ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಜೋಡೋ ಯಾತ್ರೆಯಲ್ಲಿ 41257 ರೂ. ಟೀ-ಶರ್ಟ್ ಧರಿಸಿದರೇ ರಾಹುಲ್ ಗಾಂಧಿ!?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 09: ಲೋಕಸಭೆ ಚುನಾವಣೆಗೆ ಕೆಲ ತಿಂಗಳು ಬಾಕಿ ಇರುವಂತೆ ಬಿಜೆಪಿ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್, ಭಾರತ್ ಜೋಡೋ ಯಾತ್ರೆ ಶುರು ಮಾಡಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಯಾತ್ರೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಕಳೆದ ಸೆಪ್ಟೆಂಬರ್ 8ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಶುರುವಾದ ಭಾರತ್ ಜೋಡೋ ಯಾತ್ರೆಯು ಕಾಶ್ಮೀರದವರೆಗೂ ಸಾಗಲಿದೆ. ಇದಕ್ಕಾಗಿ ಬರೋಬ್ಬರಿ 150 ದಿನಗಳ ಕಾಲ ಸಂಚರಿಸುವುದಕ್ಕೆ ರಾಹುಲ್ ಗಾಂಧಿ ಪ್ರಾರಂಭಿಸಿದ್ದಾರೆ.

ಅಯ್ಯೋ ಬಿಜೆಪಿಗೆ ಯಾರ್ ಹೆದರುತ್ತಾರೆ; ಹೀಗೆ ಹೇಳಿದ್ದೇಕೆ ರಾಹುಲ್ ಗಾಂಧಿ!?ಅಯ್ಯೋ ಬಿಜೆಪಿಗೆ ಯಾರ್ ಹೆದರುತ್ತಾರೆ; ಹೀಗೆ ಹೇಳಿದ್ದೇಕೆ ರಾಹುಲ್ ಗಾಂಧಿ!?

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಧರಿಸಿರುವ ಟೀ-ಶರ್ಟ್ ಮೇಲೆ ಇದೀಗ ಬಿಜೆಪಿ ಕಣ್ಣು ಹಾಕಿದೆ. ಅರೇ ಟೀ-ಶರ್ಟ್ ಮತ್ತು ಭಾರತ್ ಜೋಡೋ ಯಾತ್ರೆಗೂ ಎಲ್ಲಿಂದೆಲ್ಲಿ ಲಿಂಕ್ ಅನ್ನುವ ಪ್ರಶ್ನೆ ಉತ್ತರ ಹೀಗಿದೆ ಓದಿ.

ಭಾರತ್ ಜೋಡೋ ಎಂದರೆ ಒಂದುಗೂಡಿಸುವ ಯಾತ್ರೆ

ಭಾರತ್ ಜೋಡೋ ಎಂದರೆ ಒಂದುಗೂಡಿಸುವ ಯಾತ್ರೆ

ಭಾರತವನ್ನು ಒಡೆದು ಆಳುತ್ತಿರುವ ಬಿಜೆಪಿಯ ವಿರುದ್ಧ ಸಮರ ಸಾರುವುದು. ಸಮಾನತೆ ಮತ್ತು ಏಕತೆಯ ಸಂಕೇಶವಾಗಿ ರಾಷ್ಟ್ರವನ್ನು ಒಂದುಗೂಡಿಸುವುದೇ ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯ ಪ್ರಮುಖ ಉದ್ದೇಶವಾಗಿದೆ. ಇದರ ಜೊತೆ ಕಾಂಗ್ರೆಸ್ ಪಕ್ಷದ ಬಲವರ್ಧನೆ, ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವುದು, ಜನ ಬೆಂಬಲವನ್ನು ಗಳಿಸುವುದು ಇಡೀ ಯಾತ್ರೆಯ ಇನ್ನೊಂದು ಅಜೆಂಡಾ ಆಗಿದೆ.

ಬಿಜೆಪಿಯ ಕಣ್ಣು ಕುಕ್ಕಿದ ರಾಹುಲ್ ಗಾಂಧಿ ಟೀ-ಶರ್ಟ್

ಬಿಜೆಪಿಯ ಕಣ್ಣು ಕುಕ್ಕಿದ ರಾಹುಲ್ ಗಾಂಧಿ ಟೀ-ಶರ್ಟ್

ರಾಜಕೀಯವೇ ಹಾಗೆ, ಇಲ್ಲಿ ಆರೋಪ-ಪ್ರತ್ಯಾರೋಪಗಳಿಗೆ ಕಾರಣಗಳೇ ಬೇಕಾಗುವುದಿಲ್ಲ. ಇದೀಗ ಅಂಥದ್ದೇ ಕಾರಣವೊಂದನ್ನು ಇಟ್ಟುಕೊಂಡು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಮುಗಿ ಬಿದ್ದಿದೆ. ಜನರ ಮಧ್ಯೆ ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಅದ್ಯಾಕೆ ದುಬಾರಿ ಟಿ-ಶರ್ಟ್ ಧರಿಸಿದರು ಎಂಬು ಬಿಜೆಪಿ ಪ್ರಶ್ನೆ ಮಾಡುತ್ತಿದೆ. ಅವರು ಧರಿಸಿರುವ ಟೀ-ಶರ್ಟ್ ಬೆಲೆಯು ಆನ್‌ಲೈನ್‌ನಲ್ಲಿ ಎಷ್ಟಿದೆ ಎಂಬುದನ್ನು ಸಹ ಅದರ ಜೊತೆಗೆ ಹಾಕಲಾಗಿದೆ. ಆ ಮೂಲಕ ಟೀಕೆಯನ್ನು ಮುಂದುವರೆದಿದೆ.

ರಾಹುಲ್ ಗಾಂಧಿಯ ಟೀ-ಶರ್ಟ್ ಬೆಲೆ 41257 ರೂ.

ರಾಹುಲ್ ಗಾಂಧಿಯ ಟೀ-ಶರ್ಟ್ ಬೆಲೆ 41257 ರೂ.

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯು ಯಾವ ಟೀ-ಶರ್ಟ್ ಧರಿಸಿದ್ದರು ಎಂಬುದನ್ನು ಒಂದು ಫೋಟೋದಲ್ಲಿ ತೋರಿಸಲಾಗಿದೆ. ಅದರ ಪಕ್ಕದಲ್ಲೇ ಆ ಟೀ-ಶರ್ಟ್ ಬೆಲೆ ಎಷ್ಟಿದೆ ಎಂಬುದನ್ನು ಹಾಕಲಾಗಿದೆ. ಬಿಜೆಪಿ ಟ್ವೀಟ್ ಮಾಡಿರುವ ಫೋಟೋದ ಪ್ರಕಾರ, ರಾಹುಲ್ ಗಾಂಧಿ ಧರಿಸಿರುವ ಟೀ-ಶರ್ಟ್ ಬೆಲೆಯು ಬರೋಬ್ಬರಿ 41257 ರೂಪಾಯಿ ಆಗಿದೆ. ಇಷ್ಟೊಂದು ದುಬಾರಿ ಟೀ-ಶರ್ಟ್ ಧರಿಸಿರುವ ಬಗ್ಗೆ ಕಾಂಗ್ರೆಸ್ ನಾಯಕನನ್ನು ಬಿಜೆಪಿ ಪ್ರಶ್ನೆ ಮಾಡಿದೆ.

ದೇಶದಲ್ಲಿ ಹೇಗಿರುತ್ತೆ ಭಾರತ್ ಜೋಡೋ ಯಾತ್ರೆ?

ದೇಶದಲ್ಲಿ ಹೇಗಿರುತ್ತೆ ಭಾರತ್ ಜೋಡೋ ಯಾತ್ರೆ?

2024ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಸರ್ಕಾರಕ್ಕೆ ಪೈಪೋಟಿ ನೀಡುವ ಉದ್ದೇಶದಿಂದಲೇ ಭಾರತ್ ಜೋಡೋ ಯಾತ್ರೆ ಅನ್ನು ಕಾಂಗ್ರೆಸ್ ಆರಂಭಿಸುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಇದೇ ಭಾರತ್ ಜೋಡೋ ಯಾತ್ರೆಯ ಅಂಗವಾಗಿ ರಾಹುಲ್ ಗಾಂಧಿಯು ಒಟ್ಟು 150 ದಿನಗಳ ಅವಧಿಯಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ 3570 ಕಿಲೋ ಮೀಟರ್ ಪ್ರಯಾಣಿಸಲಿದ್ದಾರೆ. ರಾಷ್ಟ್ರವ್ಯಾಪಿ ಯಾತ್ರೆಯನ್ನು ಪ್ರಾರಂಭಿಸುತ್ತಿದ್ದಂತೆ, ರಾಹುಲ್ ಗಾಂಧಿಯ ವಸತಿ ಮತ್ತು ಆಹಾರಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ. ಆದರೆ ಅವರು ಯಾವುದೇ ಹೋಟೆಲ್‌ನಲ್ಲಿ ಉಳಿದುಕೊಳ್ಳುವುದಿಲ್ಲ, ಸಂಪೂರ್ಣ ಪ್ರಯಾಣವನ್ನು ಸರಳವಾಗಿ ಪೂರ್ಣಗೊಳಿಸುತ್ತಾರೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

ಮುಂದಿನ 150 ದಿನಗಳ ಕಾಲ ರಾಹುಲ್ ಗಾಂಧಿ ಕಂಟೈನರ್‌ನಲ್ಲಿಯೇ ಉಳಿದುಕೊಳ್ಳುತ್ತಾರೆ. ಕೆಲವು ಕಂಟೈನರ್‌ಗಳಲ್ಲಿ ಮಲಗುವ ಹಾಸಿಗೆ, ಶೌಚಾಲಯ ಮತ್ತು ಎಸಿಗಳನ್ನು ಸಹ ಅಳವಡಿಸಲಾಗಿದೆ. ಪ್ರಯಾಣದ ಸಮಯದಲ್ಲಿ, ತಾಪಮಾನ ಮತ್ತು ಪರಿಸರವು ಅನೇಕ ಪ್ರದೇಶಗಳಲ್ಲಿ ಭಿನ್ನವಾಗಿರುತ್ತದೆ. ಈ ಸ್ಥಳ ಬದಲಾವಣೆಯೊಂದಿಗೆ ತೀವ್ರವಾದ ಶಾಖ ಮತ್ತು ತೇವಾಂಶವನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥೆಗಳನ್ನು ಮಾಡಲಾಗಿದೆ. ಇಂತಹ ಸುಮಾರು 60 ಕಂಟೈನರ್‌ಗಳನ್ನು ಸಿದ್ಧಪಡಿಸಿ ಕನ್ಯಾಕುಮಾರಿಗೆ ಕಳುಹಿಸಲಾಗಿದ್ದು, ಅದರಲ್ಲಿ ಈ ಎಲ್ಲಾ ಕಂಟೈನರ್‌ಗಳನ್ನು ಇರಿಸಲಾಗಿದೆ. 148 ದಿನಗಳ ಯಾತ್ರೆ ಕಾಶ್ಮೀರದಲ್ಲಿ ಮುಕ್ತಾಯವಾಗಲಿದೆ. ಐದು ತಿಂಗಳ ಯಾತ್ರೆಯು 3,500 ಕಿಲೋಮೀಟರ್ ಮತ್ತು 12ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಂಚರಿಸಲಿದೆ. ಪ್ರತಿನಿತ್ಯ 25 ಕಿಲೋ ಮೀಟರ್ ಸಂಚರಿಸುವುದಕ್ಕೆ ಯೋಜನೆ ರೂಪಿಸಿಕೊಳ್ಳಲಾಗಿದೆ.

English summary
Rahul Gandhi wearing an Imported T-Shirt priced at Rs 41,257 for Bharat Jodo Yatra, Tweets BJP. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X