ದೀಪಾವಳಿಗೆ ರೈಲ್ವೇ ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ದರ ಹೆಚ್ಚಳ: ಹೊಸ ಬೆಲೆ ಇಲ್ಲಿ ಪರಿಶೀಲಿಸಿ
ದೀಪಾವಳಿಯ ಸೀಸನ್ ಆರಂಭಗೊಂಡಿದ್ದರಿಂದ ಜನಸಂದಣಿಯನ್ನು ತಪ್ಪಿಸಲು ಮುಂಬೈ ಕೇಂದ್ರ ವಿಭಾಗದ ಆಯ್ದ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಬೆಲೆಯನ್ನು ಹೆಚ್ಚಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಕೆಲವು ನಾಮನಿರ್ದೇಶಿತ ನಿಲ್ದಾಣಗಳಲ್ಲಿ ಅಕ್ಟೋಬರ್ 31 ರವರೆಗೆ ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಬೆಲೆಯನ್ನು 10 ರಿಂದ 50 ರೂ.ಗೆ ಹೆಚ್ಚಿಸಲಾಗಿದೆ ಎಂದು ಪಶ್ಚಿಮ ರೈಲ್ವೇ ಪ್ರಕಟಣೆಯಲ್ಲಿ ತಿಳಿಸಿದೆ. ಹಬ್ಬದ ಸಮಯದಲ್ಲಿ ರೈಲ್ವೆ ಆವರಣದಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅದು ತಿಳಿಸಿದೆ.
ಹಬ್ಬದ ಋತುವಿನಲ್ಲಿ 211 ವಿಶೇಷ ರೈಲುಗಳ 2561 ಟ್ರಿಪ್‌ಗಳನ್ನು ಭಾರತೀಯ ರೈಲ್ವೇ ನಡೆಸುವುದಾಗಿ ಘೋಷಿಸಿತು. ಈ ರೈಲುಗಳು ಅಕ್ಟೋಬರ್ 30 ರ ಛತ್ ಪೂಜೆಯವರೆಗೆ ಕಾರ್ಯನಿರ್ವಹಿಸಲಿವೆ ಎಂದು ಅದು ಹೇಳಿದೆ. ದರ್ಭಾಂಗ, ಅಜಂಗಢ, ಸಹರ್ಸಾ, ಭಾಗಲ್ಪುರ್, ಮುಜಾಫರ್‌ಪುರ, ಫಿರೋಜ್‌ಪುರ, ಪಾಟ್ನಾ, ಕತಿಹಾರ್ ಮತ್ತು ಅಮೃತಸರ ಸೇರಿದಂತೆ ರಾಷ್ಟ್ರದಾದ್ಯಂತ ಹಲವಾರು ಪ್ರಮುಖ ರೈಲು ಮಾರ್ಗಗಳನ್ನು ಸಂಪರ್ಕಿಸಲು ವಿಶೇಷ ರೈಲುಗಳು ಓಡಾಡಲಿವೆ. ರೈಲ್ವೇ ಸಚಿವಾಲಯದ ಅಧಿಕೃತ ಹೇಳಿಕೆಯ ಪ್ರಕಾರ, ಹಬ್ಬದ ಋತುವಿನಲ್ಲಿ ಪ್ರಯಾಣಿಕರಿಗೆ ಸುಗಮ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು 32 ಹೆಚ್ಚುವರಿ ವಿಶೇಷ ಸೇವೆಗಳನ್ನು ಸಹ ಪರಿಚಯಿಸಲಾಗಿದೆ.

ಪ್ಲಾಟ್‌ಫಾರ್ಮ್ ಟಿಕೆಟ್‌ಗೆ 10 ರೂ. ಬದಲಿಗೆ 50 ರೂ.
ಹಬ್ಬದ ಸೀಸನ್‌ನಲ್ಲಿ ರೈಲು ನಿಲ್ದಾಣಗಳ ದಟ್ಟಣೆಯನ್ನು ಕಡಿಮೆ ಮಾಡಲು ರೈಲ್ವೆಯು ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಬೆಲೆ ಹೆಚ್ಚಳದ ಮಾರ್ಗ ಕಂಡುಕೊಂಡಿದೆ. ಇದೀಗ ಮುಂಬೈ ಕೇಂದ್ರ ವಿಭಾಗದ ಕೆಲ ಆಯ್ದ ನಿಲ್ದಾಣಗಳಲ್ಲಿ ಪ್ಲಾಟ್ ಫಾರಂ ಟಿಕೆಟ್ ದರವನ್ನು ದುಪ್ಪಟ್ಟು ಮಾಡಿದೆ. ಪಶ್ಚಿಮ ರೈಲ್ವೇ ಹೊರಡಿಸಿರುವ ಆದೇಶದ ಪ್ರಕಾರ, ಅಕ್ಟೋಬರ್ 21ರಿಂದ, ಅಂದರೆ ಶನಿವಾರದಿಂದಲೇ, ಕೆಲವು ಪ್ರಮುಖ ನಿಲ್ದಾಣಗಳಲ್ಲಿ ಜನರು ಪ್ಲಾಟ್‌ಫಾರ್ಮ್ ಟಿಕೆಟ್‌ಗೆ 10 ರೂ. ಬದಲಿಗೆ 50 ರೂ. ಪಾವತಿಸಬೇಕಿದೆ. ಹಬ್ಬ ಹರಿದಿನಗಳಲ್ಲಿ ರೈಲು ನಿಲ್ದಾಣಗಳಲ್ಲಿ ನೂಕುನುಗ್ಗಲು ಉಂಟಾಗುವುದನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಶ್ಚಿಮ ರೈಲ್ವೇ ತಿಳಿಸಿದೆ. ಕೆಲವು ನಾಮನಿರ್ದೇಶಿತ ನಿಲ್ದಾಣಗಳಲ್ಲಿ ಅಕ್ಟೋಬರ್ 31 ರವರೆಗೆ ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಬೆಲೆಯನ್ನು 10 ರಿಂದ 50 ರೂ.ಗೆ ಹೆಚ್ಚಿಸಲಾಗಿದೆ ಎಂದು ಪಶ್ಚಿಮ ರೈಲ್ವೇ ಪ್ರಕಟಣೆಯಲ್ಲಿ ತಿಳಿಸಿದೆ. ಅದರ ನಂತರ ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಬೆಲೆ ಸಾಮಾನ್ಯ ಮಟ್ಟದಲ್ಲಿ (10ರೂ.) ಇರಲಿದೆ.

ಮುಂಬೈನಲ್ಲಿ ಈ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ದರ ಹೆಚ್ಚಳ
ಪಶ್ಚಿಮ ರೈಲ್ವೇ ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಮುಂಬೈನಲ್ಲಿ ಈ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ದರಗಳನ್ನು ಹೆಚ್ಚಿಸಲಾಗಿದೆ. ಹೊಸ ದರಗಳು - ರೂ 10 ರಿಂದ ರೂ 50 ರವರೆಗೆ ಅಕ್ಟೋಬರ್ 21 ರಿಂದ ಕೆಳಗಿನ ನಿಲ್ದಾಣಗಳಿಗೆ ಅನ್ವಯಿಸುತ್ತದೆ. ಅಕ್ಟೋಬರ್ 31 ರವರೆಗೆ ದರಗಳು ಜಾರಿಯಲ್ಲಿರುತ್ತವೆ ಎಂದು ಸಿಆರ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಾಜಿ ಸುತಾರ್ ಶುಕ್ರವಾರ ತಿಳಿಸಿದ್ದಾರೆ.
*ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್
*ದಾದರ್
*ಲೋಕಮಾನ್ಯ ತಿಲಕ್ ಟರ್ಮಿನಸ್
*ಥಾಣೆ
*ಕಲ್ಯಾಣ್
*ಪನ್ವೆಲ್

ಉತ್ತರ ರೈಲ್ವೆಯೂ ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ದರ ಹೆಚ್ಚಿಸಿದೆ
ಕಳೆದ ವರ್ಷ, ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, ರೈಲ್ವೆ ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಬೆಲೆಯನ್ನು ಐದು ಪಟ್ಟು ಹೆಚ್ಚಿಸಲಾಗಿತ್ತು. ದೇಶದಾದ್ಯಂತ ಹೆಚ್ಚಿನ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ದರವನ್ನು 10 ರೂ. ನಿಂದ 50 ರೂ.ಗೆ ಹೆಚ್ಚಿಸಲಾಗಿತ್ತು. ನಂತರ 2021ರ ಡಿಸೆಂಬರ್ ನಲ್ಲಿ, ಪ್ಲಾಟ್‌ಫಾರ್ಮ್ ಟಿಕೆಟ್ ದರವನ್ನು ಕಡಿತಗೊಳಿಸಲಾಯಿತು ಮತ್ತು ಅದನ್ನು ಮತ್ತೆ 10 ರೂಪಾಯಿಗೆ ಇಳಿಸಲಾಯಿತು.
ಹಬ್ಬ ಹರಿದಿನಗಳಲ್ಲಿ ಉತ್ತರ ರೈಲ್ವೇ ಕೂಡ ಇದೇ ರೀತಿ ದರ ಹೆಚ್ಚಳ ಮಾಡುತ್ತಿದೆ. ದಸರಾ, ದೀಪಾವಳಿ ಮತ್ತು ಛಾತ್ ಸಮಯದಲ್ಲಿ, ಇಲ್ಲಿನ ಮುಖ್ಯ ರೈಲು ನಿಲ್ದಾಣಗಳು ಜನದಟ್ಟಣೆ ಹೆಚ್ಚಿರುತ್ತದೆ. ಆದ್ದರಿಂದ ದೆಹಲಿ ಜಂಕ್ಷನ್, ನವದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ನಂತಹ ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ದರಗಳನ್ನು ಹೆಚ್ಚಿಸಲಾಗಿದೆ.

ಎಂಟು ನಿಲ್ದಾಣಗಳಲ್ಲಿ ಬೆಲೆ ಏರಿಕೆ
ದಕ್ಷಿಣ ರೈಲ್ವೆ ಹೊರಡಿಸಿರುವ ಆದೇಶದ ಪ್ರಕಾರ, ಅಕ್ಟೋಬರ್ 1 ರಿಂದ ಕೆಲವು ಪ್ರಮುಖ ನಿಲ್ದಾಣಗಳಲ್ಲಿ ಜನರು ಪ್ಲಾಟ್‌ಫಾರ್ಮ್ ಟಿಕೆಟ್‌ಗೆ 10 ರೂ. ಬದಲಿಗೆ 20 ರೂ. ಪಾವತಿಸಬೇಕಿದೆ.
ಹಬ್ಬ ಹರಿದಿನಗಳಲ್ಲಿ ರೈಲು ನಿಲ್ದಾಣಗಳಲ್ಲಿ ನೂಕುನುಗ್ಗಲು ಉಂಟಾಗುವುದನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ. ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಪರಿಷ್ಕೃತ ಬೆಲೆ 2022ರ ಅಕ್ಟೋಬರ್ 1 ರಿಂದ 2023ರ ಜನವರಿ 31 ರವರೆಗೆ ಅನ್ವಯಿಸುತ್ತದೆ. ಅದರ ನಂತರ ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಬೆಲೆ ಸಾಮಾನ್ಯ ಮಟ್ಟದಲ್ಲಿ (10ರೂ.) ಇರಲಿದೆ.
ದಕ್ಷಿಣ ರೈಲ್ವೆ ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ, 2021ರ ಅಕ್ಟೋಬರ್ 1 ರಿಂದ 2023ರ ಜನವರಿ 31ರವರೆಗೆ ಚೆನ್ನೈ ವಿಭಾಗದ 8 ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ದರಗಳನ್ನು ದ್ವಿಗುಣಗೊಳಿಸಲಾಗುವುದು. ಈ ನಿಲ್ದಾಣಗಳು ಎಂಜಿಆರ್ ಚೆನ್ನೈ ಸೆಂಟ್ರಲ್, ಚೆನ್ನೈ ಎಗ್ಮೋರ್, ತಾಂಬರಂ, ಕಟ್ಪಾಡಿ, ಚೆಂಗಲ್ಪಟ್ಟು, ಅರಕ್ಕೋಣಂ, ತಿರುವಳ್ಳೂರು ಮತ್ತು ಅವಡಿ ನಿಲ್ದಾಣಗಳಲ್ಲಿ ದರ ಹೆಚ್ಚಳ ಮಾಡಲಾಗಿದೆ. ಈ ಹಿಂದೆಯೂ ಈ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ದರವನ್ನು ಹೆಚ್ಚಿಸಲಾಗಿತ್ತು ಎಂಬುದು ಗಮನಾರ್ಹ. ನಂತರ ಇವುಗಳನ್ನು ಮತ್ತೆ 10 ರೂ.ಗೆ ಇಳಿಸಲಾಯಿತು.












Click it and Unblock the Notifications