ಇನ್ಮುಂದೆ ಬ್ಯಾಂಕಿನಲ್ಲಿಯೇ ಲಭ್ಯವಾಗಲಿದೆ ರೈಲ್ವೆ ಟಿಕೆಟ್

Posted By:
Subscribe to Oneindia Kannada
ಬೆಂಗಳೂರು, ಫೆಬ್ರವರಿ 16 : ಜನರಲ್ ಬೋಗಿಯಲ್ಲಿ ಅಡ್ಡಾಡುವವರು ಇನ್ನು ಮುಂದೆ ರೈಲ್ವೆ ಟಿಕೆಟ್ ಖರೀದಿಸಲು ರೈಲು ನಿಲ್ದಾಣಕ್ಕೆ ಎಡತಾಕಬೇಕಿಲ್ಲ, ಬ್ಯಾಂಕಿನಲ್ಲಿ ರೈಲು ಟಿಕೆಟ್ ಖರೀದಿಸಬಹುದಾಗಿದೆ. ಭಾರತೀಯ ರೈಲ್ವೆ ಇಲಾಖೆ ಇಂತಹ ಮಹತ್ವದ ಹೆಜ್ಜೆ ಇಟ್ಟಿದೆ.

ಕಳೆದ ವರ್ಷದ ಆಗಸ್ಟ್ ನಲ್ಲಿಯೇ ಇಂತಹ ವ್ಯವಸ್ಥೆಗಾಗಿ ರೈಲ್ವೆ ಮಂಡಳಿ ಚಿಂತನೆಯನ್ನು ಆರಂಭಿಸಿತ್ತು. ಇದು ಈಗ ಅಂತಿಮ ಹಂತದಲ್ಲಿದ್ದು, ಇದನ್ನು ಸಾಧ್ಯವಾಗಿಸಲು ರೈಲ್ವೆ ಇಲಾಖೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ.[ನೈಋತ್ಯ ರೈಲ್ವೆಯಲ್ಲಿ ಗ್ರೂಪ್ ಡಿ ಹುದ್ದೆ, ಮಾ.6 ಕೊನೆ ದಿನ]

ಈ ಮಹತ್ವಾಕಾಂಕ್ಷೆಯ ಯೋಜನೆ ಏಪ್ರಿಲ್ 2017ರಲ್ಲಿ ಅಂತಿಮಗೊಳ್ಳಲಿದ್ದು, ಬ್ಯಾಂಕಲ್ಲಿ ರೈಲ್ವೆ ಟಿಕೆಟ್ ಪಡೆಯುವ ಸೌಲಭ್ಯ ನಂತರ ಆರಂಭವಾಗಲಿದೆ. ಇದು ಹಲವಾರು ಬಡವರಿಗೆ ಆಶಾದಾಯಕವಾಗಿ ಪರಿಣಮಿಸಲಿದೆ.

Railway general tickets to be available in banks

ಇದನ್ನು ಜಾರಿಗೆ ತರಲು ಎರಡು ಸಾಧ್ಯತೆಗಳ ಬಗ್ಗೆ ರೈಲ್ವೆ ಇಲಾಖೆ ಚಿಂತಿಸುತ್ತಿದೆ. ಒಂದು, ಬ್ಯಾಂಕುಗಳಲ್ಲಿ ಟಿಕೆಟ್ ವಿತರಿಸುವ ಮಷೀನನ್ನು ಸ್ಥಾಪಿಸಿ ಅದರ ಮುಖಾಂತರ ಟಿಕೆಟ್ ನೀಡುವುದು. ಎರಡು, ಎಟಿಎಂನಲ್ಲಿಯೇ ಸೂಕ್ತ ಬದಲಾವಣೆ ತಂದು, ಅಲ್ಲಿಯೇ ಟಿಕೆಟ್ ಪಡೆಯುವಂತೆ ಮಾಡುವುದು.

ಪ್ರಯಾಣಿಕರಿಗೆ ಅನುಕೂಲತೆ

ಇದರಿಂದಾಗಿ ನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಭಾರೀ ಅನುಕೂಲವಾಗಲಿದೆ ಎಂಬುದು ಇಲಾಖೆಯ ಅನಿಸಿಕೆ. ಟಿಕೆಟ್ ಕೌಂಟರ್ ಮುಂದೆ ಭಾರೀ ಜನದಟ್ಟಣೆಯಾಗುವುದನ್ನು ಈ ವ್ಯವಸ್ಥೆ ತಪ್ಪಿಸಲಿದೆ. ಮತ್ತು ಪ್ರಯಾಣಿಕರು ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲುವುದನ್ನು ಕೂಡ ಇದರಿಂದ ತಪ್ಪಲಿದೆ.[ಸುರೇಶ್ ಪ್ರಭು ಅವರಿಗೆ ಬೆಂಗಳೂರಿನ ನಾಗರಿಕರ ಕಳಕಳಿಯ ಪತ್ರ]

ಇಂಥ ವ್ಯವಸ್ಥೆ ಈಗಾಗಲೆ ಆರಂಭವಾಗಿದೆ

ಜಮ್ಶೆಡ್‌ಪುರದಲ್ಲಿರುವ ಮಾಂಗೋ ಪೋಸ್ಟ್ ಆಫೀಸಿನಲ್ಲಿ ಕಳೆದ 5 ವರ್ಷಗಳಿಂದ ರೈಲು ಟಿಕೆಟ್ಟನ್ನು ವಿತರಿಸಲಾಗಿತ್ತಿದೆ. ರೈಲ್ವೆ ಇಲಾಖೆ ಮಾಂಗೋ ನಗರದ ಬಸ್ ನಿಲ್ದಾಣದಲ್ಲಿ ತೆರೆದಿರುವ ಕೌಂಟರ್ ಮೂಲಕವೂ ಟಿಕೆಟ್ ಪಡೆಯಬಹುದಾಗಿದೆ.

ಟಾಟಾನಗರದ ರೈಲು ನಿಲ್ದಾಣದಲ್ಲಿ ಟಿಕೆಟ್ ವಿತರಿಸಲು ಪ್ರತ್ಯೇಕ ಮಷೀನುಗಳನ್ನು ತೆರೆಯಲಾಗಿದೆ. ಇಲ್ಲಿ ಪ್ರತಿನಿತ್ಯ ಜನರಲ್ ಬೋಗಿಯಲ್ಲಿ ಸಂಚರಿಸುವ 15 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಟಿಕೆಟ್ ಪಡೆದು ಪ್ರಯಾಣಿಸುತ್ತಾರೆ. ದೇಶಾದ್ಯಂತ ಇಂತಹ ವ್ಯವಸ್ಥೆ ಜಾರಿಯಾಗುವ ದಿನ ದೂರವಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a major step towards easing availability of train tickets, the Indian Railways will soon start disbursing tickets of the general class from banks.The railway board had started working on this in August 2016 and the initiative is said to be in its final stages now. The Indian Railways and the State Bank of India are in constant touch to work out the modalities for this.
Please Wait while comments are loading...