ವರ್ಷಾಂತ್ಯಕ್ಕೆ ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಪಟ್ಟಾಭಿಷೇಕ
ನವದೆಹಲಿ, ಜೂನ್ 7: ಈ ವರ್ಷದ ಅಂತ್ಯಕ್ಕೆ ಎಐಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೇಮಕವಾಗಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪಿಎಲ್ ಪೂನಿಯಾ ಪಾಟ್ನಾದಲ್ಲಿ ಹೇಳಿದ್ದಾರೆ.
ಹಾಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಜಾಗಕ್ಕೆ ರಾಹುಲ್ ಗಾಂಧಿ ನೇಮಕವಾಗಲಿದ್ದಾರೆ. ಈ ಹಿಂದೆ ಕಾಂಗ್ರೆಸ್ ನಾಯಕರು ಮಂಗಳವಾರದ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆಯಲ್ಲಿ ರಾಹುಲ್ ಗಾಂಧಿ ನೇಮಕದ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ ಎಂದು ಹೇಳಿದ್ದರು. ಇದೀಗ ಹಿರಿಯ ಕಾಂಗ್ರೆಸ್ ನಾಯಕ ಪೂನಿಯಾ ರಾಹುಲ್ ನೇಮಕ ಬಹಿರಂಗಪಡಿಸಿದ್ದಾರೆ.

ಪಕ್ಷದೊಳಗೆ ಚುನಾವಣೆ ನಡೆದು ರಾಹುಲ್ ಗಾಂಧಿಯವರನ್ನು ಪಕ್ಷಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ ಎಂದು ಪೂನಿಯಾ ಹೇಳಿದ್ದಾರೆ. ಇನ್ನು ಅಕ್ಟೋಬರ್ ವೇಳೆಗೆ ರಾಹುಲ್ ಗಾಂಧಿಗೆ ಪಟ್ಟ ಕಟ್ಟಲಾಗುತ್ತದೆ ಎಂಬ ವರದಿಯನ್ನು ತಳ್ಳಿ ಹಾಕಿದ ಅವರು ನೇಮಕವೇನಿದ್ದರೂ 2018ರ ವರ್ಷಾಂತ್ಯದಲ್ಲಿ ನಡೆಯಲಿದೆ ಎಂದಿದ್ದಾರೆ.
"ನಾವು ಪಕ್ಷದ ಆಂತರಿಕ ಚುನಾವಣೆಗೆ ಸಿದ್ದವಾಗುತ್ತಿದ್ದೇವೆ. ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ರಾಹುಲ್ ಗಾಂಧಿಯವರನ್ನು ದೊಡ್ಡ ಜವಾಬ್ದಾರಿಯಲ್ಲಿ ನೋಡಲು ಇಚ್ಛಿಸಿದ್ದಾರೆ. ಒಮ್ಮೆ ರಾಜ್ಯಮಟ್ಟದಲ್ಲಿ ಪಕ್ಷದ ಚುನಾವಣೆಗಳು ನಡೆದ ನಂತರ ಪಕ್ಷದ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು. ಈ ವರ್ಷದ ಅಂತ್ಯಕ್ಕೆ ಇದು ನಡೆಯಲಿದೆ," ಎಂದು ಪೂನಿಯಾ ಹೇಳಿದ್ದಾರೆ.












Click it and Unblock the Notifications