• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾನಸ ಸರೋವರ ಕಂಡು ಟ್ವೀಟ್ ಮಾಡಿದ ರಾಹುಲ್, ಕಾಲೆಳೆದ ಬಿಜೆಪಿ

By Mahesh
|

ನವದೆಹಲಿ, ಸೆಪ್ಟೆಂಬರ್ 06: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಾವು ಪ್ರವಾಸ ಕೈಗೊಂಡ ತಾಣಗಳ ಬಗ್ಗೆ ಫೋಟೋ ಸಮೇತ ಟ್ವೀಟ್ ಮಾಡುವುದು ಮಾಮೂಲಿ. ಸದ್ಯ ಕೈಲಾಸ ಮಾನಸ ಸರೋವರದ ಯಾತ್ರಿಯಾಗಿರುವ ರಾಹುಲ್ ಅವರು, ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿ, ಟ್ವೀಟ್ ಮಾಡಿದ್ದಾರೆ.

ರಾಹುಲ್ ಅವರು ಮಾಡಿರುವ ಟ್ವೀಟ್ ಚಿತ್ರ ಸದ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಗೀಡಾಗಿದೆ. 'ಇಲ್ಲಿ ಯಾವುದೇ ದ್ವೇಷದ ವಾತಾವರಣ ಇಲ್ಲ' ಎಂದು ಟ್ವೀಟ್ ಮಾಡಿರುವ ಚಿತ್ರಗಳೆಲ್ಲವೂ ಇಂಟರ್ನೆಟ್ ನಿಂದ ಕದ್ದಿರುವ ಚಿತ್ರಗಳು ಎಂದು ಬಿಜೆಪಿ ಮುಖಂಡರು ಆಕ್ಷೇಪಿಸಿ, ಟ್ವೀಟ್ ಮಾಡಿದ್ದಾರೆ.

ಮಾನಸ ಸರೋವರ ಯಾತ್ರೆಗೆ ರಾಹುಲ್ ರನ್ನು ಕರೆಸಿಕೊಂಡಿದ್ದು ಯಾರು?!

ಇಲ್ಲ ಇವೆಲ್ಲವು ಮಾನಸ ಸರೋವರದಲ್ಲಿ ರಾಹುಲ್ ಅವರು ಇಂದು ತೆಗೆದ ಚಿತ್ರಗಳೇ, ಎಂದು ಕಾಂಗ್ರೆಸ್ ವಾದಿಸುತ್ತಿದೆ. ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಇಷ್ಟವಿದ್ದವರು ಈ ಬಗ್ಗೆ ಪರಿಶೀಲಿಸಬಹುದು. ಸದ್ಯಕ್ಕೆ ಬಿಜೆಪಿ ಮುಖಂಡ ಸರಣಿ ಟ್ವೀಟ್ ಗಳನ್ನು ಇಲ್ಲಿ ಓದಬಹುದು.

ಆಗಸ್ಟ್ 31ರಂದು ಕೈಲಾಸ ಮಾನಸಸರೋವರ ಯಾತ್ರೆ ಕೈಗೊಂಡ ರಾಹುಲ್ ಅವರು 12 ದಿನಗಳ ಕಾಲ ಕಾಲ್ನಡಿಗೆಯಲ್ಲೆ ಹೆಚ್ಚಿನ ತಾಣಗಳಿಗೆ ಭೇಟಿ ನೀಡುತ್ತಾರೆ ಎಂಬ ಸುದ್ದಿಯಿದೆ.

ರಾಕ್ಷಸ್ ತಲ್ ಸರೋವರ ನೋಡಿ ಮಾರುಹೋದ ರಾಹುಲ್

ರಾಕ್ಷಸ್ ತಲ್ ಸರೋವರ ನೋಡಿ ಮಾರುಹೋದ ರಾಹುಲ್ ಅವರು ಟ್ವೀಟ್ ಮಾಡಿದ್ದಾರೆ. ಇಲ್ಲಿ ಯಾವುದೇ ದ್ವೇಷವಿಲ್ಲ ಯಾರು ಬೇಕಾದರೂ ನೀರು ಕುಡಿಯಬಹುದು ಎಂದಿದ್ದಾರೆ.

ಕೈಲಾಸ ಪರ್ವತ ನನ್ನನ್ನು ಕರೆಸಿಕೊಂಡಿತು

"ಒಬ್ಬ ಮನುಷ್ಯ ಕೈಲಾಸ ಪರ್ವತಕ್ಕೆ ಹೋಗಬೇಕೆಂದರೆ, ಕೈಲಾಸ ಪರ್ವತವೇ ಆತನನ್ನು ಕರೆಸಿಕೊಳ್ಳುತ್ತದೆ. ನನಗೂ ಇಂಥ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಈ ಸುಂದರ ಯಾತ್ರೆಯ ನನ್ನ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.

ಪರಮಶಿವನನ್ನು ಇದು ಎಂಬ ಸಂಬೋಧಿಸಿದ್ರಾ?

ರಾಹುಲ್ ಗಾಂಧಿ ಅವರು ಕೈಲಾಸ ಪರ್ವತಕ್ಕೆ It ಎಂಬ ಪದ ಬಳಸಿದ್ದರು. ಆದರೆ, ಇದಕ್ಕೆ ಆಕ್ಷೇಪಿಸಿದ ಬಿಜೆಪಿ ಮುಖಂಡ ಅಮಿತ್, ಪರಮ ಶಿವನನ್ನು ಅದು ಇದು ಎಂದು ಸಂಬೋಧಿಸಿದ್ರಾ? ಪವಿತ್ರ ಸ್ಥಳವನ್ನು ಟ್ರೆಕ್ಕಿಂಗ್ ತಾಣ ಎಂದು ತಿಳಿದಿದ್ದೀರಾ. ಧಾರ್ಮಿಕ ಭಾವನೆಗೆ ಧಕ್ಕೆ ತರಬೇಡಿ ಎಂದು ಪ್ರತಿಕ್ರಿಯಿಸಿದ್ದಾರೆ.

ನಿಮ್ಮ ಫೋಟೋ ಹಾಕಿ ಮೊದಲು

ನಿಮ್ಮ ಫೋಟೋ ಹಾಕಿ ಮೊದಲು, ಇವೆಲ್ಲವೂ ಇಂಟರ್ನೆಟ್ ನಲ್ಲೇ ಇದೆ ನಾವು ನೋಡಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆ

ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆ ಪ್ರೀತಿ ಗಾಂಧಿ ಅವರು ಟ್ವೀಟ್ ಮಾಡಿ, ರಾಹುಲ್ ಅವರು ಟ್ವೀಟ್ ಮಾಡಿದ ಚಿತ್ರಗಳು ನಕಲಿ ಎಂದಿದ್ದಾರೆ. ಗೂಗಲ್ ನಿಂದ ಚಿತ್ರಗಳನ್ನು ಎತ್ತಿ ಹಾಕಿದ್ದಾರೆ ಎಂದು ವಾದಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress president Rahul Gandhi today shared pictures of Mansarovar lake during his Kailash Yatra, commenting that "there is no hatred here". BJP leader claims photos shared by Rahul are fake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more