ್, ಓಯು, ತಾರ್ನಾಕ, ಸಿಕಂದರಾಬಾದ್, ಬೇಗಂಪೇಟೆಯಲ್ಲಿ ಗುರುವಾರ ಸಂಜೆ ಗುಡುಗು, ಸಿಡಿಲು ಸಹಿತ ಮಳೆ ಸುರಿದಿದೆ. ನಗರದ ಕೆಲ ಪ್ರದೇಶಗಳು ಜಲಾವೃತಗೊಂಡ ಪರಿಣಾಮ ಸಂಚಾರ ದಟ್ಟಣೆ ಕಂಡುಬಂದಿದೆ. ಸಿದ್ದಿಪೇಟೆ, ಜನಾಂವ್, ಯಾದಾದ್ರಿ ಭೋಂಗಿರ್, ರಂಗಾರೆಡ್ಡಿ, ಕಾಮರೆಡ್ಡಿ, ನಿರ್ಮಲ್ ಜಿಲ್ಲೆ ಸೇರಿದಂತೆ ರಾಜ್ಯದ ಇತರ ಭಾಗಗಳಲ್ಲೂ ಮಳೆಯಾಗಿದೆ.

ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯ ಮುನ್ಸೂಚನೆ ನೀಡಿದ್ದು, ಹೈದರಾಬಾದ್, ಖಮ್ಮಂ, ನಿಜಾಮಾಬಾದ್, ರಂಗಾರೆಡ್ಡಿ, ಮುಲುಗು, ಮಲ್ಕಾಜ್‌ಗಿರಿ, ನಿರ್ಮಲ್, ವಿಕಾರಾಬಾದ್, ಸಿದ್ದಿಪೇಟೆ ಮುಂತಾದ ಸ್ಥಳಗಳಲ್ಲಿ ಅರೆಂಜ್‌ ಅಲರ್ಟ್‌ ಘೋಷಿಸಿದೆ.

ಕರ್ನಾಟಕದಲ್ಲಿ ನಿನ್ನೆ ಸುರಿದ ಮಳೆ ಪ್ರಮಾಣ

ಉತ್ತರ ಕನ್ನಡ: 108.5 ಮಿ.ಮೀ
ದಕ್ಷಿಣ ಕನ್ನಡ: 101 ಮಿ.ಮೀ
ಉಡುಪಿ: 72 ಮಿ.ಮೀ
ಬೀದರ್: 67.5 ಮಿ.ಮೀ
ಚಿಕ್ಕಮಗಳೂರು: 51.5 ಮಿ.ಮೀ
ಶಿವಮೊಗ್ಗ: 49 ಮಿ.ಮೀ
ಬೆಳಗಾವಿ: 43.5 ಮಿ.ಮೀ
ತುಮಕೂರು: 43.5 ಮಿ.ಮೀ
ಚಿಕ್ಕಬಳ್ಳಾಪುರ: 43 ಮಿ.ಮೀ
ಮಂಡ್ಯ: 42.5 ಮಿ.ಮೀ
ಯಾದಗಿರಿ: 41.5 ಮಿ.ಮೀ
ಕೊಡಗು: 35 ಮಿ.ಮೀ
ಹಾಸನ: 35 ಮಿ.ಮೀ
ವಿಜಯಪುರ: 31 ಮಿ.ಮೀ

Rain forecast: HEAVY RAINS likely in KARNATAKA, KERALA, Telangana and Maharashtra

ಹೆಚ್ಚು ಮಳೆ ಬಿದ್ದ ಊರುಗಳು

ಅಂಕೋಲಾ, ಉತ್ತರ ಕನ್ನಡ : 108. 5 ಮಿಮೀ
ಪೆರುವಾಯಿ, ದಕ್ಷಿಣ ಕನ್ನಡ: 101 ಮಿ.ಮೀ
ವಂಡಿಗೆ, ಉತ್ತರ ಕನ್ನಡ: 84.5ಮಿ.ಮೀ
ಮಂಡೆಕೋಲು, ದಕ್ಷಿಣ ಕನ್ನಡ: 80.5ಮಿ.ಮೀ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+