ನಿದ್ದೆ ಮಾಡಿದ ರಾಹುಲ್‌ಗೆ ಗುದ್ದು ನೀಡಿದ ಟ್ವಿಟ್ಟರ್

By: ಮಪ
Subscribe to Oneindia Kannada

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ
ನನ್ನ ತಮ್ಮ ಮ೦ಕುತಿಮ್ಮ
ತೂಕಡಿಸಿ ತೂಕಡಿಸಿ ಬಿದ್ದರು
ನನ್ನಜ್ಜ ನಿನ್ನಜ್ಜ ಮುತ್ತಜ್ಜ

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ ಗೀತೆ ಕೇಳಿಕೊಂಡು ಬನ್ನಿ

ಸಂಸತ್ ನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ, ಎಲಿಜಿಬಲ್ ಬ್ಯಾಚಲರ್ ರಾಹುಲ್ ಗಾಂಧಿ ಬುಧವಾರ ನಿದ್ದೆಗೆ ಜಾರಿದ್ದನ್ನು ನೋಡಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಪಡುವಾರಹಳ್ಳಿ ಪಾಂಡವರು' ಚಿತ್ರದ ಹಾಡು ನೆನಪಾಯಿತು. ನಮ್ಮ ಸಿದ್ದರಾಮಯ್ಯನರಿಗೆ ಕಂಡಕಂಡಲ್ಲಿ ನಿದ್ದೆ ಮಾಡುವುದು ಹೊಸದೇನೂ ಅಲ್ಲ.[ಸಂಸತ್ ಕಲಾಪದ ವೇಳೆ 'ಧ್ಯಾನಕ್ಕೆ' ಜಾರಿದ ರಾಹುಲ್ ಗಾಂಧಿ]

ದೇವೇಗೌಡರು ಹಾಕಿಕೊಟ್ಟ ನಿದ್ದೆ ಪರಂಪರೆಯನ್ನು ಪಕ್ಷದ ತಾರತಮ್ಯವಿಲ್ಲದೇ ನಡೆಸಿಕೊಂಡು ಬರಲಾಗುತ್ತಿದೆ. ನಿದ್ದೆ ವಿಷಯದಲ್ಲಿ ಬಿಜೆಪಿಯವರು ಸ್ವಲ್ಪ ಸಾಚಾ ಎಂದೇ ಹೇಳಬಹುದು.

rahul

ಗುಜರಾತ್ ನಲ್ಲಿ ನಡೆದಿದ್ದ ದಲಿತರ ಮೇಲೆ ಹಲ್ಲೆ ಪ್ರಕರಣದ ಸಂಬಂಧ ಲೋಕಸಭೆಯಲ್ಲಿ ಗಹನವಾದ ಚರ್ಚೆ ನಡೆಯುತ್ತಿತ್ತು. ಕೇಂದ್ರ ಸಚಿವ ರಾಜ್ ನಾಥ್ ಸಿಂಗ್ ಮಾತನಾಡುತ್ತಿದ್ದ ವೇಳೆ ರಾಹುಲ್ ಗಾಂಧಿ ನಿದ್ದೆಗೆ ಶರಣಾಗಿದ್ದರು. ಆದರೆ ಕಾಂಗ್ರೆಸ್ ಇಲ್ಲಪ್ಪಾ ಇಲ್ಲಾ.. ಇದೆಲ್ಲ ಸುಳ್ಳು ಅವರು "ಧ್ಯಾನ" ಮಾಡುತ್ತಿದ್ದರು ಎಂದು ಹೇಳಿದೆ.

ರಾಹುಲ್ ಏನು ಮಾಡುತ್ತಿದ್ದರು.. ಓಟ್ ಮಾಡಿ

ಆರ್ ಎಸ್ ಎಸ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರವಷ್ಟೇ ರಾಹುಲ್ ಗಾಂಧಿಗೆ ತಪರಾಕಿ ನೀಡಿತ್ತು. ಕೆಲ ದಿನಗಳ ಹಿಂದೆ ರಾಹುಲ್ ಗಾಂಧಿ ಮದುವೆಯಾಗುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ನಂತರ ಅದೂ ಮುರಿದು ಬಿದ್ದಿತ್ತು. ಪಾಪ , ರಾಹುಲ್ ಅವರಿಗೆ ಅದ್ಯಾವ ಚಿಂತೆ ಕಾಡ್ತಾ ಇತ್ತೋ...?[ರಾಹುಲ್ ಗಾಂಧಿಗೆ ಕಂಕಣಭಾಗ್ಯ, ಊರೆಲ್ಲಾ ಗುಲ್ಲೋಗುಲ್ಲು!]

ಅಷ್ಟಕ್ಕೂ ನಿದ್ದೆ ಮಾಡಿದ್ದು ತಪ್ಪು ಎಂದು ವಾದ ಮಂಡಿಸಲು ಸಾಧ್ಯವಿಲ್ಲ, ವ್ಯಕ್ತಿಯ ಖಾಸಗಿ ಹಕ್ಕು ಎಂದೂ ಸುಮ್ಮನಾಗಬಹುದಿತ್ತೇನೋ? ಆದರೆ ಗಹನವಾದ ಚರ್ಚೆ ನಡೆಯುತ್ತಿದ್ದ ಸಂದರ್ಭ ನಿದ್ದೆ ಮಾಡಿದ್ದು ಎಷ್ಟು ಸರಿ? ರಾಹುಲ್ ಎದುರಿಗೆ ಕುಳಿತಿದ್ದ ಖರ್ಗೆ ಸಾಹೇಬರು ಎದ್ದು ನಿಂತು ವಾಗ್ದಾಳಿ ಆರಂಭಿಸಿದಾಗ ರಾಹುಲ್ ನಿದ್ರೆಯಿಂದ ಕಣ್ಣು ಬಿಟ್ಟಿದ್ದರು.

ಟ್ವಿಟ್ಟರ್ ನಲ್ಲಿ ನಾಗರಿಕರು ರಾಹುಲ್ ಅವರನ್ನು ಅವರದ್ದೇ ಆದ ಭಾಷೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮನಸೋ ಇಚ್ಛೆ ಟೀಕಾಸ್ತ್ರ ಪ್ರಯೋಗ ಮಾಡಿದ್ದಾರೆ. ಒಂದೆರಡು ಸ್ಯಾಂಪಲ್ ನೋಡಿಕೊಂಡು ಬನ್ನಿ..

* ಎರಡು ಫೋಟೋಗಳು... ಚಳಿಗಾಲದ ಅಧಿವೇಶನ, ಮಾನ್ಸೂನ್ ಅಧಿವೇಶನ.. ತಜ್ಞರು ಹೇಳುತ್ತಾರೆ ರಾಹುಲ್ ಸುಧಾರಿಸಿದ್ದಾರೆ!

* ಇದು ರಾಹುಲ್ ತಪ್ಪಲ್ಲ. ನಿಮ್ಮ(ಸೋನಿಯಾ ಗಾಂಧಿ) ಯೋಚನೆಗಳನ್ನು ಮಕ್ಕಳ ಮೇಲೆ ಹೇರಬೇಡಿ.

* ರಾಹುಲ್ ಗಾಂಧಿ ಪಕ್ಕ ಸಂಸತ್ ನಲ್ಲಿ ಯಾರು ಕುಳಿತುಕೊಳ್ಳುತ್ತಾರೆ.. ಅವರು ಸಭಾಪತಿಗೆ ರಾಹುಲ್ ಗೊರಕೆ ಸದ್ದಿನ ಬಗ್ಗೆ ದೂರು ನೀಡಿಲ್ಲವೇ?

* ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಇಬ್ಬರ ನಡುವೆ ಸಾಮ್ಯತೆ ಇದೆ!

* ಬೇಬಿ ಕೋ ಬಾಸ್ ಪಸಂದ್ ಹೈ, ಬಾಬಾ ಕೋ ನಾಪ್ ಪಸಂದ್ ಹೈ

* ಇದರಲ್ಲಿ ರಾಹುಲ್ ಅವರ ತಪ್ಪಿಲ್ಲ. ಟ್ರೋಲ್ ಮಾಡಿಸಿಕೊಳ್ಳಲು ಕೇಜ್ರಿವಾಲ್ ಅವರನ್ನು ಹಿಂದಕ್ಕೆ ಹಾಕಿದ್ದಾರೆ ಅಷ್ಟೇ!

* ನಿದ್ದೆ ಮಾಡಿದ್ದಕ್ಕೆ ರಾಹುಲ್ ಅವರನ್ನು ಯಾರೂ ಬೈಯುವಂತಿಲ್ಲ.. ಇದು ಅವರ ಅತ್ಯಮೂಲ್ಯ ಕೊಡುಗೆ..

* ರಾಹುಲ್ ಮಾತನಾಡುವುದಕ್ಕಿಂತ ಚೆನ್ನಾಗಿ ನಿದ್ದೆ ಮಾಡ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress left red-faced once again after its vice president Rahul Gandhi was caught taking a nap in Parliament on Wednesday. As per images doing rounds on the social-networking sites, Congress scion was seen sitting with his hands on his forehead. Here are some the funny tweets about Rahul Gandhi napping.
Please Wait while comments are loading...