Video: ವಯನಾಡಿನ ಭೀಕರ ಪ್ರವಾಹದ ಮಧ್ಯೆ ನಿಂತ ರಾಹುಲ್ ಗಾಂಧಿ: ಹಾಲಿವುಡ್‌ಗೂ ಮೀರಿದ ದೃಶ್ಯವೆಂದ ಜನ
ವಯನಾಡ್ ಭೂಕುಸಿತ ಸ್ಥಳಕ್ಕೆ ಇಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವಾನ ಹೇಳಿದ್ದಾರೆ. ವಯನಾಡಿನ ಮಾಜಿ ಸಂಸದರೂ ಆಗಿರುವ ರಾಹುಲ್ ಗಾಂಧಿ ಮೆಪ್ಪಾಡಿ ಪ್ರದೇಶದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತೆರೆದಿರುವ ಪರಿಹಾರ ಶಿಬಿರಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದರು.
ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು ಜನ ರಾಹುಲ್ ಗಾಂಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉಕ್ಕಿ ಹರಿಯುತ್ತಿರುವ ನದಿಗೆ ಅಡ್ಡಲಾಗಿರುವ ಚಿಕ್ಕ ಸೇತುವೆ ಮೇಲೆ ನಿಂತು ಸ್ಥಳ ಪರಿಶೀಲನೆ ಮಾಡಿದರ ವಿಡಿಯೋ ವೈರಲ್ ಆಗಿದ್ದು, ಈ ದೃಶ್ಯ ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ ಎಂದು ಜನ ರಾಹುಲ್ ಗಾಂಧಿಯನ್ನು ಕೊಂಡಾಡಿದ್ದಾರೆ.

ಅಲ್ಲದೆ ಜನ ರಾಹುಲ್ ಗಾಂಧಿ ಅವರನ್ನು ರಿಯಲ್ ಹೀರೋ ಎಂದು ಬರೆದು ಕೂಡ ವಿಡಿಯೋ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಕರ್ನಾಟಕದ ಕೊಡಗು ಅಪಾಯದಲ್ಲಿದ್ದರೂ ಸ್ಥಳಕ್ಕೆ ಭೇಟಿ ನೀಡದೆ ಜನನಾಯಕರು ಕುರಿ ಮಾಂಸವನ್ನು ನಾಯಿ ಮಾಂಸ ಎಂದು ಹೇಳಿಕೊಂಡು ಕುಳಿತಿದ್ದಾರೆ ಎಂದು ಟೀಕಿಸಿದ್ದಾರೆ.
ಮಾಜಿ ಸಂಸದರಾದರೂ ವಯನಾಡಿಗೆ ಹೋಗಿ ಅಲ್ಲಿನ ಜನರ ಸೇವೆ ಮಾಡುತ್ತಾ, ಜನರ ಸಂಕಷ್ಟಕ್ಕೆ ಮಿಡಿಯುತ್ತಿದ್ದಾರೆ ರಾಹುಲ್ ಗಾಂಧಿ.. ಇಲ್ಲೊಬ್ಬ ಮಾಜಿ ಸಂಸದ ತನ್ನ ಕ್ಷೇತ್ರವಾಗಿದ್ದ ವಯನಾಡಿನ ಪಕ್ಕದ ಕೊಡಗು ಅಪಾಯದಲ್ಲಿದರೂ, ಕುರಿ ಮಾಂಸವನ್ನು ನಾಯಿ ಮಾಂಸವೆಂದು ಹೇಳುತ್ತಾ ಧಮ್ಕಿ ಹಾಕ್ಕೊಂಡು ತಿರುಗುತ್ತಿದ್ದಾನೆ. #RahulGandhi pic.twitter.com/AV4DjkmlWi
— DEEPU GOWDRU (@DEEPUVAJRAMUNI) August 1, 2024
ವಯನಾಡು ಭೂಕುಸಿತ ದುರಂತ
ಜುಲೈ 30 ರಂದು ಕೇರಳದ ವಯನಾಡ್ ಜಿಲ್ಲೆಯಲ್ಲಿ ಯಾರೂ ಊಹಿಸದ ರೀತಿಯಲ್ಲಿ ಭೂಕುಸಿತ ಸಂಭವಿಸಿದೆ. ದೊಡ್ಡ ಪ್ರಮಾಣದಲ್ಲಿ ಸಾವು-ನೋವುಗಳು ಸಂಭವಿಸಿವೆ. ಆ ಪ್ರದೇಶದಲ್ಲಿ ಮನೆಗಳಲ್ಲಿ ಮುಕ್ಕಾಲು ಭಾಗಕ್ಕೂ ಹೆಚ್ಚು ಮನೆಗಳು ಅವಶೇಷಗಳಡಿ ಹೂತು ಹೋಗಿವೆ. ಈ ದುರತದಲ್ಲಿ 200ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ನೂರಕ್ಕೂ ಹೆಚ್ಚು ಜನ ಗಾಯಗೊಂಡು ನೂರಾರು ಜನ ನಿರಾಶ್ರಿತರಾಗಿದ್ದಾರೆ.
ON Duty Rahul Gandhi 🔥
— RK (@solanki05495902) August 1, 2024
मोदी कोई तस्वीर ऐसी नहीं होगी#RahulGandhi #Reservation pic.twitter.com/5UzxLmKG5x
ಘಟನೆ ಬೆನ್ನಲ್ಲೆ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಎರಡು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಇದಲ್ಲದೇ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ರಾಜಕಾರಣಿಗಳು, ಗಣ್ಯ ವ್ಯಕ್ತಿಗಳು ಸಹಾಯಕ್ಕಾಗಿ ಮುಂದೆ ಬಂದಿದ್ದಾರೆ.
अपने लोगों के साथ हर मुश्किल में खड़े हैं।#Wayanad #RahulGandhi pic.twitter.com/jguaa96RMj
— Imran Pratapgarhi (@ShayarImran) August 1, 2024
ಈಗಾಗಲೇ ಸೈನ್ಯವು ಕೋಝಿಕ್ಕೋಡ್‌ನಲ್ಲಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಅನ್ನು ಸ್ಫಾಪಿಸಿದೆ ಎಂದು ಪಿಟಿಐ ವರದಿ ಮಾಡಿದೆ. ರಕ್ಷಣಾ ಕಾರ್ಯಚರಣೆಗೆ ಕನಿಷ್ಠ 1500 ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮುಂದಿನ ಎರಡು ದಿನಗಳಲ್ಲಿ ವಯನಾಡ್ ಮತ್ತು ಇತರ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಡುಕ್ಕಿ ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಮದು ರೆಡ್ ಅಲರ್ಟ್ ಘೋಷಿಸಲಾಗಿದೆ.












Click it and Unblock the Notifications