ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್‌ಪೋರ್ಟ್ ಮಾದರಿಯಲ್ಲಿ ರೈಲು ನಿಲ್ದಾಣಗಳಲ್ಲೂ ಅಭಿವೃದ್ಧಿ ಶುಲ್ಕ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 29: ವಿಮಾನ ನಿಲ್ದಾಣಗಳಲ್ಲಿ ಸಂಗ್ರಹಿಸಲಾಗುವ ಬಳಕೆದಾರರ ಅಭಿವೃದ್ಧಿ ಶುಲ್ಕ ಮಾದರಿಯಲ್ಲೇ ರೈಲ್ವೆ ಇಲಾಖೆ ಬಳಕೆ ಶುಲ್ಕ ಪಡೆಯಲು ಮುಂದಾಗಿದೆ.

ಈ ಹೊಸ ರೂಪ ಪಡೆದ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಂದ ಸಂಗ್ರಹಿಸಲು ಉದ್ದೇಶಿಸಿರುವ ಬಳಕೆ ಶುಲ್ಕವು ಈ ಹಿಂದೆ ಹೇಳಿದ್ದ ಸಾಮಾನ್ಯ ಪ್ರಮಾಣಕ್ಕೆ ಬದಲಾಗಿ ಭಾರಿ ಪ್ರಮಾಣದಲ್ಲಿ ಏರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಚಾನಕ್ಕಾಗಿ ರೈಲಿನಡಿ ಬಿದ್ದ 2 ವರ್ಷದ ಮಗು ಪ್ರಾಣಾಪಾಯದಿಂದ ಪಾರು ಅಚಾನಕ್ಕಾಗಿ ರೈಲಿನಡಿ ಬಿದ್ದ 2 ವರ್ಷದ ಮಗು ಪ್ರಾಣಾಪಾಯದಿಂದ ಪಾರು

ಅಭಿವೃದ್ಧಿ ಶುಲ್ಕ ಸಂಬಂಧ ರೈಲ್ವೆ ಇಲಾಖೆ ಸಿದ್ಧಪಡಿಸಿರುವ ಪ್ರಸ್ತಾವವನ್ನು ಅನುಮತಿಗಾಗಿ ಕೇಂದ್ರ ಸಚಿವ ಸಂಪುಟಕ್ಕೆ ರವಾನಿಸಿದೆ.ಅದರನ್ವಯ ಬಳಕೆ ಶುಲ್ಕ ಕನಿಷ್ಠ 10 ರಿಂದ ಗರಿಷ್ಠ 35 ರೂ. ವರೆಗೆ ಇರುತ್ತದೆ. ಪ್ರಯಾಣ ದರ್ಜೆಗೆ ಅನುಗುಣವಾಗಿ ಸಂಗ್ರಹಿಸಲಾಗುತ್ತದೆ.

Railways May Charge Up To Rs 35 User Fees In Train Fares For Using Redeveloped Stations

ದೇಶದಲ್ಲಿ 7 ಸಾವಿರ ರೈಲು ನಿಲ್ದಾಣಗಳಿವೆ. ಹೆಚ್ಚು ಪ್ರಯಾಣಿಕರ ದಟ್ಟಣೆ ಹೊಂದಿರುವ ಹಾಗೂ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಆಧುನೀಕರಣಗೊಂಡಿರುವ 700 ರಿಂದ 1 ಸಾವಿರ ನಿಲ್ದಾಣಗಳು ಇವೆ. ಅಲ್ಲಿ ಮಾತ್ರ ಬಳಕೆ ಶುಲ್ಕ ರೂಪದಲ್ಲಿ ಸಂಗ್ರಹಿಸುವ ಚಿಂತನೆ ಇದೆ.

ಆ ಹಣವನ್ನು ರೈಲು ನಿಲ್ದಾಣಗಳ ಸೌಲಭ್ಯಗಳ ಸುಧಾರಣೆಗೆ ಬಳಸಲಾಗುತ್ತದೆ. ಇದರಿಂದ ಸಾಮಾನ್ಯ ಜನರ ಮೇಲೆ ಹೊರೆಯಾಗಲ್ಲ, ಅಭಿವೃದ್ಧಿ ಕೆಲಸ ಪೂರ್ಣಗೊಂಡ ನಿಲ್ದಾಣಗಳಲ್ಲಿ ಮಾತ್ರ ಸಂಗ್ರಹಿಸಲಾಗುತ್ತದೆ.

English summary
Railway passengers may have to shell out additional Rs 10-Rs 35 for their ticket fares as user charges for availing redeveloped stations with state of the art amenities and to help the national transporter in raising funds for redeveloping more stations, sources indicated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X