Get Updates
Get notified of breaking news, exclusive insights, and must-see stories!

Rahul Gandhi: ಲೋಕಸಭಾ ಚುನಾವಣೆಗೆ ಅಮೇಥಿಯಿಂದ 'ರಾಗಾ' ಸ್ಪರ್ಧೆ: ರಣಕಣವಾಗಿ ಬದಲಾಗುತ್ತಾ ಕ್ಷೇತ್ರ? ಇತಿಹಾಸ ನೋಡಿ

ನವದೆಹಲಿ, ಮಾರ್ಚ್ 06: ಲೋಕಸಭಾ ಚುನಾವಣೆ 2024ಕ್ಕೆ ದಿನಾಂಕ ಘೋಷಣೆ ಬಾಕಿ ಇರುವಾಗಲೇ ಘಟಾನುಘಟಿ ನಾಯಕರ ಸ್ಪರ್ಧಿಸುವ ಕ್ಷೇತ್ರಗಳು ಅಂತಿಮಗೊಳ್ಳುತ್ತಿವೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ವಾರಾಣಿಸಿಯಿಂದ ಸ್ಪರ್ಧಿಸುವುದು ಖಚಿತವಾಗಿದೆ. ಇದರ ಬೆನ್ನಲ್ಲೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರು ಯಾವ ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸುತ್ತಾರೆ ಎಂಬುದಕ್ಕೆ ಉತ್ತರ ಸಿಕ್ಕಿದೆ.

ರಾಹುಲ್ ಗಾಂಧಿ ಅವರು 2002 ರಿಂದ ಹಲವು ಬಾರಿ ಪ್ರತಿನಿಧಿಸಿರುವ ಕ್ಷೇತ್ರವಾದ 'ಅಮೇಥಿ' ಕ್ಷೇತ್ರದಿಂದಲೇ ಈ ಬಾರಿಯ ಲೋಕಸಭೆ ಚುನಾವಣೆ 2024 ಎದುರಿಸಲಿದ್ದಾರೆ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕರೊಬ್ಬರು ಬುಧವಾರ ಮಾಹಿತಿ ನೀಡಿದ್ದಾರೆ.

Rahul Gandhi will Contest from Amethi in Lok Sabha Election 2024

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಭೆಯಿಂದ ಹಿಂತಿರುಗಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರದೀಪ್ ಸಿಂಘಾಲ್ ಮಾತನಾಡಿ, ರಾಹುಲ್ ಗಾಂಧಿಯವರು ಅಮೇಥಿಯಿಂದಲೇ ಪಕ್ಷದಿಂದ ಕಣ್ಣಕ್ಕಿಳಿಯಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಶೀಘ್ರದಲ್ಲೇ ಗಾಂಧಿಯವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ಮಾಹಿತಿ ನೀಡಿದರು.

'ಅಮೇಥಿ' ಕಾಂಗ್ರೆಸ್ ನ ಭದ್ರಕೋಟೆ

1967ರಲ್ಲಿ ಸ್ಥಾಪನೆಯಾದಾಗಿನಿಂದ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಮೇಥಿ ಭದ್ರಕೋಟೆ ಎಂದರೆ ತಪ್ಪಾಗಲಾರದು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕಿರಿಯ ಪುತ್ರ ಸಂಜಯ್ ಗಾಂಧಿ ಅವರು 1977 ರಲ್ಲಿ ಅಮೇಥಿಯಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದರು. ಆದರೆ ತುರ್ತು ಪರಿಸ್ಥಿತಿಯ ವಿರುದ್ಧ ರಾಷ್ಟ್ರವ್ಯಾಪಿ ಹಿನ್ನಡೆಯಿಂದಾಗಿ ಅವರು ಸೋಲು ಅನುಭವಿಸಿದರು.

ಬಳಿಕ 1980 ರಲ್ಲಿ ಸಂಜಯ್ ಗಾಂಧಿ ಕ್ಷೇತ್ರದಲ್ಲಿ ವಿಜಯ ಸಾಧಿಸಿದರು. ಆದರೆ 1981 ರಲ್ಲಿ ವಿಮಾನ ಅಪಘಾತದಲ್ಲಿ ಅವರು ನಿಧನರಾದರು. ನಿಧನದ ನಂತರ, ಅವರ ಹಿರಿಯ ಸಹೋದರ ರಾಜೀವ್ ಗಾಂಧಿ ರಾಜಕೀಯಕ್ಕೆ ಪ್ರವೇಶಿಸಿದರು. 1981 ರಲ್ಲಿ ಅಮೇಥಿಯಿಂದ ರಾಜೀವ್ ಗಾಂಧಿ ಕಣಕ್ಕಿಳಿದರು. ಅದಾದ ಬಳಿಕ 1984, 1989, ಮತ್ತು 1991 ರಲ್ಲಿ ನಿರಂತರವಾಗಿ ಗೆಲ್ಲವು ಮೂಲಕ ಹ್ಯಾಟ್ರಿಕ್ ಭಾರಿಸಿದರು. ನಂತರದ ದಿನಗಳಲ್ಲಿ ಅವರನ್ನು ಹತ್ಯೆ ಮಾಡಲಾಯಿತು.

ಅಮೇಥಿಯಿಂದ ಸೋನಿಯಾ ಗಾಂಧಿ ಸ್ಪರ್ಧೆ

ಸೋನಿಯಾ ಗಾಂಧಿ ಅವರು 1999 ರಲ್ಲಿ ಅಮೇಥಿಯಿಂದ ಸ್ಪರ್ಧಿಸಿದರು. ಆದಾಗ್ಯೂ 2004ರಲ್ಲಿ ಅವರು ತಮ್ಮ ಕ್ಷೇತ್ರವನ್ನು ರಾಯ್ಬರೇಲಿಗೆ ಬದಲಾವಣೆ ಮಾಡಿಕೊಂಡರು. ಇದಕ್ಕು ಮೊದಲು ಅವರ ಅಳಿಯ ಫಿರೋಜ್ ಗಾಂಧಿ ಮತ್ತು ನಂತರ ಇಂದಿರಾ ಗಾಂಧಿಯವರು ಪ್ರತಿನಿಧಿಸಿದ್ದ ಕ್ಷೇತ್ರ ಅದಾಗಿತ್ತು.

ರಾಹುಲ್ ಗಾಂಧಿ 2004 ರಲ್ಲಿ ಅಮೇಥಿಯಲ್ಲಿ ಕುಟುಂಬದ ರಾಜಕೀಯ ಭದ್ರಕೋಟೆ ಪ್ರವೇಶಿಸಿದರು. 2009 ಮತ್ತು 2014 ರಲ್ಲಿ ರಾಹುಲ್ ಗಾಂಧಿಯವರು ಮತ್ತೊಮ್ಮೆ ವಿಜಯಸಾಧಿಸಿ ಮರು ಆಯ್ಕೆಯಾದರು. 2002 ರಿಂದ 2019 ರವರೆಗೆ ರಾಹುಲ್ ಗಾಂಧಿಯವರು ಅಮೇಥಿ ಕ್ಷೇತ್ರ ಪ್ರತಿನಿಧಿಸಿದರು.

Rahul Gandhi will Contest from Amethi in Lok Sabha Election 2024

2019 ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರು ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಸ್ಮೃತಿ ಇರಾನಿ ವಿರುದ್ಧ ಸುಮಾರು 55,000 ಮತಗಳ ಅಂತರದಿಂದ ಸೋಲನ್ನು ಎದುರಿಸಿದರು. 2019 ರಲ್ಲಿ ಎರಡು ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿಯವರು ಕೇರಳದ ವಯನಾಡ್ ಕ್ಷೇತ್ರದಿಂದ ಗೆಲವು ಸಾಧಿಸಿದ್ದರು.

ಅಮೇಥಿ ಈ ಬಾರಿಯು ಕುತೂಹಲ ಕಾರಿ ಕ್ಷೇತ್ರ?

ಮುಂಬರಲಿರುವ ಚುನಾವಣೆಯಲ್ಲಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಮತ್ತೊಮ್ಮೆ ಅಮೇಠಿಯಿಂದ ರಾಹುಲ್ ಗಾಂಧಿ ಕಣಕ್ಕಿಳಿದರೆ ಅಮೇಥಿ ಮತ್ತೊಂದು ಕುತೂಹಲಕಾರಿ ಕ್ಷೇತ್ರವಾಗಲಿದೆ. ಕಳೆದ ಬಾರಿ (2019) ಸಾರ್ವತ್ರಿಕ ಚುನಾವಣೆಯಲ್ಲಿ ಸ್ಮೃತಿ ಇರಾನಿ ಅವರು ಕಾಂಗ್ರೆಸ್‌ ಭದ್ರಕೋಟೆಯಲ್ಲಿ ರಾಹುಲ್ ಅವರನ್ನು ಭಾರಿ (55,120) ಮತಗಳಿಂದ ಸೋಲಿಸಿದ್ದರು.

2014ರಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸ್ಮೃತಿ ಇರಾನಿಯವರು ರಾಹುಲ್ ಗಾಂಧಿ ವಿರುದ್ಧ ಸೋಲು ಎದುರಿಸಿದ್ದರು. ಸೋಲಿಗೆ ಕುಗ್ಗದೇ ಕ್ಷೇತ್ರದಲ್ಲಿ ಶ್ರಮಿಸಿದ ಪರಿಣಾಮ 2019ರಲ್ಲಿ ಮರಳಿ ಗೆದ್ದು, ಕಾಂಗ್ರೆಸ್‌ಗೆ ಆಘಾತ ನೀಡಿದರು. ಇದೀಗ ಮತ್ತೆ ಈ ಇಬ್ಬರು ಮಧ್ಯೆ ಸ್ಪರ್ಧೆಯ ನಿರೀಕ್ಷೆಗಳು ಕಂಡು ಬರುತ್ತಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+