ರೈಲು ಅಪಘಾತಗಳ ಸಂಖ್ಯೆಯಲ್ಲಿ ಇಳಿಮುಖ

ರೈಲು ಅಪಘಾತಗಳ ಸಂಖ್ಯೆಯಲ್ಲಿ ಇಳಿಮುಖವಾಗಿರುವ ಬಗ್ಗೆ ಮಹತ್ವದ ಹಾಗೂ ಆಸಕ್ತಿಕರ ಅಂಕಿ-ಅಂಶಗಳು ಹೊರಬಿದ್ದಿವೆ. ಹೀಗೊಂದು ಹೋಲಿಕೆಯನ್ನು ಕಳೆದ ವರ್ಷದ ಅಂದರೆ 2016ರ ಏಪ್ರಿಲ್- ಅಕ್ಟೋಬರ್ ಹಾಗೂ 2017ರ ಏಪ್ರಿಲ್- ಅಕ್ಟೋಬರ್ ಅವಧಿಯ ಮಧ್ಯೆ ಮಾಡಲಾಗಿದೆ. ಹಾಗೆ ಹೋಲಿಸಿದಾಗ ಅಪಘಾತದ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ.

ಹಳಿ ತಪ್ಪಿದ ಪ್ರಕರಣಗಳು ಕಳೆದ ವರ್ಷದ ಅಕ್ಟೋಬರ್ ತಿಂಗಳೊಂದರಲ್ಲಿ 12 ಸಂಭವಿಸಿದ್ದವು. ಅದು ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ 3ಕ್ಕೆ ಇಳಿಕೆಯಾಗಿದೆ. ಇನ್ನು 2016ರ ಏಪ್ರಿಲ್- ಅಕ್ಟೋಬರ್ ಮಧ್ಯೆ ರೈಲು ಹಳಿ ತಪ್ಪಿದ ಪ್ರಕರಣಗಳು 58 ಸಂಭವಿಸಿದ್ದರೆ, ಈ ವರ್ಷದ ಅದೇ ಅವಧಿಯಲ್ಲಿ 31 ಪ್ರಕರಣಗಳಾಗಿವೆ.

Rail derailments and level crossing accidents have decreased

ಲೆವೆಲ್ ಕ್ರಾಸಿಂಗ್ ಅಪಘಾತಗಳು ಕಳೆದ ವರ್ಷದ ಅದೇ ಅವಧಿಯಲ್ಲಿ 14 ಸಂಭವಿಸಿದ್ದರೆ, ಈ ವರ್ಷದಲ್ಲಿ 8 ಸಂಭವಿಸಿವೆ. ಇನ್ನು ಒಟ್ಟಾರೆ ರೈಲು ಅಪಘಾತ ಸಂಖ್ಯೆಯಲ್ಲಿ ಕಡಿಮೆ ಆಗಿದೆ. 2016ರ ಏಪ್ರಿಲ್- ಅಕ್ಟೋಬರ್ ಮಧ್ಯೆ 76 ಅಪಘಾತ ಪ್ರಕರಣಗಳು ದಾಖಲಾಗಿದ್ದವು. ಈ ವರ್ಷದ ಅದೇ ಅವಧಿಯಲ್ಲಿ 42 ಪ್ರಕರಣಗಳಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+