ಪುತ್ರ ವಾತ್ಸಲ್ಯದಿಂದ ಸೋನಿಯಾಗೆ ಪ್ರಧಾನಿ ಹುದ್ದೆ ತಪ್ಪಿತೇ?

ನವದೆಹಲಿ, ಜು 31: ಪುತ್ರ ರಾಹುಲ್ ಗಾಂಧಿಯ ಮಾತನ್ನು ಮೀರಲಾರದೇ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ 2004ರಲ್ಲಿ ತನಗೊಲಿದು ಬಂದಿದ್ದ ಪ್ರಧಾನಿ ಪದವಿಯನ್ನು ನಿರಾಕರಿಸಿದ್ದರೆಂದು ಮಾಜಿ ಕಾಂಗ್ರೆಸ್ ಮುಖಂಡ ನಟವರ್ ಸಿಂಗ್ ಹೇಳಿದ್ದಾರೆ.

ತನ್ನ ತಂದೆ ಮತ್ತು ಅಜ್ಜಿಯಂತೆ ತಾಯಿಯ ಜೀವಕ್ಕೂ ಅಪಾಯ ಬರಬಾರದು ಎನ್ನುವ ಕಾರಣಕ್ಕಾಗಿ ರಾಹುಲ್, ಸೋನಿಯಾ ಅವರನ್ನು ಪ್ರಧಾನಿ ಹುದ್ದೆ ಏರದಂತೆ ಒತ್ತಡ ಹೇರಿದ್ದರು ಎಂದು ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್ ಅಂದಿನ ಘಟನೆಯ ಮೆಲುಕು ಹಾಕಿದ್ದಾರೆ.

ಗಾಂಧಿ ಕುಟುಂಬಕ್ಕೆ ಪರಮಾಪ್ತರಾಗಿದ್ದ ನಟವರ್ ಸಿಂಗ್ ಹಗರಣದ ಸುಳಿಗೆ ಸಿಕ್ಕಿ 2005ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ 2008ರಲ್ಲಿ ಕಾಂಗ್ರೆಸ್ ಪಕ್ಷಕ್ಕೂ ವಿದಾಯ ಹೇಳಿದ್ದರು.

ಕಾಂಗ್ರೆಸ್ ಸಂಸದರು ಒಕ್ಕೂರಲಿನಿಂದ ಸೋನಿಯಾಗೆ ಪ್ರಧಾನಿ ಹುದ್ದೆ ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದರೂ ಅವರು ಒಪ್ಪಲಿಲ್ಲ. ಇದು ಸೋನಿಯಾ ನಿರ್ಧಾರವಾಗಿರಲಿಲ್ಲ, ಬದಲಿಗೆ ರಾಹುಲ್ ಒತ್ತಡದ ಕಾರಣವಾಗಿತ್ತು.

ಪ್ರಿಯಾಂಕ ವಾಧ್ರಾ ಮೂಲಕ ರಾಹುಲ್ ಸಂದೇಶವನ್ನು ಸೋನಿಯಾಗಿ ಕಾಂಗ್ರೆಸ್ ಸಭೆಯಲ್ಲಿ ತಿಳಿಸಲಾಯಿತು. ಆದರೆ ರಾಹುಲ್ ಒತ್ತಡವನ್ನು ಮರೆಮಾಚಿ 'ಐ ಆಮ್ ಸಾರಿ' ಎಂದು ಸೋನಿಯಾ ಪ್ರಧಾನಿ ಹುದ್ದೆ ನಿರಾಕರಿಸಿದ್ದರೆಂದು ನಟವರ್ ಸಿಂಗ್ ಅಂದಿನ ಘಟನೆಯ ಬಗ್ಗೆ ವಿವರ ನೀಡಿದ್ದಾರೆ.

ನಟವರ್ ಸಿಂಗ್ ಆತ್ಮಚರಿತ್ರೆ

ನಟವರ್ ಸಿಂಗ್ ಆತ್ಮಚರಿತ್ರೆ

'ಒನ್ ಲೈಫ್ ಈಸ್ ನಾಟ್ ಇನಫ್' ಆತ್ಮ ಚರಿತ್ರೆಯನ್ನು ಬಿಡುಗಡೆಗೊಳಿಸದಂತೆ, ಸೋನಿಯಾ ಮತ್ತು ಪ್ರಿಯಾಂಕ ಇಬ್ಬರೂ ನಟವರ್ ಸಿಂಗ್ ಮನೆಗೆ ಹೋಗಿ ಒತ್ತಡ ಹೇರಿದ್ದರು. ನಲವತ್ತು ನಿಮಿಷಕ್ಕೂ ಹೆಚ್ಚು ಕಾಲ ನಟವರ್ ಸಿಂಗ್ ಜೊತೆ ಮಾತುಕತೆ ನಡೆಸಿದ್ದರು.

ಹಠ ಸಾಧಿಸಿದ ರಾಹುಲ್ ಗಾಂಧಿ

ಹಠ ಸಾಧಿಸಿದ ರಾಹುಲ್ ಗಾಂಧಿ

ಮೇ 18, 2004ರಲ್ಲಿ ನಡೆದ ಘಟನೆಯ ಬಗ್ಗೆ ವಿವರ ನೀಡಿದ ನಟವರ್ ಸಿಂಗ್, ಸೋನಿಯಾ ಗಾಂಧಿ ಯಾವುದೇ ಕಾರಣಕ್ಕೂ ಪ್ರಧಾನಿ ಹುದ್ದೆಗೆ ಏರಬಾರದೆಂದು ರಾಹುಲ್ ಹಠ ಸಾಧಿಸಿದ್ದರು. ಈ ಸಭೆಯಲ್ಲಿ ಮನಮೋಹನ್ ಸಿಂಗ್, ಗಾಂಧಿ ಕುಟುಂಬದ ಆಪ್ತ ಸುಮನ್ ದುಬೆ ಮತ್ತು ಪ್ರಿಯಾಂಕ ವಾಧ್ರಾ ಮಾತ್ರ ಭಾಗವಹಿಸಿದ್ದರು. ರಾಹುಲ್ ಒತ್ತಡದಿಂದಾಗಿ ಮನಮೋಹನ್ ಸಿಂಗ್ ಪ್ರಧಾನಿಯಾದರು ಎಂದು ನಟವರ್ ಸಿಂಗ್ ಹೇಳಿದ್ದಾರೆ.

ತಮ್ಮನಿಗೆ ಫುಲ್ ಮಾರ್ಕ್ ನೀಡಿದ ಪ್ರಿಯಾಂಕ

ತಮ್ಮನಿಗೆ ಫುಲ್ ಮಾರ್ಕ್ ನೀಡಿದ ಪ್ರಿಯಾಂಕ

ರಾಹುಲ್ ಸದುದ್ದೇಶ ಹೊಂದಿದ್ದಾರೆ. ಮಗನಾಗಿ ರಾಹುಲ್ ಹಠ ಸಾಧಿಸುತ್ತಿರುವುದರಲಿ ಯಾವುದೇ ತಪ್ಪಿಲ್ಲ. ಅವನಿಗೆ ಫುಲ್ ಮಾರ್ಕ್ ನೀಡುತ್ತೇನೆಂದು ಪ್ರಿಯಾಂಕ ಅಂದು ಹೇಳಿದ್ದರು ಎಂದು 83 ವರ್ಷದ ನಟವರ್ ಸಿಂಗ್ ಘಟನೆಯ ಬಗ್ಗೆ ದಶಕದ ನಂತರ ವಿವರಿಸಿದ್ದಾರೆ.

ಸೋನಿಯಾಗೆ ಗೊತ್ತಿಲ್ಲದೆ ಏನೂ ನಡೆಯುವುದಿಲ್ಲ

ಸೋನಿಯಾಗೆ ಗೊತ್ತಿಲ್ಲದೆ ಏನೂ ನಡೆಯುವುದಿಲ್ಲ

ಈ ಎಲ್ಲಾ ಘಟನೆಗಳಿಗೆ ಸೋನಿಯಾ ಸಾಕ್ಷಿಯಾಗಿದ್ದರೂ ಏನೂ ಗೊತ್ತಿಲ್ಲದಂತೆ ವರ್ತಿಸುತ್ತಿದ್ದದ್ದು ನನಗೆ ಬೇಸರ ತಂದಿತ್ತು. ಒಂದಂತೂ ಸತ್ಯ, ಕಾಂಗ್ರೆಸ್ ನಲ್ಲಿ ಸೋನಿಯಾಗೆ ಗೊತ್ತಿಲ್ಲದೇ ಯಾವುದೇ ಕೆಲಸಗಳು ನಡೆಯುವುದಿಲ್ಲ - ನಟವರ್ ಸಿಂಗ್

ಕಾಂಗ್ರೆಸ್ ನಲ್ಲಿ ಹಿಡಿತ ಸಾಧಿಸಿರುವ ಸೋನಿಯಾ

ಕಾಂಗ್ರೆಸ್ ನಲ್ಲಿ ಹಿಡಿತ ಸಾಧಿಸಿರುವ ಸೋನಿಯಾ

ಉಪ ರಾಷ್ಟ್ರಪತಿಯಾಗಿದ್ದ ಶಂಕರ್ ದಯಾಳ್ ಶರ್ಮಾ ಅವರನ್ನು ಪ್ರಧಾನಿ ಹುದ್ದೆಯಲ್ಲಿ ಕೂರಿಸಬೇಕೆಂದು ಸೋನಿಯಾ ಬಯಸಿದ್ದರು. ಆದರೆ ಅವರ ಆರೋಗ್ಯ ಸರಿಯಿಲ್ಲದೇ ಇದ್ದ ಕಾರಣಕ್ಕಾಗಿ ಪಿ ವಿ ನರಸಿಂಹ ರಾವ್ ಅವರನ್ನು ಒಲ್ಲದ ಮನಸ್ಸಿನಲ್ಲಿ ಪ್ರಧಾನಿ ಹುದ್ದೆಗೆ ಓಕೆ ಅಂದಿದ್ದರು ಎಂದು ನಟವರ್ ಸಿಂಗ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+