ಅಜ್ಜಿಮನೆಗೆ ಹೊರಟ ರಾಹುಲ್, ಸಮ್ಮರ್ ವೆಕೇಷನ್ ಪಿಕ್ನಿಕ್ ಎಂದ ಬಿಜೆಪಿ

Posted By:
Subscribe to Oneindia Kannada

ನವದೆಹಲಿ, ಜೂನ್ 14: ಇಟಲಿಯ ಅಜ್ಜಿ ಮನೆ ತೆರಳುತ್ತಿರುವುದಾಗಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿರುವುದನ್ನು ಓದಿರಬಹುದು.

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು, ಅಜ್ಜಿಮನೆಯಲ್ಲಿ ಕಾಲಕಳೆಯುವುದಕ್ಕಾಗಿ ಇಟಲಿಗೆ ಹೋಗುತ್ತಿರುವುದನ್ನು ಬಿಜೆಪಿ ಗೇಲಿ ಮಾಡಿ 'ಬೇಸಿಗೆ ರಜೆ' ಕಳೆಯಲು ಇದೊಂದು ನೆಪ ಎಂದಿದೆ. ಅಜ್ಜಿಮನೆಗೆ ಮೊಮ್ಮಗ ಹೋಗುವುದನ್ನು ಆಡಿಕೊಳ್ಳುವ ಬಿಜೆಪಿಗೆ ಸಂಸ್ಕೃತಿಯೇ ಇಲ್ಲ ಎಂದು ಕಾಂಗ್ರೆಸ್ ಪ್ರತ್ಯುತ್ತರ ನೀಡಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಮುಂದುವರೆದಿದೆ.

Rahul Gandhi to visit grandmother in Italy, BJP calls it a 'summer vacation picnic'

ಭದ್ರತೆ ಮತ್ತು ಇತರ ಕಾರಣಗಳಿಗಾಗಿ ಅವರು ಪ್ರಯಾಣಿಸುವ ದಿನಾಂಕವನ್ನು ಬಹಿರಂಗಪಡಿಸಲಾಗಿಲ್ಲ. 10 ದಿನಗಳ ಕಾಲ ಅವರು ವಿದೇಶ ಪ್ರವಾಸ ಮಾಡುವ ಸಾಧ್ಯತೆ ಇದೆ. ಇಟಲಿಯಲ್ಲಿರುವ ಅವರ ಅಜ್ಜಿ, ಪವೊಲಾ ಮೈನೊ ಮನೆಗೆ ಹೋಗುತ್ತಿರಬಹುದು ಎಂದು ಕಾಂಗ್ರೆಸ್‌ ಪದಾಧಿಕಾರಿಗಳು ಹೇಳಿದ್ದಾರೆ.

ಬಿಜೆಪಿ ವ್ಯಂಗ್ಯ: ರಾಷ್ಟ್ರಪತಿ ಚುನಾವಣೆ, ರೈತರ ಹೋರಾಟ ಸೇರಿದಂತೆ ಹಲವು ಪ್ರಮುಖ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ರಾಹುಲ್‌ ವಿದೇಶದತ್ತ ಮುಖ ಮಾಡಿದ್ದಾರೆ. 'ರಾಹುಲ್‌ ಗಾಂಧಿ ಅವರು ರಜಾ ಸಮಯದ ಮಧ್ಯೆ ಆಗೊಮ್ಮೆ ಈಗೊಮ್ಮೆ ಭಾರತಕ್ಕೆ ಭೇಟಿ ನೀಡುತ್ತಾರೆ' ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್‌ ನರಸಿಂಹ ರಾವ್‌ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress vice-president Rahul Gandhi on Tuesday tweeted that he will be taking a break from politics to visit his grandmother abroad, triggering taunts from the opposition BJP which called the visit the "picnic" of a "kid during his summer vacations".
Please Wait while comments are loading...