ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಇಲಾಖೆಯ 5 ಹೊಸ ಯೋಜನೆಗಳು ಯಾವವು?

|
Google Oneindia Kannada News

ನವದೆಹಲಿ, ಜ.6: ಭಾರತೀಯ ರೈಲ್ವೆ ಆಧುನೀಕರಣಕ್ಕೆ ಒಗ್ಗಿಕೊಳ್ಳುವುದರೊಂದಿಗೆ ಜನಪ್ರಿಯ ಯೋಜನೆಗಳನ್ನು ಜಾರಿ ಮಾಡಲು ಮುಂದಾಗಿದೆ.ಐಆರ್ ಸಿಟಿಸಿ ಎಲ್ಲ ಯೋಜನೆಗಳ ಮೇಲ್ವಿಚಾರಣೆ ನೋಡಿಕೊಳ್ಳಲಿದೆ.

ರೈಲ್ವೆ ಸಚಿವ ಸುರೇಶ್ ಪ್ರಭು ಪ್ರಯಾಣಿಕರಿಗೆ ಅನುಕೂಲವಾಗುವಂಥ 5 ವಿನೂತನ ಯೋಜನೆಗಳ ಘೋಷಿಸಿದ್ದಾರೆ. ಉತ್ತಮ ಆದಾಯ ಮತ್ತು ಸೇವೆ ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಲಾಗಿದೆ.[ರೈಲು ಪ್ರಯಾಣಕ್ಕೆ ಹೊರಡುವ ಮುನ್ನ ಇದನ್ನೊಮ್ಮೆ ಓದಿ]

railway

5 ಯೋಜನೆಗಳು
1. ಕ್ಯಾಬ್ ಬುಕಿಂಗ್
ಹೇಗೆ ರೈಲ್ವೆ ಟಿಕೆಟ್ ಬುಕ್ ಮಾಡಿ ನಿರ್ದಿಷ್ಟ ನಿಲ್ದಾಣ ತಲುಪುತ್ತೆವಯೋ, ಹಾಗೆ ಅಲ್ಲಿಂದ ಮನೆಗೆ ತೆರಳಲು ಕ್ಯಾಬ್ ಬುಕ್ ಮಾಡುವ ಅವಕಾಶವನ್ನು ಕಲ್ಪಿಸಲಾಗುವುದು.
2. ಹೆಲಿಕಾಪ್ಟರ್ ಸೇವೆ
ಜಮ್ಮುವಿನ ವೈಷ್ಣೋದೇವಿ ದೇವಾಲಯಕ್ಕೆ ಜಮ್ಮುವಿನ ಕಟ್ರಾ ರೈಲು ನಿಲ್ದಾಣದಿಂದ ಹೆಲಿಕಾಪ್ಟರ್ ಸೇವೆ ಒದಗಿಸಲಾಗುವುದು. ಭಕ್ತರು ಮತ್ತು ವೃದ್ಧರನ್ನು ದೃಷ್ಟಿಯಲ್ಲಿಟ್ಟುಕೊಂಡು ವ್ಯವಸ್ಥೆ ಜಾರಿ ಮಾಡಲಾಗುತ್ತಿದ್ದು ಕೈಗೆಟಕುವ ದರದಲ್ಲಿ ಸೇವೆ ನೀಡಲಾಗುವುದು.[ಐಆರ್ ಸಿಟಿಸಿಯಿಂದ ದುಬೈ ಪ್ರವಾಸದ ಪ್ಯಾಕೇಜ್]
3.ಗ್ಲಾಸ್ ಪ್ರೂಫ್ ಕೋಚ್
ಪ್ರವಾಸೋದ್ಯಮ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಗ್ಲಾಸ್ ಪ್ರೂಫ್ ಕೋಚ್ ಪರಿಚಯಿಸಲಾಗುತ್ತಿದೆ. ನೈಸಗರ್ಗಿಕ ಸೊಬಗು ಸವಿಯುತ್ತ ಸಂಚರಿಸುವ ಅನುಭವ ಪಡೆದುಕೊಳ್ಳಬೇಕು.
4. ಸ್ಥಳೀಯ ರೈಲುಗಳಿಗೂ ಹವಾ ನಿಯಂತ್ರಿತ ಬೋಗಿ
ಗ್ರಾಮೀಣ ಭಾಗದ ಜನರಿಗೂ ಉತ್ತಮ ಸೇವೆ ಕಲ್ಪಿಸಲು ಸ್ಥಳೀಯ ರೈಲುಗಳಿಗೂ ಹವಾ ನಿಯಂತ್ರಿತ ಬೋಗಿ ಅಳವಡಿಕೆಗೆ ನಿರ್ಧಾರ ಮಾಡಲಾಗಿದೆ.
5.ತಾಜಾ ಸೇಬು
ಪ್ರಯಾಣಿಕರಿಗೆ ಮತ್ತು ಸೇನೆಗೆ ತಾಜಾ ಸೇಬು ಒದಗಿಸಲು ಯೋಜನೆ ರೂಪಿಸಲಾಗಿದೆ. ಇದು ರೈಲ್ವೆ ಆರ್ಥಿಕತೆ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಲಾಗಿದೆ.

English summary
Railway Minister Suresh Prabhu is reported to have planned an elaborate makeover of Indian Railways. The new initiatives, to be taken up by the Indian Railway Catering and Tourism Corporation (IRCTC), have been planned to ensure more revenue for the largest public sector undertaking in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X